ಪುರುಷರು ಮಹಿಳೆಯರ ಮೇಲೆ ಅಪರಾಧ ಮಾಡದಂತೆ ಸಮಾಜಕ್ಕೆ ಬೋಧಿಸುವುದು
Teaching society not to let men commit crimes against women
ಬಳ್ಳಾರಿ 25: ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನ 2025 ರ ಅಂಗವಾಗಿ ನಗರದ ಕೋಟೆಯ ಮೇಧಾ ಡಿಗ್ರಿ ಕಾಲೇಜಿನಲ್ಲಿ ‘ಮಹಿಳೆಯರ ಮೇಲಿನ ಹಿಂಸಾಚಾರ’ ವಿಷಯದ ಚಿತ್ರಕಲಾ ಸ್ಪರ್ಧೆಯನ್ನು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈಕಂಋ) ಬಳ್ಳಾರಿ ಶಾಖೆಯ ವತಿಯಿಂದ ಹಮ್ಮಿಕೊಳ್ಳಲಾಯಿತು. ಒಟ್ಟು 21 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿಷಯಾಧಾರಿತ ಆಕರ್ಷಕ ಚಿತ್ರಗಳನ್ನು ರಚಿಸಿದರು.
ಸ್ಪರ್ಧೆಯ ನಂತರ ಮಹಿಳೆಯರ ಮೇಲಿನ ಹಿಂಸಾಚಾರ ಕುರಿತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಈಕಂಋ ಬಳ್ಳಾರಿಯ ಅಧ್ಯಕ್ಷರಾದ ಶ್ರೀ ಟಿ. ಜಿ. ವವಿಠ್ಠಲ ಅವರು ಮಹಿಳೆಯರ ಮೇಲಿನ ಹಿಂಸಾಚಾರದ ವಿವಿಧ ರೀತಿಗಳು ಹಾಗೂ ಭಾರತದ ಹಿಂಸಾಚಾರ ಸಂಬಂಧಿತ ಅಂಕಿಅಂಶಗಳನ್ನು ವಿವರಿಸಿದರು.ಮಹಿಳೆಯರ ಮೇಲಿನ ಹಿಂಸಾಚಾರ ತಡೆಯಲು ಕುಟುಂಬ, ಕಾಲೇಜು ಮತ್ತು ಸಮಾಜದ ಜವಾಬ್ದಾರಿಯನ್ನು ವಿವರಿಸಿದರು.ಯುವಜನರು ಸಮಾನತೆ, ಗೌರವ ಮತ್ತು ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಪ್ರಮುಖ ಶಕ್ತಿಯೆಂದು ಹೇಳಿದರು.
ನೀಡುತ್ತಿರುವ ಸೇವೆಗಳು ಮತ್ತು ಯುವಕರಿಗೆ ಲಭ್ಯವಿರುವ ಸಹಾಯವಾಣಿಗಳು ಹಾಗೂ ಬೆಂಬಲ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.ಮಹಿಳೆಯರ ಮೇಲೆ ಹಿಂಸಾಚಾರ ಕಂಡಾಗ ಮೌನವಾಗಿರದೆ, ಧೈರ್ಯವಾಗಿ ವರದಿ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಕಾಲೇಜಿನ ಪ್ರಿನ್ಸಿಪಲ್ ಡಾ. ರಾಮ್ ಕಿರಣ ಅವರು ಮಾತನಾಡಿ, “ಮಹಿಳೆಯರಿಗೆ ರಾತ್ರಿ ಹೊರಗೆ ಹೋಗಬೇಡಿ ಎಂದು ಹೇಳುವುದಕ್ಕಿಂತ, ಪುರುಷರು ಮಹಿಳೆಯರ ಮೇಲೆ ಅಪರಾಧ ಮಾಡದಂತೆ ಸಮಾಜಕ್ಕೆ ಬೋಧಿಸುವುದು ಮುಖ್ಯ” ಎಂದು ಸಾಮಾಜಿಕ ಹೊಣೆಗಾರಿಕೆಯನ್ನು ಒತ್ತಿಹೇಳಿದರು.ಈ ಕಾರ್ಯಕ್ರಮದಲ್ಲಿ ಈಕಂಋ ಬಳ್ಳಾರಿಯ ಬ್ರಾಂಚ್ ಮ್ಯಾನೇಜರ್ ಶ್ರೀಮತಿ ಎಸ್. ವಿಜಯಲಕ್ಷ್ಮಿ ಅವರು ಪ್ರಸ್ತಾವಿಕ ನುಡಿಗಳನ್ನು ನುಡಿದರು, ತದನಂತರ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಮತ್ತು ಈಕಂಋ ತಂಡದ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 