ದಿ. 20ರಂದು ಬೆಳಗಾವಿಯಲ್ಲಿ ಶೋಷಿತರ ಸಂಘರ್ಷ ದಿನಾಚರಣೆ
ಚಿಕ್ಕೋಡಿ, 16; ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ವಾದ) ಜಿಲ್ಲಾ ಸಮಿತಿಯಿಂದ ಗುರುವಾರ ದಿ.20 ರಂದು ಬೆಳಗಾವಿಯ ಚನ್ನಮ್ಮ ಸರ್ಕಲ ಬಳಿ ಡಾ,ಬಾಬಾಸಾಹೇಬ ಅಮಬೇಡ್ಕರ ಉದ್ಯಾನದಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಖಜಾಂಚಿ ಸಿದ್ದಪ್ಪ ಕಾಂಬಳೆ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಚೌದಾರ ಕೆರೆಯ ಸತ್ಯಾಗ್ರಹದ ನೆನಪಿನಲ್ಲಿ ಇಡೀ ರಾಜ್ಯದಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಮಸ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್‌ಪಿ ರವೀಂದ್ರ ಗಡಾದಿ ಅಗಮೀಸಲಿದ್ದಾರೆ. ಯುವ ಭಾಷಣಕಾರರಾಗಿ ಸಮಾಜ ಚಿಂತಕರಾದ ಭೀಮಪುತ್ರ ಬಿ.ಸಂತೋಷ ಮತ್ತು ಕೊಲ್ಲಾಪೂರದ ಶಿವಾಜಿ ವಿದ್ಯಾಪೀಠದ ನಿವೃತ್ತ ಉಪನ್ಯಾಸಕ ಪ್ರೊ.ಡಿ.ಶ್ರೀಕಾಂತ ಆಗಮೀಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸಿದ್ದಪ್ಪ ಕಾಂಬಳೆ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷರಾದ ಮಹಾಂತೇಶ ತಳವಾರ, ಜಿಲ್ಲಾ ಸಂಘಟನಾ ಸಂಚಾಲಕ ಆರ್.ಜಿ.ಕಾಂಬಳೆ, ಶಶಿ ಸಾಳವೆ, ನಾಗೇಶ ಕಾಮಶೆಟ್ಟಿ, ಮನೋಹರ ಅಜ್ಜಣಕಟ್ಟಿ ಆಗಮೀಸಲಿದ್ದಾರೆ. ಸಮಾಜ ಸೇವಕರಾದ ಮಲ್ಲೇಶ ಚೌಗಲೆ, ಭಾಹುರಾವ ಗಡಕರಿ, ಆನಂದ ಸದರಿಮಣಿ ಅತಿಥಿಗಳಾಗಿ ಆಗಮೀಸಲಿದ್ದಾರೆ ಎಂದರು. ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ನಾಗೇಶ ಕಾಮಶೆಟ್ಟಿ, ಅಪ್ಪಾಸಾಹೇಬ ಮೆಲಗಿರಿ, ಬಸವರಾಜ ಢಾಕೆ, ಅಶೋಕ ಕಾಂಬಳೆ, ಕಲ್ಲಪ್ಪ ಗೌಲತ್ತಿನವರ, ಅಶೋಕ ಲಾಕೆ, ಸಮಾಜ ಸೇವಕಿ ಡಾ,ರೋಹಿಣಿ ದಿಕ್ಷಿತ, ಅಪ್ಪಾಸಾಹೇಬ ಕುರಣಿ, ಶಶಿಕಾಂತ ಫಕೀರೆ, ರೇಖಾಬಾಯಿ ಕಾಂಬಳೆ, ಬಾಬುರಾವ ಘಟ್ಟಿ, ಪರಶುರಾಮ ದರ್ಜೆ ಮುಂತಾದವರು ಇದ್ದರು.