ಲೋಕದರ್ಶನ ವರದಿ
ಹಾವೇರಿ 02: ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯಚಟುವಟಿಕೆಗಳ 2018-19 ನೇ ಸಾಲಿನ ಸ್ಪಧರ್ೆಗಳು ನಗರದ ಸರಕಾರಿ ಉದರ್ು ಪ್ರೌಢಶಾಲೆ ಜರುಗಿದವು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೆಶಕರಾದ ಅಂದಾನೆಪ್ಪ ವಡಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಕ್ರೀಯಾಶೀಲರಾಗಿದ್ದು, ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಸಹಪಠ್ಯ ಚಟುವಟಿಕೆಗಳು ಶಾಲಾ ಹಂತದಲ್ಲಿ ಮಕ್ಕಳಿಗೆ ಸಹಕಾರಿಯಾಗಿವೆ.
ಕುತೂಹಲ ಕೆರಳಿಸುವ, ಆಸಕ್ತಿ ಹಿಡಿದಿಡುವ, ಪ್ರಶ್ನಿಸಲು ಪ್ರೋತ್ಸಾಹಿಸುವ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ, ಸ್ವಾವಲಂಬಿ ಜೀವನವನ್ನು ನಡೆಸಲು, ಗುಣಮಟ್ಟದ ಶಿಕ್ಷಣ ಅವಶ್ಯಕತೆಯಿದೆ.
ಇಂದಿನ ಸ್ಪಧರ್ಾತ್ಮಕಯುಗದಲ್ಲಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮುಂದುವರಿಯುತ್ತಿರುವ ಈ ದಿನಗಳಲ್ಲಿ ಬದ್ಧತೆಯಿಂದ ಬೋಧನೆ ಮಾಡಿದಾಗ ಮಾತ್ರ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ವಿಷಯ ಪರಿವಿಕ್ಷಕರು ಉಪನಿದರ್ೇಶಕರಾದ ಮಂಜಪ್ಪ.ಆರ್ ಸ.ಉ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಂ. ಫಡ್ನೇಶಿ ಇವರು ಅತಿಥಿಗಳಾಗಿ ಭಾಗವಹಿಸಿ ಸಹಪಠ್ಯ ಚಟುವಟಿಕೆಗಳಿಂದ ಶಿಕ್ಷಣದಲ್ಲಿ ಸ್ಪೂತರ್ಿದಾಯಕ ಕಲಿಕೆ ಸಾಧ್ಯ ಭೋಧನೆಗೆ ಪ್ರೇರಕವಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧತಾಲೂಕಿನ 128 ಶಿಕ್ಷಕರು ರಸಪ್ರಶ್ನೆ, ಪ್ರಬಂಧ ಪಾಠೋಪಕರಣಗಳ ತಯಾರಿಕೆ, ಆಶುಭಾಷಣ, ಜಾನಪದಗೀತೆ, ವಿವಿಧಸ್ಪಧರ್ೆಗಳಲ್ಲಿ ಭಾಗವಹಿಸಿದ್ದರು.ಶಿಕ್ಷಣ ಸಂಯೋಜಕರಾದ ಸಿದ್ದರಾಜು. ಎಸ್.ಎಸ್. ನಡುವಿನಮಠ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.