ತಾಳಿಕೋಟೆ: ಪುರಸಭೆ ಚುನಾವಣೆ: ಅಣಕು ಮತದಾನ ಪ್ರದರ್ಶನ
ಲೋಕದರ್ಶನ ವರದಿ
ತಾಳಿಕೋಟೆ 26: ಪಟ್ಟಣದ ಪುರಸಭೆಯ ಚುನಾವಣೆಗೆ ಸಂಬಂದಿಸಿ ಬರಲಿರುವ ದಿ. 29 ರಂದು ಮತದಾನ ಪ್ರಕ್ರೀಯೇಗೆ ಸಂಬಂದಿಸಿ ರವಿವಾರರಂದು ಇವ್ಹಿಎಂ ಮಶಿನಗಳಲ್ಲಿ ಅಭ್ಯರ್ಥಿಗಳ ಭಾವ ಚಿತ್ರ ಮತ್ತು ಚಿನ್ಹೆಗಳನ್ನು ಅಳವಡಿಸುವದರೊಂದಿಗೆ ಅಭ್ಯಥರ್ಿಗಳಿಂದ ಅಣಕು ಮತದಾನವನ್ನು ಮಾಡಲಾಯಿತು.
ಪಟ್ಟಣದ ಎಸ್.ಕೆ.ಕಾಲೇಜ್ನಲ್ಲಿ ಚುನಾವಣಾಧಿಕಾರಿ ತಾಲೂಕಾ ತಹಶಿಲ್ದಾರ ನಿಂಗಪ್ಪ ಬಿರಾದಾರ ಅವರು ಪುರಸಭೆಯ ಚುನಾವಣೆಯಲ್ಲಿ ಸ್ಪದರ್ಿಸಿದ 23 ವಾಡರ್ುಗಳಲ್ಲಿಸ್ಪರ್ದಿಸುವ ಅಭ್ಯರ್ಥಿಗಳ ಸಭೆಯನ್ನು ನಡೆಸಿದ ಅವರು ಅಭ್ಯಥರ್ಿಗಳ ಸಮ್ಮುಖದಲ್ಲಿ ಇವ್ಹಿಎಂ ಮಶಿನನಲ್ಲಿಅಭ್ಯರ್ಥಿಗಳ ಭಾವಚಿತ್ರ ಮತ್ತು ಚಿನ್ಹೇಯನ್ನು ಅಳವಡಿಸಿ ಅವರಿಂದಲೇ ಅಣಕು ಮತದಾನ ಮಾಡಿಸುವ ಮೂಲಕ ಇವ್ಹಿಎಂ ಮಶಿನಗಳನ್ನು ಬದ್ರಗೊಳಿಸಿ ಸ್ಟ್ರಾಂಗ್ರೂಂಗೆ ಕಳುಹಿಸಲಾಯಿತು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಹಶಿಲ್ದಾರ ನಿಂಗಪ್ಪ ಬಿರಾದಾರ ಅವರು ಪುರಸಭೆಯ 23 ವಾರ್ಡಗಳ ಪೈಕಿ 28 ಮತಗಟ್ಟೆಗಳನ್ನು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು ಅದರಲ್ಲಿ ವಾರ್ಡನಂ.9, 19, 20, 22 ಅವಿರೋಧವಾಗಿ ಆಯ್ಕೆಗೊಂಡಿದ್ದರಿಂದ ಇವುಗಳನ್ನು ಹೊರತು ಪಡಿಸಿ 24 ಮತಗಟ್ಟೆಗಳನ್ನು ನಿಮರ್ಾಣಕ್ಕೆ ಮುಂದಾಗಲಾಗಿದೆ ಚುನಾವಣೆಗೆ ಸಂಬಂದಿಸಿ ಈಗಾಗಲೇ ಎಲ್ಲ ರೀತಿಯಿಂದಲೂ ಸಖಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಪಿಆರ್ಓ ಸಿಬ್ಬಂದಿಗಳಿಗೆ ತರಬೇತಿಯನ್ನೂ ಸಹ ನೀಡಲಾಗಿದೆ ದಿ. 29 ರಂದು ಮತದಾನದ ದಿನ ಬೆಳಿಗ್ಗೆ 7 ಘಂಟೆಗೆ ಮೊದಲು ಮತದಾನಕ್ಕೂ ಮುಂಚೆ ಅಭ್ಯರ್ಥಿಗಳಿಗೆ ಇವ್ಹಿಎಂ ಮಶಿನದ ತಿಳುವಳಿಕೆ ನೀಡಿ ನಂತರ ಮದಾನಕ್ಕೆ ಅವಕಾಶ ಮಾಡಿಕೊಡಬೇಕು ಮತದಾನದ ಸಮಯದಲ್ಲಿ ಯಾವುದೇ ರೀತಿಯ ಗೊಂದಲಗಳು ಶೃಷ್ಠಿಯಾಗದಂತೆ ನೊಡಿಕೊಳ್ಳಬೇಕು ಇವ್ಹಿಎಂ ಮಶಿನದ ಮುಂದೆ ಒಬ್ಬರು ಮತದಾನ ಮಾಡುವ ಸಮಯದಲ್ಲಿ ಮತ್ತೊಬ್ಬರು ಹೋಗದಂತೆ ನೋಡಿಕೊಳ್ಳಬೇಕು ಎಂದು ಕಾರ್ಯನಿರ್ವಹಿಸುವ 130 ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಮಯದಲ್ಲಿ ಚುನಾವಣಾಧಿಕಾರಿಗಳಾದ ವಿನೋದ ನಾಯಕ, ಜಿ.ವಾಯ್.ಮುರಾಳ, ಎ.ಜಿ.ಗುಜರಿ, ಸೇಕ್ಟರ್ ಆಫಿಸರ್ ಎನ್.ಆರ್.ಉಂಡಿಗೇರಿ, ಪ್ರಶಾಂತ ಶೇವಳಕರ, ಮಾಸ್ಟರ್ ಟ್ರೈನರ್ ನಾಗರಾಜ ಕ್ಷತ್ರಿ, ಅವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 