ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮ

The 'Harvest Celebration' program was held at Shiv Bodharanga Pre-Graduate College of Mudalagi Educ

ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮ

ಮೂಡಲಗಿ 10: ‘ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ ಮತ್ತು ಆಧುನಿಕತೆಯಿಂದಾಗಿ ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳೆಲ್ಲ ಅಪಾಯದ ಅಂಚಿನಲ್ಲಿವೆ” ಎಂದು ಕಬ್ಬೂರದ ಜಾನಪದಗಾಯಕ ಎಸ್‌.ಪಿ.ಹೊಸಪೇಟಿ ಹೇಳಿದರು. 

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮುಂಬರುವ ಪೀಳಿಗೆಗೆ ನಾಡಿನ ಸಂಸ್ಕೃತಿ, ಪರಂಪರೆಯ ಅರಿವು ಇಲ್ಲದಂತಾಗುತ್ತದೆ ಎಂದರು.ಯುವಕರು ಜಾನಪದ ಮತ್ತು ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ಇರಬೇಕು. ಮೂಡಲಗಿಯ ಶಿವಬೋಧರಂಗ ಪದವಿ ಪೂರ್ವ ಕಾಲೇಜು ಸುಗ್ಗಿ ಸಂಭ್ರಮ ಮೂಲಕ ವಿದ್ಯರ್ಥಿಗಳಲ್ಲಿ ನಾಡಿನ ಜಾನಪದ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿದ್ದು ಶ್ಲಾಘನೀಯವಾಗಿದೆ ಎಂದರು. ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ಹಾಡು, ನೃತ್ಯಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಮನೋ ವಿಕಾಸವಾಗಿ ಓದು, ಅಧ್ಯಯನಕ್ಕೆ ಉತ್ತೇಜ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.ಸಂಸ್ಥೆಯ ನಿರ್ದೇಶಕರ ವಿಜಯಕುಮಾರ ಸೋನವಾಲಕರ, ನಿವೃತ್ತ ಪಾಚಾರ್ಯ ಎಸ್‌.ಡಿ. ತಳವಾರ, ಬಾಲಶೇಖರ ಬಂದಿ ಮುಖ್ಯ ಅತಿಥಿಯಾಗಿದ್ದರು.ಪ್ರಾಚಾರ್ಯ ಎಂ.ಎಸ್‌. ಪಾಟೀಲ, ಎಸ್‌.ಕೆ.ಹಿರೇಮಠ, ಬಿ.ಜಿ.ಗಡಾದ, ಎಲ್‌.ಆರ್‌.ಧರ್ಮಟ್ಟಿ, ಡಾ.ಆರ್‌.ಪಿ.ಬಿರಾದಾರ, ಎಸ್‌.ಎಸ್‌. ಹಿರೇಮಠ, ಎಂ.ಜಿ. ಹೆಬ್ಬಳ್ಳಿ, ಆರ್‌.ಎಚ್‌. ಯಕ್ಕುಂಡಿ, ಎಸ್‌.ಪಿ. ಸಣ್ಣಮೇತ್ರಿ, ಆರ್‌.ಎಸ್‌. ಹಾದಿಮನಿ, ಎಚ್‌.ಎಂ. ಹತ್ತರಕಿ, ಎನ್‌.ಪಿ. ಗುಳೇದಗುಡ್ಡ, ಎಸ್‌.ವೈ. ಖಾನಪ್ಪಗೋಳ ಇದ್ದರು. ಉಪಾನ್ಯಾಸಕ ಎಸ್‌.ಕೆ.ಹಿರೇಮಠ ಸ್ವಾಗತಿಸಿದರು, ಇಮಾಮ ನದಾಫ್ ಮತ್ತು ಭಾಗ್ಯಶ್ರೀ ಹೊಸಟ್ಟಿ ನಿರೂಪಿಸಿದರು.ಮೆರವಣಿಗೆ: ವಿದ್ಯಾರ್ಥಿನಿಯರು ಇಲಕಲ್ ಸೀರೆ ಮತ್ತು ವಿದ್ಯಾರ್ಥಿಗಳು ಧೋತಿ, ಪಂಚೆ, ರುಮಾಲುಗಳನ್ನು  ಧರಿಸಿದ್ದರು ಶೃಂಗರಿಸಿದ ಎತ್ತಿನ ಚಕಡ್ಡಿಯಲ್ಲಿ ಕಾಲೇಜಿ ಪ್ರಾಚಾರ್ಯ ಹಾಗೂ ಅಥಿತಿಗಳ ಉಪಸ್ಥಿತಿಯಲ್ಲಿ  ಕಾಲೇಜಿನ ಆವರಣದಿಂದ  ಪಟ್ಟಣದ ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೇಮ್ಮಾ ದೇವಿ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತದ ಮೂಲಕ ಮರಳಿ ಕಾಲೇಜಿನವರಿಗೆ ದೇಶಿಯ ಘೋಷಣೆಯೊಂದಿಗೆ ಮೆರವಣೆ ನಡೆಸಿದರು. 

ದೇಸಿ ಸೊಬಗು: ವಿದ್ಯಾರ್ಥಿನಿಯರು ಇಲಕಲ್ ಸೀರೆ ಮತ್ತು ಸಂಪ್ರದಾಯ ಆಭರಣಗಳನ್ನು ಧರಿಸಿದ್ದರು ಮತ್ತು ವಿದ್ಯಾರ್ಥಿಗಳು ಧೋತಿ, ಪಂಚೆ, ರುಮಾಲುಗಳಲ್ಲಿ ಗಮನಸೆಳೆದರು. ಲಾವಣಿ, ಗೀಗಿ ಹಾಡು, ಭಜನೆ, ಸುಗ್ಗಿ ಹಾಡು, ಕೋಲಾಟಗಳಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಜ್ಜೆ, ಜೋಳದ ರೊಟ್ಟಿ, ಶೆಂಗಾ ಹೋಳಿಗೆ, ಮಾದಿಲಿ, ಖಾರ-ಚಟ್ನಿ, ವಿವಿಧ ಪಲ್ಯ, ಉಪ್ಪಿನಕಾಯಿ ಬುತ್ತಿ ಊಟವನ್ನು ಸಹಭೋಜನ ಮಾಡಿ ಸಂಭ್ರಮಿಸಿದರು.