ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ರಾಜ್ಯದಲ್ಲಿ ಹೊಸ ತಿರುವು ಪಡೆದ ಬಾಲಕನ ಸಾಧನೆ ಅಪಾರವಾಗಿದೆ

The achievement of the boy who took a new turn in the state along with education and sports is imme

ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ರಾಜ್ಯದಲ್ಲಿ ಹೊಸ ತಿರುವು ಪಡೆದ ಬಾಲಕನ ಸಾಧನೆ ಅಪಾರವಾಗಿದೆ

ವಿಜಯಪುರ  19 ದೇವರ ಹಿಪ್ಪರಗಿ ತಾಲೂಕಿನವರು. ತಂದೆ - ಮಲ್ಲಿಕಾರ್ಜುನ ಮತ್ತು ತಾಯಿ - ನಾಗವೇಣಿ ಇವರ ಮಗನೇ ಅವಿನಾಶ್ ತಳಕೇರಿ.ಶಿಕ್ಷಣ : ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಿದ್ದಾರೆ.ಕುಟುಂಬದ ಸಹಕಾರ : ಅವಿನಾಶ್ ಅವರ ತಂದೆ ವೃತ್ತಿಯಲ್ಲಿ ಶಿಕ್ಷಕರು ಆದರೆ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಮಗನಿಗಿರುವ ಆಸಕ್ತಿ ಹಾಗೂ ಉತ್ಸಾಹವನ್ನು ಅರಿತು ಮಗನ ಮುಂದಿನ ಉಜ್ವಲ ಭವಿಷ್ಯಕ್ಕೆ ಅವರ ತಂದೆ - ತಾಯಿ ಹಾಗೂ ಕುಟುಂಬ ನೀಡಿದ ಪ್ರೋತ್ಸಾಹ, ಬೆಂಬಲ ಇಂದು ಅವರ ಅತ್ಯದ್ಭುತ ಸಾಧನೆಗೆ ಸ್ಫೂರ್ತಿಯಾಗಿದೆ.  

ಚಿಕ್ಕ ವಯಸ್ಸಿನಲ್ಲಿಯೇ ಓದಿನ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಯುವ ಬಾಲಕ ಅವಿನಾಶ್ ಅವರು ಕೋಲಾರ ಜಿಲ್ಲೆಯಲ್ಲಿ ನಡೆದ ಚಕ್ರ ಎಸೆತ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿರುವುದು ಅಚ್ಚರಿಯ ಸಂಗತಿ.ಸಾಧನೆ ಶಿಖರ : ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಯೊಂದು ಹಂತದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಅದೇ ರೀತಿಯಾಗಿ ಮಂಗಳೂರು ಜಿಲ್ಲೆಯ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಬಾಲಕರ ಪ್ರೌಢಶಾಲಾ ವಿಭಾಗದ ಚಕ್ರ ಎಸೆತದಲ್ಲಿ ವಿಜಯಪುರ ಜಿಲ್ಲೆಯಿಂದ ಭಾಗವಹಿಸಿ ಸುಮಾರು 41.47 ಮೀಟರ್ ಎಸೆಯುವ ಮೂಲಕ ಪ್ರಥಮ ಸ್ಥಾನ. 

