ಭಗವಾನ ಗೌತಮ ಬುದ್ಧರ 2563ನೇ ಜಯಂತಿ ಆಚರಣೆ

ಧಾರವಾಡ 17 : ಭಗವಾನ ಗೌತಮ ಬುದ್ಧರ 2563ನೇ ಜಯಂತಿ ಆಚರಣೆಯನ್ನು ಧಾರವಾಡದ ಗಣಕರಂಗ ಮತ್ತು ಪಾಲಿ ಬುದ್ಧಿಷ್ಟ ಶಿಕ್ಷಣ ಮತ್ತು ಸಂಶೋಧನ ಟ್ರಸ್ಟ್ ಸಂಯುಕ್ತವಾಗಿ ಧಾರವಾಡದ ಕಣರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ನಾಳೆ ದಿನಾಂಕ : 18-05-2019ರಂದು ಬೆಳಿಗ್ಗೆ 10ಗಂಟೆಗೆ ಹಮ್ಮಿಕೊಂಡಿವೆ.. ಕಾರ್ಯಕ್ರಮದ ಸಾನಿಧ್ಯವನ್ನು ಪಾಲಿ ಭಾಷೆಯ ವಿದ್ವಾಂಸ ಗೌರವಾನ್ವಿತ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ ವಹಿಸಿಕೊಳ್ಳಲಿದ್ದು, ಕನರ್ಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಟಿ.ಎಂ.ಭಾಸ್ಕರ ಅಧ್ಯಕ್ಷತೆ ವಹಿಸಿಕೊಳ್ಳುವರು. ಉದ್ಘಾಟನೆಯನ್ನು ನಿವೃತ್ತ ಡಿವೈಎಸ್ಪಿ ಜಿ.ಆರ್.ಕಾಂಬಳೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಡಾ.ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆಯ ಕಾರ್ಯದಶರ್ಿ ಲಕ್ಷ್ಮಣ ಬಕ್ಕಾಯಿ ಆಗಮಿಸುವರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಸ.ಪ್ರಾಧ್ಯಾಪಕ ಡಾ.ಅರುಣ ಕಲ್ಲೋಳಿಕರ ಉಪಸ್ಥಿತರಿರುವರು. ರಂಗಕಮರ್ಿ ಹಿಪ್ಪರಗಿ ಸಿದ್ಧರಾಮ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೆ ಬುದ್ಧಗೀತ ಗಾಯನವನ್ನು ಕಲಾವಿದರಾದ ಶಿವಾನಂದ ಅಮರಶೆಟ್ಟಿ, ಪ್ರಭು ಕುಂದರಗಿ, ದಾನೇಶ ಬುರುಡಿ ಮತ್ತು ಸಂಗಡಿಗರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಆಹ್ವಾನಿತ ಕವಿಗಳ ಕವಿಗೋಷ್ಟಿ ನಡೆಯಲಿದೆ. ಸರ್ವರಿಗೂ ಸದರಿ ಕಾರ್ಯಕ್ರಮಕ್ಕೆ ಸ್ವಾಗತವಿದೆ ಎಂದು ಪ್ರಕಟಣೆಯಲ್ಲಿ ಸಂಘಟಕರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ 9448224936 ಮತ್ತು 9845109480 ನಂಬರಿಗೆ ಸಂಪಕರ್ಿಸಬಹುದು