ಸರಕಾರಿ ಮಹಿಳಾ ಕಾಲೇಜಿನಲ್ಲಿ ಚೆಸ್ ಪಂದ್ಯಾವಳಿಗಳ ಸಮಾರೋಪ

ಲೋಕದರ್ಶನ ವರದಿ

ಕೊಪ್ಪಳ 26: ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಚೆಸ್ ತಂಡದ ಆಯ್ಕೆಯು, ಅಗಷ್ಟ 24ರಂದು ಕೊಪ್ಪಳದ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನಲ್ಲಿ ಜರುಗಿತು, ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 70 ಕ್ರೀಡಾ ಪಟುಗಳು ಆಯ್ಕೆಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ದಿನಾಂಕ 24ರಂದು ನಡೆದ ಮುಕ್ತಾಯ ಸಮಾರಂಭವನ್ನು ಮಾರುತೇಶ ವಾಣಿಜ್ಯಶಾಸ್ರ್ತ ಸಹಾಯಕ ಪ್ರಾದ್ಯಾಪಕರು ಸರಕಾರಿ ಪ್ರಥಮ ದಜರ್ೆ ಕಾಲೇಜು ಕೊಪ್ಪಳ ಇವರು ಉದ್ಘಾಟನೆ ಮಾಡಿದರು. ಪ್ರಥಮ ಸ್ಥಾನವನ್ನು ಪಡೆದ ಎಸ್.ಜೆ.ಎಂ.ವಿ.ಎಸ್.ಮಹಿಳಾ ಕಾಲೇಜು ಹುಬ್ಬಳ್ಳಿ ಹಾಗೂ ದಿತೀಯ ಬಹುಮಾನವನ್ನು ಪಡೆದ ಗೋದುತಾಯಿ ಮಹಿಳಾ ಮಹಾವಿದ್ಯಾಲಯ ಕಲಬುಗರ್ಿ ಇವರಿಗೆ ಬಹುಮಾನವನ್ನು ವಿತರಿಸಿ ವಿದ್ಯಾಥರ್ಿಗಳು ಕ್ರೀಡೆಯನ್ನು ಆಡುವುದರಿಂದ ಮಾನಸಿಕವಾಗಿ ಸದೃಢರಾಗುತ್ತಾರೆ ಇದರಿಂದ ಸದೃಢದೇಶವನ್ನು ಕಟ್ಟಬಹುದು ಎಂದು ಹೇಳಿದರು. 

ಮುಖ್ಯ ಅಥಿತಿಗಳಾಗಿ ಆಗಮಿಸಿದ ನಟರಾಜ ಪಾಟೀಲ್, ವಾಣಿಜ್ಯಶಾಸ್ರ್ತ ಸಹಾಯಕ ಪ್ರಾದ್ಯಾಪಕರು ಸರಕಾರಿ ಪ್ರಥಮ ದಜರ್ೆ ಕಾಲೇಜು ಕೊಪ್ಪಳ ಇವರು ಮಾತನಾಡುತ್ತಾ ವಿದ್ಯಾಥರ್ಿನೀಯರಿಗೆ ಚಸ್ ಕ್ರೀಡೆಯು ಏಕಾಗ್ರತೆಯಿಂದ ಇರುವಂತೆ ಮಾಡುತ್ತದೆ ಇದು ನಿಮ್ಮ ಶೈಕ್ಷಣಿಕ ಬೆಕವಣಿಗೆಗೂ ಸಹಾಯಕಾರಿ ಆಗುತ್ತದೆ ಎಂದು ಹೇಳಿದರು. 

ಕಾಲೇಜಿನ ಪ್ರಾಶುಪಾಲರಾದ ಡಾ. ಗಣಪತಿ ಕೆ ಲಮಾಣಿ ಇವರು ಅಧ್ಯಕ್ಷೀಯ ನುಡಿಗಳಾಗಿ ನಮ್ಮ ಕಾಲೇಜು ಪ್ರತಿ ವರ್ಷ ಅಂತರ್ ಕಾಲೇಜು ಸ್ಪದರ್ೆಗಳನ್ನು ಆಯೋಜಿಸುತ್ತಿರುವುದು ನಮಗೆ ಮತ್ತು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಆದಕಾರಣ ಮಹಿಳಾ ಕ್ರೀಡಾ ಪಟುಗಳು ನಮ್ಮ ಕಾಲೇಜಿಗೆ ಬಂದು ಇಲ್ಲಿ ಉಳಿದುಕೊಳ್ಳವುದರಿಂದ ಅವರಿಗೆ ತಂಗಲು ಅನುಕೂಲವಾಗುವಂತೆ ನಮ್ಮ ಕಾಲೇಜಿನ ಕ್ರೀಡಾ ವಿಭಾಗಕ್ಕೆ ಹೊಂದಿಕೊಂಡಂತೆ ಒಂದು ಕೊಟ್ಟಡಿಯನ್ನು ನಿಮರ್ಿಸಿಕೊಡುವುದಾಗಿ ಭರವಸೆನೀಡಿದರು. ನಂತರ ವಿಜೇತ ತಂಡಗಳಿಗೆ ಶುಭಕೋರಿದರು. ಡಾ. ಪ್ರದೀಪ್ ಕುಮಾರ್ ಯು, ದೈಹಿಕ ಶಿಕ್ಷಣ ಬೋಧಕರು, ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಮಿ ವಿವೇಕಾನಂದಾರು ಹೇಳಿರುವಂತೆ ಉಲ್ಲಾಸದ ಮುಖ ಹಾಗೂ ಉತ್ಸಾಹದ ಹೃದಯ ನಿಮಗೆ ಕೇವಲ ಕ್ರೀಡೆಯಿಂದ ಮಾತ್ರ ದೊರೆಯುತ್ತದೆ ಎಂದು ಹೇಳಿ ಪ್ರತಿಯೊಬ್ಬ ವಿದ್ಯಾಥರ್ಿನಿಯು ತಮಗೆ ಇಷ್ಟವಾದ ಒಂದು ಕ್ರೀಡೆಯನ್ನು ಅಬ್ಯಾಸಮಾಡಿ ಪ್ರತೀದಿನವು ಆಡಬೇಕು ಇದರಿಂದ ನೀವು ಯಾವಾಗಲೂ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ ಎಂದರು. 

ಚಸ್ ಆರ್ಬಿಟರ್ಗಳಾಗಿ ಆಗಮಿಸಿದ ಅನೀಲ್ ಕೋಲಾರ್ ಹಾಗೂ ಹುಂಬಿ ಸುಮಿತ್ರಾ ಎಸ ವಿ. ಸ್ಕೌಟ್ ಮತ್ತು ಗೈಡ್ಸ್ ಸಂಚಾಲರು ಇವರು ಸ್ವಾಗತಿಸಿದರು, ಮಹಂತೇಶ್ ಮುಧೋಳ್ ವಾಣಿಜ್ಯಶಾಸ್ರ್ತ ಸಹಾಯಕ ಪ್ರಾಧ್ಯಾಪಕರು ಇವರು ನಿರೂಪಿಸಿದರು ಹಾಗೂ ಡಾ. ಹುಲಿಗೆಮ್ಮ ಬಿ ಇವರು ವಂದಿಸಿದರು. ಕಾಲೇಜಿನ ಎಲ್ಲಾ ಬೋಧಕ ಸಿಬ್ಬಂದಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾಥರ್ಿನೀಯರು ಹಾಜರಿದ್ದರು.