ನಗರದಲ್ಲಿ ಹೋರಾಟಕ್ಕೆ ತಾತ್ಕಲಿಕ ವಿರಾಮ

 ನಗರದಲ್ಲಿ ಹೋರಾಟಕ್ಕೆ ತಾತ್ಕಲಿಕ ವಿರಾಮ

ಕಾರವಾರ: ಸಾಗರಮಾಲಾ ಯೋಜನೆಯನ್ನು ಸಕರ್ಾರ ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಧರಣಿ 12 ದಿನಕ್ಕೆ ಕಾಲಿಟ್ಟಿದೆ. ಧರಣಿಗೆ ಕಾರವಾರ ಸುನ್ನಿ ಮುಸ್ಲಿಂ ಅಸೋಸಿಯೇಶನ್ ಮತ್ತು ವಿದ್ಯಾಥರ್ಿ ಮುಖಂಡ ಆಶೀಶ್ ಗಾಂವ್ಕರ್ ಹಾಗೂ ಹೊನ್ನಾವರದ ಮೀನುಗಾರರ ಸಂಘಟನೆಗಳು ಬೆಂಬಲ ಸೂಚಿಸಿ, ಕೆಲ ಸಮಯ ಧರಣಿಯಲ್ಲಿ ಭಾಗವಹಿಸಿದ್ದವು. ಆಶೀಶ್ ಗಾಂವ್ಕರ್ ಕಾರವಾರದ ದಿವೇಕರ ಮತ್ತು ಸಕರ್ಾರಿ ಪದವಿ ಕಾಲೇಜುಗಳಿಗೆ ತೆರಳಿ ಅಲ್ಲಿನ ವಿದ್ಯಾಥರ್ಿಗಳ ಬೆಂಬಲ ಮೀನುಗಾರರ ಹೋರಾಟಕ್ಕೆ ಇದೆ ಎಂಬ ಸಂದೇಶವನ್ನು ಕಾಲೇಜಿನ ಎದುರು ಪ್ರದಶರ್ಿಸಿದ ಘಟನೆ ಸಹ ನಡೆಯಿತು. ಇನ್ನೊಂದೆಡೆ ಬೈತಖೋಲ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಸಹಕಾರ ಸಂಘ ನಿಯಮಿತದಿಂದ ರಾಜ್ಯ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ ಪ್ರಕರಣ ಸಹ ನಡೆದಿದೆ. ಈ ಪ್ರಕರಣದಲ್ಲಿ ಪೋರ್ಟ ಟ್ರಸ್ಟ್, ಬಂದರು ಅಧಿಕಾರಿ. ಜಿಲ್ಲಾಧಿಕಾರಿ, ಪರಿಸರ ಇಲಖೆಯ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ನಮೂದಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಫೆ.26ಗೆ ಮುಂದೂಡಿದೆ. 

ನಾಳೆ ಹೋರಾಟದ ಮತ್ತೊಂದು ಮಜಲು:

ಮೀನುಗಾರರ ಹೋರಾಟದ ದಿಕ್ಕು ಮತ್ತು ಬೇಡಿಕೆ ಕುರಿತು ಹೋರಾಟ ಸಮಿತಿಯ ಮುಖಂಡರು ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿದರು. ಧರಣಿ ಹಾಗೂ ಪ್ರತಿಭಟನೆಯ ಮುಖಂಡ ರಾಜು ತಾಂಡೇಲ ಮಾತನಾಡಿ ನಮ್ಮ ಹೋರಾಟ ಮುಂದುವರಿಯಲಿದೆ. ಮೀನುಗಾರ ಮಹಿಳೆಯರು ಮೀನು ಮಾರಾಟ ಬಿಟ್ಟು ಕಳೆದ 12 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಮಾಜಿ ಶಾಸಕ ಸತೀಶ್ ಸೈಲ್ ಈ ಪ್ರಕರಣವನ್ನು ನ್ಯಾಯಾಲಯದತನಕ ಒಯ್ದು, ಮೀನುಗಾರರಲ್ಲಿ ಭರವಸೆ ಮೂಡಿಸಿದ್ದಾರೆ. ವಕೀಲರನ್ನು ನೇಮಿಸಿ ನಮಗೆ ಸಹಾಯ ಮಾಡಿದ್ದಾರೆ. ಅವರನ್ನು ನಾವು ನೆನಪಿಟ್ಟುಕೊಳ್ಳುತ್ತೇವೆ. ಜ.31 ಸಕರ್ಾರ ಮಾತುಕತೆಗೆ ಕರೆದಿದೆ. ಮಾತುಕತೆಗೆ ತೆರಳುತ್ತೇವೆ. ಅಲ್ಲಿ ಸಕರ್ಾರದ ನಿಧರ್ಾರ ತಿಳಿದು ಮುಂದಿನ ನಡೆ ನಿರ್ಧರಿಸುತ್ತೇವೆ ಎಂದರು. 

