ಫ್ಲೋರಿಡಾ, ಆ 3 ಆ್ಯಂಡ್ರೆ ರಸೆಲ್ ಅವರ ಅನುಪಸ್ಥಿತಿ ಭಾರತದ ವಿರುದ್ಧ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ಗೆ ದೊಡ್ಡ ನಷ್ಟವಾಗಲಿದೆ ಎಂದು ಕಾರ್ಲೊಸ್ ಬ್ರಾಥ್ವೇಟ್ ತಿಳಿಸಿದ್ದಾರೆ.
ಆ್ಯಂಡ್ರೆ ರಸೆಲ್ ಅವರು ತಮ್ಮ ಮೊಣಕಾಲು ಗಾಯದಿಂದ ಸಾಕಷ್ಟು ಹೊಡೆತ ತಿನ್ನುತ್ತಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ ಐಸಿಸಿ ವಿಶ್ವಕಪ್ ಟೂರ್ನಿಯ ವೇಳೆ ಆ್ಯಂಡ್ರೆ ರಸೆಲ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಇನ್ನೂ, ಅವರು ಸಂಪೂರ್ಣ ಚೇತರಿಕೆ ಕಂಡಿಲ್ಲ. ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ರಸೆಲ್ ತೋರಿದ ಪ್ರದರ್ಶನ ವೆಸ್ಟ್ ತಂಡದ ಪರ ಕೂಡ ತೋರಬೇಕು ಎಂಬುದು ನನ್ನ ಉದ್ದೇಶ. ಭಾರತದ ವಿರುದ್ಧ ಟಿ-20 ಸರಣಿ ಆಡುತ್ತಾರೆಂದೇ ಎಲ್ಲರೂ ಬಾವಿಸಿದ್ದರು. ಆದರೆ, ಅವರು ಗಾಯದಿಂದಾಗಿ ಮತ್ತೊಂದು ಹೊಡೆತ ತಿಂದಿದ್ದಾರೆ ಎಂದು ಬ್ರಾಥ್ವೇಟ್ ಹೇಳಿದ್ದಾರೆ.
ರಸೆಲ್ ತಂಡದೊಂದಿಗೆ ಹಾಗೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ಇದ್ದರೆ ಒಬ್ಬ ದೊಡ್ಡ ವ್ಯಕ್ತಿತ್ವದ ವ್ಯಕ್ತಿ ಇದ್ದಂತೆ ಭಾಸವಾಗುತ್ತದೆ. ಅವರ ಅನುಪಸ್ಥಿತಿ ತಂಡದಲ್ಲಿ ಕಾಡುತ್ತಿದೆ. ಅವರು ಮುಂಬರುವ ಟಿ-20 ವಿಶ್ವಕಪ್ ವೇಳೆಗೆ ಸಂಪೂರ್ಣ ಗುಣಮುಖರಾಗಲಿ ಎಂದು ಅವರು ಆಶಿಸಿದರು.
ರಸೆಲ್ ಅವರ ಸ್ಥಾನದಲ್ಲಿ ಜೇಸನ್ ಮೊಹಮ್ಮದ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಇಂದು ಪದಾರ್ಪಣೆ ಮಾಡುತ್ತಿದ್ದಾರೆ. 2018ರ ಜುಲೈನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಪಂದ್ಯವಾಡಿದ್ದರು. ಇವರ ರೀತಿ ಬೇರೆಯಾದರೂ ಬ್ಯಾಟಿಂಗ್ ಮಾಡುವುದು ಅಷ್ಟೊಂದು ಸುಲಭವಲ್ಲ ಎಂದು ಬ್ರಾಥ್ವೇಟ್ ಹೇಳಿದರು.