ಶಿಕ್ಷಕರ ಮಾರ್ಗದರ್ಶನ: ಗುರು ಹಾಗು ವಿದ್ಯಾರ್ಥಿಗಳ ಸಂಬಂಧ ಸುಧಾರಿಸಲು ಸಹಕಾರಿ

ಶಿಕ್ಷಕರ ಮಾರ್ಗದರ್ಶನ: ಗುರು ಹಾಗು ವಿದ್ಯಾರ್ಥಿಗಳ ಸಂಬಂಧ ಸುಧಾರಿಸಲು ಸಹಕಾರಿ Teacher guidance: Helps improve teacher-student relationships

ಶಿಕ್ಷಕರ ಮಾರ್ಗದರ್ಶನ: ಗುರು ಹಾಗು ವಿದ್ಯಾರ್ಥಿಗಳ ಸಂಬಂಧ ಸುಧಾರಿಸಲು ಸಹಕಾರಿ 

ಹೊಸಪೇಟೆ 02: ವಿಜಯನಗರ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಮಸ್ಜಿದ ಎ ತೈಯ್ಯಬ ಆಡಳಿತ ಮಂಡಳಿ ವತಿಯಿಂದ ಶಿಕ್ಷಕರ ಮಾರ್ಗದರ್ಶನ ಕಾರ್ಯಕ್ರಮ 2025 ಹಾಗು  ಸಂಶೋಧನಾ ಆಧಾರಿತ ವಿಜ್ಞಾನ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಹೊಸಪೇಟೆ ಅಂಜುಮನ್‌ಖಿದ್ಮತೆಇಸ್ಲಾಂ ಹಾಗೂ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾದ ಹೆಚ್‌.ಎನ್‌.ಮೊಹಮ್ಮದ್‌ಇಮಾಮ್ ನಿಯಾಜಿಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿಮಸ್ಜಿದ ಎ ತೈಯ್ಯಬ ಆಡಳಿತ ಮಂಡಳಿ ವತಿಯಿಂದ ಶಿಕ್ಷಕರ ಮಾರ್ಗದರ್ಶನಕಾರ್ಯಕ್ರಮ 2025 ಸಂಶೋಧನಾಆಧಾರಿತ ವಿಜ್ಞಾನ ಮೇಳ ಕಾರ್ಯಕ್ರಮ ಹಮ್ಮಿಕೊಂಡುಶಿಕ್ಷಕರಿಗೆ ಮಾರ್ಗದರ್ಶನವನ್ನು ನೀಡಿ ಶೈಕಣಿಕಅಧ್ಯಯನವನ್ನು ಸಂಶೋಧನೆಯೊಂದಿಗೆಜೊತೆ ಗೂಡಿಸಿದಾಗ  ಶಿಕ್ಷಕರು ಹಾಗು ವಿಧ್ಯಾರ್ಥಿಹಾಗು ಪೋಷಕರ ನಡುವಿನ ಸಂಭಂಧವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಕಾರಿಯಾಗುತ್ತದೆ.  

ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳಾಗಿರುವುದರಿಂದ ಮಕ್ಕಳನ್ನು ಉತ್ತಮ ಸುಶಿಕ್ಷಿತರನ್ನಾಗಿಸಿ  ಉತ್ತಮ ನಾಗರಿಕರನ್ನಾಗಿಸಿರಾಜ್ಯದಅಭಿವೃದ್ಧಿಗೆ ಹಾಗೂ ದೇಶದಅಭಿವೃದ್ಧಿಗೆ ಪೂರಕವಾಗುವಂತೆಅವರ ಭವಿಷ್ಯವನ್ನುರೂಪಿಸಬೇಕಾಗಿರುತ್ತದೆ. ಹಾಗೂ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ನಾಣ್ಣುಡಿಯಂತೆ ಮಕ್ಕಳ ಒಳಗಿರುವ ಪ್ರತಿಭೆಯನ್ನು ಪಾಲಕರು ಪೋಷಕರು ಮತ್ತು ಶಿಕ್ಷಕರು ಗುರುತಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ.  

ಹಾಗು ಹೊಸದಾಗಿ ನೇಮಕಗೊಂಡಿರುವ ಶಿಕ್ಷಕರಿಗೆ ಅತ್ಯಾಧುನಿಕ ಶೈಕ್ಷಣಿಕ ಕಾರ್ಯಕ್ರಮಗಳ ಹಾಗೂ ಅತ್ಯಾಧುನಿಕ ಬೋದನಾ ಕಾರ್ಯಕ್ರಮಗಳನ್ನು ತರಬೇತಿ ನೀಡುತ್ತಿರುವುದಕ್ಕೆಕಾರ್ಯಕ್ರಮದಆಯೋಜಕರಿಗೆಅನಂತ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. 

ನಂತರವೇದಿಕೆಯಮೇಲಿನ ಗಣ್ಯರಜೊತೆಗೂಡಿ ಮಹಮ್ಮದ್‌ಅಬ್ದುಲ್ಲಾಜಾವೇದ್‌ರವರು ಬರೆದಿರುವಂತಹ ಶಿಕ್ಷಕರಿಗಾಗಿ ವಿಜ್ಞಾನ ಮೇಳ ಮಾರ್ಗದರ್ಶಿ ಕೈಪಿಡಿ ಪುಸ್ತಕ ಬಿಡುಗಡೆಗೊಳಿಸಿದರು 

ಇದೇ ಸಂಧರ್ಭದಲ್ಲಿ ವಿಜಯನಗರಜಿಲ್ಲಾ ಪಂಚಾಯತಕಾರ್ಯನಿರ್ವಾಹಕಅಧಿಕಾರಿಯಾದ ನೋಗ್ಜಾಯ್‌ಮೊಹಮ್ಮದ್ ಅಲಿ ಅಕ್ರಂ ಶಾ ರವರು ಹಾಗೂ ಎಜೆ ಸಂಶೋಧನಾಅಭಿವೃದ್ಧಿಆಕಾಡೆಮಿ ಸಂಸ್ಥೆಯ ನಿರ್ದೇಶಕರಾದ ಮೊಹಮ್ಮದ್‌ಅಬ್ದುಲ್‌ಜಾವೀದ್‌ಅವರು ಹಾಗೂ  ಮಸ್ಜಿದ್ ಎ ತೈಯ್ಯಬಾ ಆಡಳಿತ ಮಂಡಳಿಯ ಅಧ್ಯಕ್ಷರು ಸದ್ಯಸರು ಹಾಗೂ ಹೊಸಪೇಟೆ ನಗರದ ವಿವಿಧ  ಶಾಲೆಯ ವಿಜ್ಞಾನಗಣಿತವಿಭಾಗದ  ನೂರಾರುಶಿಕ್ಷಕರು ಭಾಗವಹಿಸಿದ್ದರು