ಸಕರ್ಾರದ ಮೇಲೆ ನಂಬಿಕೆ ಇದೆ. ಮೀನುಗಾರರಿಗೆ ತೊಂದರೆ ಮಾಡುವುದಿಲ್ಲ ಎಂಬ ಭರವಸೆ ನಮಗೆ ಬೇಕಾಗಿದೆ. ಆ ನಂತರ ನಾವು ನಮ್ಮ ಹೋರಾಟದ ರೂಪರೇಶೆ ತಿಳಿಸುತ್ತೇವೆ. ನಾಳೆ ಹೋರಾಟದ ಮೊದಲ ಹಂತ ಮುಗಿಯಲಿದೆ. ನಗರದಲ್ಲಿ ಮೆರವಣಿಗೆ ಮಾಡಲಿದ್ದೇವೆ. ಹೋರಾಟದಲ್ಲಿ ಸಹಕರಿಸಿದ ಮತ್ತು ಪ್ರಕರಣವನ್ನು ಹೈಕೋರ್ಟತನಕ ಹೊಯ್ದು ಸಕರ್ಾರದ ಗಮನಸೆಳೆದ ಇಬ್ಬರು ವಕೀಲರಿಗೆ ಸನ್ಮಾನ ಮಾಡಲಿದ್ದೇವೆ ಎಂದರು. ಕಾರವಾರದ ವಕೀಲರಾದ ಡಿ.ಎಸ್.ನಾಯ್ಕ ಅವರ ಪುತ್ರ, ಹೈಕೋರ್ಟ ವಕೀಲರಾದ ಮೂತರ್ಿ ದಯಾನಂದ ನಾಯ್ಕ ಹಾಗೂ ದೇವದತ್ತ ಕಾಮತ್ ಅವರಿಗೆ ಸನ್ಮಾನ ಮಾಡಿ, ಬೀಚ್ನಲ್ಲಿ ಕಾಮಗಾರಿ ತಡೆದ ಸ್ಥಳ ಪರಿಶೀಲನೆ ಮಾಡಲಿದ್ದೇವೆ ಎಂದರು. 

ಮಾಜಿ ಶಾಸಕ ಸತೀಶ್ ಸೈಲ್, ಕೆ.ಟಿ.ತಾಂಡೇಲ, ಪ್ರಭಾಕರ ಮಾಳ್ಸೇಕರ್ ಮುಂತಾದವರು ಉಪಸ್ಥಿತರಿದ್ದರು.

