ಲೋಕದರ್ಶನ ವರದಿ
ತಾಳಿಕೋಟೆ 20: ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೇಶದ ಗಡಿಕಾಯುವ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಬೇಜವಾಬ್ದಾರಿತನದಿಂದ ಮಾತನಾಡಿರುವ ಹೇಳಿಕೆಯನ್ನು ಹಿಂಪಡೆಯಬೇಕೆಂದು ಮಾಜಿ ಸೈನಿಕರ ಸಂಘದ ತಾಲೂಕಾ ಅಧ್ಯಕ್ಷ ಶ್ರೀಪಾಲ ಸಂಗ್ಮಿ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯನ್ನು ನೀಡಿರುವ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ತನ್ನ ಮಗನ ಗೆಲುವಿನ ಸ್ವಾರ್ಥಕೋಸ್ಕರ ನಡೆದ ಚುನಾವಣಾ ಪ್ರಚಾರ ರ್ಯಾಲಿ ಸಂದರ್ಬದಲ್ಲಿ ಎರಡು ಹೊತ್ತು ಊಟಕ್ಕಿಲ್ಲದವರು ಸೈನ್ಯಕ್ಕೆ ಸೇರುತ್ತಾರೆಂದು ಹೇಳಿರುವದು ಸೈನಿಕರ ಸ್ವಾಭಿಮಾನಕ್ಕೆ ದಕ್ಕೆ ತರುವಂತಹದ್ದಾಗಿದೆ. ಭಾರತೀಯ ಸೇನೆಯಲ್ಲಿ ರಾಜಸ್ಥಾನದ ಪ್ರತಿಷ್ಠಿತ ರಾಠೋಡ ಮನೆತನದ ಈಗಿನ ಕೇಂದ್ರ ಮಂತ್ರಿಗಳಾದ ಕರ್ನಲ್ ರಾಜವರ್ದನ್ಸಿಂಗ್ ರಾಠೋಡ, ಕೇರಳದ ತ್ರಿವೇಂದ್ರಂ ಅರಸು ಮನೆತನದ ಕರ್ನಲ್ ಎಸ್ ಆನಂದಕುಮಾರ, ಅಷ್ಟೇ ಏಕೆ ನಮ್ಮ ನಾಡಿನ ಹೆಮ್ಮೆಯ ಪುತ್ರ ಫಿಲ್ಡಮಾರ್ಷಲ್ ಕೆ.ಎಂ.ಕಾರ್ಯಪ್ಪ ಕೂಡಾ ಪ್ರತಿಷ್ಠಿತ ಮನೆತನದವರು ಆಗಿದ್ದಾರೆ ಹೀಗೆ ಸಾವಿರಾರು ಜನರು ರಾಜಮನೆತನದವರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾರತೀಯ ಸೈನ್ಯದ ಬಗ್ಗೆ ತಿಳಿದುಕೊಳ್ಳದೇ ತಮ್ಮ ಸ್ವಾರ್ಥಕೋಸ್ಕರ ಅಜ್ಞಾನಿ ಹಾಗೆ ಮಾತನಾಡುವದನ್ನು ನಿಲ್ಲಿಸಿ ಭಾರತೀಯ ಸೈನ್ಯದ ಬಗ್ಗೆ ತಿಳಿದುಕೊಳ್ಳಲು ಸರ್ಕಾರದ ಸಾಕ್ಷರತಾ ಶಾಲೆಯನ್ನು ಸೇರಿಕೊಂಡು ಭಾರತೀಯ ಸೈನ್ಯದ ಬಗ್ಗೆ ಶಿಕ್ಷಣ ಪಡೆದುಕೊಳ್ಳಲಿ ಎಂದು ತಿಳಿಸಿದ್ದಾರಲ್ಲದೇ ಕೂಡಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯೋಧರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದು ಮಾಜಿ ಸೈನಿಕರ ಸಂಘದ ತಾಲೂಕಾ ಅಧ್ಯಕ್ಷ ಶ್ರೀಪಾಲ ಸಂಗ್ಮಿ, ಶಾಂತಗೌಡ ಬಿರಾದಾರ, ಗೋಪಾಲಸಿಂಗ್ ರಜಪೂತ, ಶಿವಪ್ಪ ಅಂಗಡಿ, ನೀಲಪ್ಪ ವಾಲಿ, ಕಾಶಿನಾಥ ಸಜ್ಜನ, ಸೂಗಪ್ಪ ಸಜ್ಜನ, ಪರಶುರಾಮ ಕೊಣ್ಣೂರ, ಶಂಕರ ರಾಠೋಡ, ಬಸವರಾಜ ದೋರನಳ್ಳಿ, ರಾಮನಗೌಡ ಬಿರಾದಾರ ಸಂಘದ ಸದಸ್ಯರುಗಳು ಮತ್ತು ಸಿದ್ದಗಂಗಾ ಸಹಕಾರಿ ಬ್ಯಾಂಕಿನ ಅದ್ಯಕ್ಷರಾದ ಎಸ್.ವ್ಹಿ.ಮೇಟಿ ಅವರು ಒತ್ತಾಯಿಸಿದ್ದಾರೆ.