ಕನ್ನಡ ರಂಗಭೂಮಿಗೆ ಜಿಲ್ಲೆಯ ಕೊಡುಗೆ ಅಪಾರ: ಸಂತೋಷ ಬಂಡೆ
The district's contribution to Kannada theater is immense: Santhosh Bande
ಇಂಡಿ 08: ವಿಜಯಪುರ ಜಿಲ್ಲೆ ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ನಾಟಕ ಕಂಪನಿಗಳ ಮೂಲಕ ರಂಗ ಸಂಸ್ಕೃತಿಯನ್ನು ಎಲ್ಲೆಡೆ ಬೆಳಗಿಸಿದ ಹಂದಿಗನೂರು ಸಿದ್ರಾಮಪ್ಪ, ಉಮರ್ಜಿ ಮಧ್ವರಾಜ, ಕಂದಗಲ್ ಹನುಮಂತರಾಯ್, ಚಿತ್ತರಗಿ ಗಂಗಾಧರ ಶಾಸ್ತ್ರಿ, ಕೆ.ಎಮ್.ಸಾಳುಂಕೆ, ಎಲ್.ಎಸ್.ಇನಾಮದಾರ, ಯಂಕಂಚಿ ಜಟ್ಟೆಪ್ಪ, ಟಿ.ಕೆ.ಮಹ್ಮದಲಿ, ರಂಗಭೂಮಿಯ ಗಂಡುಗಲಿ ಶ್ರೀರಂಗ ಇಂತಹ ಹತ್ತಾರು ರಂಗಸ್ಪೂರ್ತಿಗಳು ರಾರಾಜಿಸುತ್ತವೆ. ಇಂತಹವರ ಸಾಲಿನಲ್ಲಿ ರಂಗಭೂಮಿಯ ಭೀಮ ಸರ್ದಾರ್ ಎಸ್.ಎಮ್. ಖೇಡಗಿ ಅವರು ಒಬ್ಬರು ಎಂದು ಇಂಡಿಯ ಭೀಮಾಂತರಂಗ ಸಾಹಿತ್ಯಿಕ ಸಾಂಸ್ಕೃತಿಕ ಜಗಲಿಕೇಂದ್ರದ ವತಿಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ಶಿಕ್ಷಕ, ಸಾಹಿತಿ, ಬರಹಗಾರ ಸಂತೋಷ ಬಂಡೆ ತಮ್ಮ ಉಪನ್ಯಾಸದಲ್ಲಿ ಹೇಳಿದರು.
ಇಂಡಿ ತಾಲ್ಲೂಕಿನ ಖೇಡಗಿಯಲ್ಲಿ ಜನಿಸಿ ಮುಂದೊಮ್ಮೆ ಸೃಜನಶೀಲ ನಾಟಕಕಾರ, ನಟ, ಹಾಗೂ ನಿರ್ದೇಶಕರಾಗಿ ತಮ್ಮದೇ ತೇಜಸ್ಸನ್ನು ಎಲ್ಲೆಡೆ ಪಸರಿಸಿದ್ದಾರೆ ಎಂದು ತಿಳಿಸಿದರು. ಪುಣೆಯಲ್ಲಿದ್ದು ಮರಾಠಿಯಲ್ಲಿ ಓದು ಬರಹವಾದರು ಕನ್ನಡದ ಬಗೆಗಿನ ಅವರ ಪ್ರೀತಿ ಅಪಾರ. ಮರಾಠಿ ಸಾಹಿತ್ಯ, ರಂಗಸಾಹಿತಿಗಳ ಪ್ರಭಾವದಿಂದ ಕನ್ನಡದಲ್ಲೂ ನಾಟಕ ರಚನೆಗೆ ಮುಂದಾಗುತ್ತಾರೆ. ಅನಕೃ, ತರಾಸು, ಬೀಚಿ, ಬೇಂದ್ರೆ, ಕಾರಂತ, ಕುವೆಂಪು, ಮಧುರಚೆನ್ನರ ಸಾಹಿತ್ಯವನ್ನು ಅದ್ಯಯನ ಮಾಡಿ ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸುತ್ತಾರೆ. ಎಂದು ತಿಳಿಸಿದರು. ಇಂದಿಗೂ ಅವರ ಮನೆಯನ್ನು ರಂಗಚೇತನವನ್ನಾಗಿಸಿ ರಂಗಭೂಮಿಯ ಆಸಕ್ತರಿಗೆ ಪ್ರೇರಣೆ ನೀಡುತ್ತಿದ್ದಾರೆ. ವಿಜಯಪುರದ ಬಸ್ ನಿಲ್ದಾಣದ ಹತ್ತಿರದ ಇವರ ನಟರಾಜ ಪುಸ್ತಕಾಲಯದಲ್ಲಿ ಸಾವಿರಾರು ನಾಟಕಗಳ ಸಂಗ್ರಹವನ್ನು ಕಾಣಬಹುದು ಎಂದು ತಮ್ಮ ತಿಳಿಸಿದರು.
ಇಂಡಿಯ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಅವರು ಸಮಾರೋಪ ಭಾಷಣದಲ್ಲಿ ಮಾತನಾಡಿ ಎಸ.ಎಮ್.ಖೇಡಗಿ ಅವರು ಅತ್ಯುನ್ನತ ಪ್ರತಿಭೆ ಶ್ರೀರಂಗರ ಸಾಲಿನಲ್ಲಿ ನಿಲ್ಲುವ ರಂಗಕರ್ಮಿ ಎಂದು ಬಣ್ಣಿಸಿದರು.
ಇಂಡಿಯ ಸಾಹಿತಿ ಗೀತಯೋಗಿ, ಭೀಮಾಂತರಂಗ ಸಾಹಿತ್ಯಿಕ ವೇದಿಕೆಯ ಸಂಸ್ಥಾಪಕ, ಶಿಕ್ಷಕ, ಸಾಹಿತಿ ಸಿ.ಎಮ್.ಬಂಡಗಾರ್, ವಾಯ್.ಜಿ.ಬಿರಾದರ, ಎಮ್.ಸಿ.ಅಕ್ಕಿ, ರಮೇಶ ಮುಂಜಣ್ಣಿ, ಎಸ್.ಎಮ್.ಖೇಡಗಿ ಅವರ ಕುಟುಂಬ ಇಂಡಿಯ ಶಿಕ್ಷಕ ಸಾಹಿತಗಳು ಮತ್ತಿತರು ಉಪಸ್ಥಿತರಿದ್ದರು. ಸರೋಜಿನಿ ಮಾವಿನಮರ ಪ್ರಾರ್ಥಿಸಿದರು, ಶಿಕ್ಷಕ ಶ್ರೀಧರ ಹಿಪ್ಪರಗಿ ಸ್ವಾಗತಿಸಿದರು. ಬಿ.ಸಿ.ಭಗವಂತಗೌಡರ ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 