ಸಚಿವರು ಸ್ಥಳಕ್ಕೆ ಬಂದು ಮನವರಿಕೆ ಮಾಡಿಕೊಡಬೇಕು: ಮಾಜಿ ಶಾಸಕ ಸೈಲ್ 

ಕಾರವಾರ: ಸಾಗರಮಾಲಾ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ ಎಂದು ಸಚಿವರು ಸ್ಥಳಕ್ಕೆ ಬಂದು ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹಿಸಿದರು. ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ನಾನು ಮೀನುಗಾರರ ಪರ. ಅವರ ಸಮಸ್ಯೆಯನ್ನು ಹೈಕೋರ್ಟತನಕ ಒಯ್ದು ಒಂದು ನಿಣರ್ಾಯಕ ಹಂತಕ್ಕೆ ತಂದಿದ್ದೇನೆ. ನಾನು ರಾಜಕೀಯ ಮಾಡುತ್ತಿಲ್ಲ. ಮೀನುಗಾರರ ಪರ ಇದ್ದೇನೆ ಅಷ್ಟೇ ಎಂದರು. ಸಾಗರ ಮಾಲಾದಿಂದ ಮೀನುಗಾರರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ಕಾರವಾರ ಕಡಲತೀರ ಇದ್ದಂತೆ ಇರಲಿ. ಅದನ್ನು ಕೆಡಿಸುವುದು ಬೇಡ ಎಂದು ನನ್ನ ವಾದ. ಇದನ್ನು ಶಾಸಕ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ತಿಳಿಸಿದ್ದೇನೆ. ಅವರು , ಮೀನುಗಾರಿಕಾ ಸಚಿವರು ಸ್ಥಳಕ್ಕೆ ಬರಲಿ. ಯೋಜನಾ ಸ್ಥಳ ಪರಿಶೀಲಿಸಿಲಿ. ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ ಎಂದು ಮನವರಿಕೆ ಮಾಡಲಿ. ಆನಂತರ ಮುಂದಿನ ನಿಧರ್ಾರವಾಗಲಿ ಎಂದು ಸೈಲ್ ಹೇಳಿದರು. ನಾನು ಯೋಜನೆ ಬಗ್ಗೆ ಮಾತಾಡುವುದಿಲ್ಲ. ಯೋಜನೆ ಜಾರಿ ಮಾಡುವವರು ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಯೋಜನೆ ಸಾಧಕ ಬಾಧಕಕ್ಕೆ ವೈಜ್ಞಾನಿಕ ಕಾರಣ ಕೊಟ್ಟು , ಸಾಬೀತು ಮಾಡಲಿ, ಅಷ್ಟೇ ನನ್ನ ಬೇಡಿಕೆ. ಇದರಿಂದ ನನಗೆ ರಾಜಕೀಯ ಲಾಭವೇನಿಲ್ಲ ಎಂದರು. ಯಾರೇ ಏನೇ ಹೇಳಿದರೂ ನಾನು ಮೀನುಗಾರರ ಪರ ಇದ್ದೇನೆ. ಯೋಜನೆಗೆ ಕಲ್ಲು ಸರಬರಾಜು ಮಾಡಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಯೋಜನೆಗೆ ಕಲ್ಲು ಪೂರೈಸಿದ್ದರೆ, ನಾನೇಕೆ ಯೋಜನೆ ತಡೆಗೆ ಹೈಕೋರ್ಟಗೆ ವಕೀಲರನ್ನು ನೇಮಿಸುತ್ತಿದ್ದೆ ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು. ಸಾಗರ ಮಾಲಾ ವಿರೋಧಿಸಿ ಮೀನುಗಾರರ ಮಹಿಳೆಯರು ಮೀನು ವ್ಯಾಪಾರ ಬಿಟ್ಟು 12 ದಿನ ಧರಣಿಯಲ್ಲಿದ್ದಾರೆ. ಈಗ ಹೋರಾಟಕ್ಕೆ ತಾತ್ಕಲಿಕ ವಿರಾಮ ಕೊಡಲಿದ್ದೇವೆ. ಅದು ಶನಿವಾರ ಸಂಜೆ ನಿಧರ್ಾರವಾಗಲಿದೆ. ಸಕರ್ಾರದ ನಿಲುವು ನೋಡಿಕೊಂಡು ಮುಂದಿನ ಹೋರಾಟವನ್ನು ಮೀನುಗಾರರು ರೂಪಿಸುತ್ತಾರೆ ಎಂದರು. 

*