ಧಾರವಾಡ 01: ಇಂದು ಜಗತ್ತಿನಾದ್ಯಂತ ಡಿಜಿಟಲ್ ತಂತ್ರಜ್ಞಾನವು ಅದ್ಭುತವಾದ ಕಾರ್ಯ ನಿರ್ವಹಿಸುತ್ತಿದೆ. ಜಗತ್ತಿನಾದ್ಯಂತ ವಾಟ್ಸಪ್, ಫೇಸಬುಕ್, ಜಿ ಮೇಲ್ ಖಾತೆಗಳನ್ನು ಹೊಂದುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭವಿಷತ್ತಿನಲ್ಲಿ ಮನೆಯಲ್ಲಿಯೇ ಕುಳಿತು ಒಔಔಅ ನಂತಹ ಆನಲೈನ ಕೋರ್ಸಗಳ ಮೂಲಕ ಉನ್ನತ ಶಿಕ್ಷಣ ಪಡೆಯಬಹುದಾಗಿದೆ ಎಂದು ಬೆಂಗಳೂರು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದಶರ್ಿ ಡಾ.ಎಮ್.ಎನ್ ವಿದ್ಯಾಶಂಕರ ಹೇಳಿದರು.
ಅವರು ಇಲ್ಲಿನ ಉನ್ನತ ಶಿಕ್ಷಣ ಅಕಾಡೆಮಿಯ ಗಣಕ ವಿಜ್ಞಾನ ವಿಷಯದ 21 ದಿನಗಳ ಸಹಾಯಕ ಪ್ರಾಧ್ಯಾಪಕರುಗಳಿಗೆ ವೃತ್ತಿ ಬುನಾದಿ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾತಾಡಿದರು.
ಉನ್ನತ ಶಿಕ್ಷಣ ಅಕಾಡೆಮಿಯ ನಿದರ್ೇಶಕ ಪ್ರೊ.ಎಸ್.ಎಂ. ಶಿವಪ್ರಸಾದ ಅವರು ಮಾತನಾಡಿ ಯಾವುದೇ ತಂತ್ರಜ್ಞಾನವು ಮನುಷ್ಯನನ್ನು/ ಶಿಕ್ಷಕರನ್ನು ಬದಲಾಯಿಸಲಾರದು. ಯಾಕೆಂದರೆ ಮನುಷ್ಯನಿಗೆ ಭಾವನಾತ್ಮಕ ಸಂಬಂಧವಿರವುದರಿಂದ ಸಾಮಾಜಿಕ ಸಮಸ್ಯೆಗಳನ್ನು ಬಗೆ ಹರಿಸಲು ಮನುಷ್ಯನ/ ಶಿಕ್ಷಕನ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಕಾರ್ಯವು ಶಿಕ್ಷಕರಿಂದ ಮಾತ್ರ ಸಾಧ್ಯ. ಅಂತಹ ಸದೃಢ ಶಿಕ್ಷಕರನ್ನು ನಿಮರ್ಿಸುವ ಗುರುತರವಾದ ಜವಾಬ್ದಾರಿ ಉನ್ನತ ಶಿಕ್ಷಣ ಅಕಾಡೆಮಿಯದಾಗಿದೆ ಎಂದು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಡಾ.ಎಚ್. ಬಿ.ನೀಲಗುಂದ ಸ್ವಾಗತಿಸಿ, ನಿರೂಪಿಸಿದರು. ಅಕಾಡೆಮಿಯ ಡೀನರಾದ ಡಾ.ಎ.ಆರ್.ಜಗತಾಪ ವಂದಿಸಿದರು. ಡಾ.ಆಯ್.ಬಿ.ಸಾತೀಹಾಳ, ಡಾ.ಅರುಂಧತಿ ಕುಲಕಣರ್ಿ, ಗ್ರಂಥಪಾಲಕ ಡಾ.ಮಲ್ಲಿಕಾಜರ್ುನ ಮೂಲಿಮನಿ ಹಾಗೂ ಅಕಾಡೆಮಿಯ ಸಿಬ್ಬಂದಿ ಹಾಜರಿದ್ದರು.