ದಿ. ಡಾ. ಎಸ್‌. ಡಬ್ಲೂ. ಮೆಣಸಿನಕಾಯಿರವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ

ದಿ. ಡಾ. ಎಸ್‌. ಡಬ್ಲೂ. ಮೆಣಸಿನಕಾಯಿರವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ  The. Dr. S. W. Menasinakay's portrait was laid by dignitaries.

ಧಾರವಾಡ 02:  ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ದಿನಾಂಕ 01.02.2026 ರಂದು ಧಾರವಾಡ  ಕೃಷಿ ಮಹಾವಿದ್ಯಾಲಯದ ರೂವಾರಿಯಾದ ಡಾ. ಎಸ್‌. ಡಬ್ಲೂ. ಮೆಣಸಿನಕಾಯಿ ರವರ ಜನ್ಮದಿನಾಚರಣೆ ಸ್ಮರಣಾರ್ಥ 16 ನೇ ಉಪನ್ಯಾಸ ಕಾರ್ಯಕ್ರಮವನ್ನು  ಡಾ. ಎಸ್‌. ಡಬ್ಲೂ. ಮೆಣಸಿನಕಾಯಿ ಮೆಮೊರಿಯಲ್ ಎಜ್ಯುಕೇಶನ್ ಮತ್ತು ರಿಸರ್ಚ ಫೌಂಡೇಶನ್ನ ಸಹಯೋಗದೊಂದಿಗೆ ಮುಂಜಾನೆ 10.00 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಈ ಮಹಾನ್ ವ್ಯಕ್ತಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾಗಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಹೈದರಾಬಾದ್ನ ಪತಂಚೇರು ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕರಾದ ಡಾ. ಹಿಮಾಂಶು ಪಾಠಕ್ ರವರು ಆಹಾರದಿಂದ ಪೋಷಣೆ,

ಆದಾಯ ಮತ್ತು ಪರಿಸರ ಭದ್ರತೆ ಹಾಗೂ ಮುಂದಿನ ತಲೆಮಾರಿನ ಕೃಷಿ ಕುರಿತು ಉಪನ್ಯಾಸ ನೀಡಿದರು. 1950ರ ದಶಕದಿಂದ 1920ರ ದಶಕದವರೆಗೆ ಉತ್ಪಾದಕತೆ ಹೆಚ್ಚಿದ ಪರಿಣಾಮವಾಗಿ ಭಾರತದಲ್ಲಿ ಆಹಾರ ಧಾನ್ಯಗಳು, ಎಣ್ಣೆಕಾಳು ಬೀಜಗಳು, ಕಾಳುಧಾನ್ಯಗಳು, ಮೊಟ್ಟೆ, ಹಾಲು, ತೋಟಗಾರಿಕಾ ಬೆಳೆಗಳು ಮುಂತಾದವುಗಳ ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಇದರ ಫಲವಾಗಿ ಭಾರತ ಇಂದು ಪ್ರಮುಖ ರಫ್ತು ದೇಶವಾಗಿ ಹೊರಹೊಮ್ಮಿದೆ ಎಂದು ಅವರು ಒತ್ತಿ ಹೇಳಿದರು. ಭವಿಷ್ಯದಲ್ಲಿ ಕೃಷಿಯ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ (ಂಋ), ಜೀನೋಮ್ ಎಡಿಟಿಂಗ್, ಜೀನೋಮಿಕ್ಸ್‌, ಫೀನೋಮಿಕ್ಸ್‌, ಯಂತ್ರ ಅಧ್ಯಯನ, ರೋಬೋಟಿಕ್ಸ್‌, ಡ್ರೋನ್ಗಳು, ಬೃಹತ್ ದತ್ತಾಂಶ ವಿಶ್ಲೇಷಣೆ ಮುಂತಾದ ಮುಂದಿನ ತಲೆಮಾರಿನ ತಂತ್ರಜ್ಞಾನಗಳ ಮಹತ್ವದ ಪಾತ್ರವನ್ನು ಡಾ. ಪಾಠಕ್ ಅವರು ವಿವರಿಸಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಪಿ. ಎಲ್‌. ಪಾಟೀಲ, ಕುಲಪತಿಗಳು, ಕೃವಿವಿ, ಧಾರವಾಡ ಇವರು  ಗೌರಾದೇವಿ ಮೆಣಸಿನಕಾಯಿಯವರ ಆಶಯದಂತೆ ಅವರ ಶುಭಾಶಯಗಳು ಹಾಗೂ ಆಶೀರ್ವಾದಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಸಭಿಕರಿಗೆ ತಿಳಿಸಿದರು. ಡಾ. ಎಸ್‌. ಡಬ್ಲ್ಯೂ. ಮೆಣಸಿನಕಾಯಿಯವರು ಕೃಷಿ ಮಹಾವಿದ್ಯಾಲಯದ ಆರಂಭಿಕ ವರ್ಷಗಳಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ದಾಖಲಾತಿಗೆ ವಹಿಸಿದ್ದ ಮಹತ್ವದ ಪಾತ್ರವನ್ನು ವಿವರಿಸಿ, ಅವರ ದೂರದೃಷ್ಟಿ ಮತ್ತು ಪರಿಶ್ರಮದ ಫಲವಾಗಿ ಸಂಸ್ಥೆಯನ್ನು ಉಳಿಸಿಕೊಂಡಿದ್ದರಿಂದ, ಇಂದು ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು. ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ನಿಕಟ ಪೂರ್ವ ಕುಲಪತಿಗಳು, ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಡಾ. ಎಸ್‌. ಡಬ್ಲೂ. ಮೆಣಸಿನಕಾಯಿ ಮೆಮೊರಿಯಲ್ ಎಜ್ಯುಕೇಶನ್ ಮತ್ತು ರಿಸರ್ಚ ಫೌಂಡೇಶನ್ನ ಸದಸ್ಯರು ಭಾಗವಹಿಸಿದ್ದರು.  ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಹಾಗೂ ಸದಸ್ಯರನ್ನು ಕೃಷಿ ಮಹಾವಿದ್ಯಾಲಯ, ಧಾರವಾಡದ ವಿದ್ಯಾಧಿಕಾರಿ ಮತ್ತು ಫೌಂಡೇಶನ್ ಉಪಾಧ್ಯಕ್ಷರಾದ                    ಡಾ. ವಿ.ಬಿ.ಕುಲಿಗೋಡ ಸ್ವಾಗತಿಸಿದರು. ಡಾ. ಎಸ್‌.ಎ.ದೇಸಾಯಿ, ಕಾರ್ಯದರ್ಶಿಗಳು, ಎಸ್‌. ಡಬ್ಲೂ. ಮೆಣಸಿನಕಾಯಿ ಫೌಂಡೇಶನ್ ಇವರ ವಂದನಾರೆ​‍್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.