ಘನತೆಯ ಬದುಕಿಗೆ ಸಂವಿಧಾನವೇ ಕೊಡುಗೆ: ಸಚಿವ ಸತೀಶ್ ಜಾರಕಿಹೊಳಿ

ಘನತೆಯ ಬದುಕಿಗೆ ಸಂವಿಧಾನವೇ ಕೊಡುಗೆ: ಸಚಿವ ಸತೀಶ್ ಜಾರಕಿಹೊಳಿ  The Constitution is the gift for a life of dignity: Minister Satish Jarkiholi

ಲೋಕದರ್ಶನ ವರದಿ 

ಬೆಳಗಾವಿ 15: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದಲೇ ನಾವೆಲ್ಲರೂ ಇಂದು ಘನತೆಯಿಂದ ಬದುಕುತ್ತಿದ್ದೇವೆ. ಅವರ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.  ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ 2ನೇ ಘಟಕದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್‌. ಅಂಬೇಡ್ಕರ್ ಅವರ 136ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಬಿ.ಆರ್‌. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಾರ್ವಜನಿಕ ಸೇವೆ ನೀಡುವಲ್ಲಿ ಎನ್‌ಡಬ್ಲ್ಯೂಕೆಆರಿ​‍್ಟಸಿ ಸಿಬ್ಬಂದಿಯ ಶ್ರಮವನ್ನು ಇದೇ ವೇಳೆ ಶ್ಲಾಘಿಸಿದರು.  

ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಇಂದು ಸ್ವತಂತ್ರವಾಗಿ ಮತ್ತು ಗೌರವದಿಂದ ಬದುಕುತ್ತಿದ್ದರೆ ಅದಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಸಂವಿಧಾನವು ನಮಗೆ ಹಕ್ಕುಗಳನ್ನು ಮಾತ್ರವಲ್ಲದೆ ಜವಾಬ್ದಾರಿಗಳನ್ನೂ ನೀಡಿದೆ ಎಂದು ತಿಳಿಸಿದ ಸಚಿವರು, ಕೇವಲ ಹಬ್ಬ ಅಥವಾ ಜಯಂತಿಗಳನ್ನು ಆಚರಿಸುವುದಕ್ಕಿಂತ ಹೆಚ್ಚಾಗಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಓದಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಧಶ್ರದ್ಧೆ ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಜನಸಾಮಾನ್ಯರಿಗೆ ಸೇವೆ ಸಲ್ಲಿಸುವಾಗ ಸಂವಿಧಾನದ ಆಶಯದಂತೆ ಸಮಬಾಳು-ಸಮಪಾಲು ಎಂಬ ತತ್ವದಡಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮಾಜದ ಪ್ರಗತಿಗೆ ಶಿಕ್ಷಣವೇ ಮೂಲಾಧಾರ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿಬೇಕೆಂದು ಸಲಹೆ ನೀಡಿದರು.  ಡಾ. ಬಿ.ಆರ್‌. ಅಂಬೇಡ್ಕರ್ ಅವರ 136ನೇ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆ ಮಕ್ಕಳನ್ನು ಸಚಿವರು ಇದೇ ವೇಳೆ ಸತ್ಕರಿಸಿದರು.   

ಶಾಸಕ ಆಸಿಫ್ (ರಾಜು) ಸೇಠ್, ವಾ.ಕ.ರ.ಸಾ. ಸಂಸ್ಥೆ ಉಪಾಧ್ಯಕ್ಷ ಸುನೀಲ್ ಹಣಮನ್ನವರ್, ಜಿಲ್ಲಾ ಪಂಚಾಯತ ಸಿಇಓ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್‌.ಗುಡೆಣ್ಣವರ್, ವಿಭಾಗಿಯ ಯಾಂತ್ರಿಕ ಅಭಿಯಂತರು ನಿತಿನ್ ಗಡದೆ,

ವಿಭಾಗೀಯ ಸಂಚಾರ ಅಧಿಕಾರಿ ದೇವಕ್ಕ ನಾಯಕ್, ವಿಭಾಗೀಯ ಆಡಳಿತ ಅಧಿಕಾರಿ ನಾಗಮಣಿ ಬೋವಿ, ಭದ್ರತಾ ಮತ್ತು ಜಾಗೃತ ಅಧಿಕಾರಿ ದಶರಥ ಕೆಳಗೇರಿ, ಬೆಳಗಾವಿ ಎರಡನೇ ಘಟಕ ವ್ಯಸ್ಥಾಪಕ ವಿಜಯಕುಮಾರ್ ಕುಮಟಳ್ಳಿ  ಸೇರಿದಂತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಮತ್ತು ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಂಗಪ್ಪ ಚವಲಗಿ ನಿರೂಪಿಸಿ, ವಂದಿಸಿದರು.