ರಾಜ್ಯದ ಗುಂಟೂರಿನಲ್ಲಿರುವ ನಾಗಾರ್ಜುನ ಕ್ರೀಡಾಂಗಣದಲ್ಲಿ 7 ರಾಜ್ಯಗಳ ನಡುವೆ ನಡೆದ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್‌ 35 ನೇ ಚಾಂಪಿಯನ್‌ಶಿಪ್ - 2024 ರ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯಿಂದ ಚಕ್ರ ಎಸೆತದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ (48.33 ಮೀ).ಮಕ್ಕಳ ಕನಸುಗಳಿಗೆ ಪಾಲಕರು ಸಹಕರಿಸಿ : ಇಂದಿನ ಯುಗದಲ್ಲಿ ಮಕ್ಕಳು ಅತೀ ಹೆಚ್ಚು ಮೊಬೈಲ್ ಫೋನ್ ಗಳಿಗೆ ಹೊಂದಿಕೊಂಡಿರುವುದನ್ನು ಕಾಣಬಹುದು. ಹೊಸ ಹೊಸ ತಂತ್ರಜ್ಞಾನಗಳ ಬಳಕೆಗಳಿಂದ ಆವಿಷ್ಕಾರಗೊಳ್ಳುತ್ತಿರುವ ನವೀನ ರೀತಿಯ ತಂತ್ರಜ್ಞಾನ ವ್ಯವಸ್ಥೆ ಮಕ್ಕಳಿಗೆ ಅವಶ್ಯಕತೆ ಇದೆ. ಆದರೆ ಅದೇ ಅವರ ದೈನಂದಿನ ಚಟುವಟಿಕೆಯಾಗಬಾರದು ಕಾಲಕ್ಕೆ ತಕ್ಕಂತೆ ಮಕ್ಕಳು ಅವರ ಆಸಕ್ತಿಯನ್ನು ಪಠ್ಯವನ್ನು ಹೊರತುಪಡಿಸಿ ಹೊಸ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯವಾಗಿದೆ.ಮಕ್ಕಳ ಕನಸು, ಆಸಕ್ತಿ, ಪ್ರತಿಭೆ, ದೊಡ್ಡದಿರಲಿ, ಚಿಕ್ಕದಿರಲಿ ಮೊದಲು ಅವರ ಕನಸುಗಳಿಗೆ ಪಾಲಕರು ಪ್ರೋತ್ಸಾಹ ನೀಡಬೇಕು ಅಂದಾಗ ಮಾತ್ರ ಅವರ ಕನಸುಗಳು ಸಾಧನೆಗಳಾಗುತ್ತವೆ.ಕ್ರೀಡಾ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ವಿವಿಧ ಕ್ಷೇತ್ರಗಳಲ್ಲೂ ಕೂಡ ಹಲವಾರು ಅವಕಾಶಗಳು ಒದಗಿಬರುವುದು ಸಹಜ. ಅಂತಹ ಅವಕಾಶಗಳನ್ನು ಪಾಲಕರು ಮಕ್ಕಳಿಗೆ ಒದಗಿಸಿಕೊಡಬೇಕು.ಓದಿನ ಜೊತೆಗೆ ಮಕ್ಕಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕರಿಸಿ ಪ್ರೋತ್ಸಾಹ ನೀಡಬೇಕು. ಅವರಲ್ಲಿರುವ ಪ್ರತಿಭೆಯನ್ನು, ಆಸಕ್ತಿಯನ್ನು ಅರಿತು ಅವರ ಕನಸುಗಳಿಗೆ ಜೊತೆಯಾಗಿ ನಿಲ್ಲಬೇಕು.ಕೊಟ್ಸ್‌ :     1. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಹೊತ್ತ ಅವಿನಾಶ್ ಗೆ ನಾನು ತರಬೇತಿ ಮಾತ್ರ ನೀಡಿದ್ದೇನೆ ಆದರೆ ಅದಕ್ಕೆ ತಕ್ಕಂತೆ ಅವರ ನಿರಂತರ ಪ್ರಯತ್ನ ಹಾಗೂ ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿಯೇ ಮಾಡುತ್ತೇನೆ ಎನ್ನುವ ಅವರ ಛಲವೇ ಇಂದು ಅವರನ್ನು ದೊಡ್ಡ ಮಟ್ಟದಲ್ಲಿ ತಂದು ನಿಲ್ಲಿಸಿದೆ ಎಂದು ಹೇಳಬಹುದು.  

ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸುವೆ. ಅವರ ಈ ಸಾಧನೆಗೆ ಅಭಿನಂದನೆಗಳು. - ಹಾಜಿಲಾಲ್ ಮುಲ್ಲಾಮಾರ್ಗದರ್ಶಕರು, ದೇವರಹಿಪ್ಪರಗಿ2. ರಾಜ್ಯದಾದ್ಯಂತ ನಡೆಯುವ ಪ್ರತಿಯೊಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಇಂದು ರಾಜ್ಯ ಮಟ್ಟದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಇಂದು ನನ್ನ ಮಗ ಅವಿನಾಶ್ ಸಾಧನೆ ನಮ್ಮ ಊರಿನ ಕೀರ್ತಿಯನ್ನು ಹೆಚ್ಚಿಸಿದೆ. ಹಾಗಾಗಿ ಸಂತೋಷಗೊಂಡ ಊರಿನ ಗುರು -ಹಿರಿಯರು, ಶಿಕ್ಷಕ ವೃಂದದವರು, ಊರಿನ ಎಲ್ಲಾ ಜನತೆ ಅವನ ಸಾಧನೆಗೆ ಶುಭಕೋರಿದ್ದಾರೆ.- ಮಲ್ಲಿಕಾರ್ಜುನ ತಳಕೇರಿ ಪ್ರೌಢಶಾಲಾ ಶಿಕ್ಷಕರು, ಪಡಗಾನೂರ 3. ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸುವ ಛಲವಿರುವ ನನ್ನ ಕನಸು ನನಸಾಗುವಲ್ಲಿ ನನ್ನ ಹೆಜ್ಜೆ ಸಾಗಿದೆ.ಅದರೊಂದಿಗೆ ನನ್ನ ಈ ಪುಟ್ಟ ಸಾಧನೆಗೆ ನನ್ನ ಕುಟುಂಬದವರು, ನನ್ನ ತಂದೆ - ತಾಯಿ ಹಾಗೂ ಮಾರ್ಗದರ್ಶಕರು, ಶಿಕ್ಷಕರು ಸ್ಫೂರ್ತಿದಾಯಕರು. ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಉತ್ತಮ ತರಬೇತಿ ನೀಡಿದ ನನ್ನ ಮಾರ್ಗದರ್ಶಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ.