ವಿದ್ಯಾಥರ್ಿಗಳಿಗೆ ಸಾಮಾಜಿಕ ಮೌಲ್ಯ ಕಲಿಸಿಕೊಡಿ: ಲೋಕನ್ನವರ

ಲೋಕದರ್ಶನ ವರದಿ

ಗೋಕಾಕ 19: ಅಕ್ಷರ ಜ್ಞಾನ ಬಿತ್ತುವ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದರೊಂದಿಗೆ ಅಲ್ಲಿ ಸಾಮಾಜಿಕ ಮೌಲ್ಯಗಳನ್ನು ವಿದ್ಯಾಥರ್ಿಗಳಿಗೆ ಕಲಿಸಿಕೊಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಸಾರ್ಥಕ ಪಡೆದುಕೊಳ್ಳಲು ಸಾಧ್ಯವೆಂದು ಜ್ಞಾನಗಂಗೋತ್ರಿ ಪ್ರೌಢ ಶಾಲೆ ಚೇರಮನ್ ಶಿವಾನಂದ ಲೋಕನ್ನವರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಜರುಗಿದ ಜ್ಞಾನ ಗಂಗೋತ್ರಿ ಪ್ರೌಢಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾಥರ್ಿಗಳು ಹಿಂದೆ ಗುರು ಮತ್ತು ಮುಂದೆ ಒಂದು ಗುರಿ ಹೊಂದಬೇಕು. ಗುರುವಿನ ಮೂಲಕ ಗುರಿ ಸಾಧಿಸುವ ದೃಡ ಸಂಕಲ್ಪವಿದ್ದರೆ ಸಮಾಜದಲ್ಲಿ ಉತ್ತಮ ಸಾಧಕರಾಗಲು ಸಾಧ್ಯವಾಗುತ್ತದೆಂದು ಹೇಳಿದರು.

ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ನಡುವೆ ಆರೋಗ್ಯಕರ ಬೆಳವಣಿಗೆ ಮಾಡಬೇಕು. ವಿದ್ಯಾಥರ್ಿಗಳು ಪರಸ್ಪರ ನಂಬಿಕೆ-ವಿಶ್ವಾಸಗಳಿಂದ ಬದುಕಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಯುವ ಮುಖಂಡ ಶ್ರೀಕಾಂತ ಪರುಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸೂಪ್ತವಾದ ಪ್ರತಿಭೆಯಿದ್ದು, ಅದನ್ನು ವರೆಗೆ ಹಚ್ಚುವುದರ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಂಕಲ್ಪ, ಸಂಯಮ, ಸಾಹಸ ಮತ್ತು ಸೇವಾ ಮನೋಭಾವನೆಗಳಿದ್ದರೆ ಮನುಷ್ಯ ಖಂಡಿತವಾಗಿಯೂ ಶ್ರೇಷ್ಠವ್ಯಕ್ತಿಯಾಗುತ್ತಾನೆಂದು ಹೇಳಿದರು.

ಇನ್ನೊರ್ವ ಅತಿಥಿ-ನಿವೃತ್ತ ಶಿಕ್ಷಕ ಎಸ್.ಎಸ್.ಅಮ್ಮಣಗಿ ಹಿರಿಯರಾದ ಪುಂಡಲೀಕ ಲೋಕನ್ನವರ ಮಾತನಾಡಿದರು. ದಿವ್ಯ ಸಾನಿಧ್ಯವನ್ನು ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ  ಕೃಷ್ಣಾನಂದ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಭೂಮಿಗೆ ಬಿತ್ತಿದ ಬೀಜ ಹುಸಿಯಾಗದಂತೆ ನಿರಂತರ ಹೊಲ-ತೋಟ-ಗದ್ಯಗಳಲ್ಲಿಯೇ ದುಡಿದು ಮಕ್ಕಳಿಗೆ ಅಕ್ಷರವನ್ನು ಎದೆಗೆ ಬಿತ್ತಿದ 5 ಜೋಡಿ ರೈತ ದಂಪತಿಗಳನ್ನು ಸಮಾರಂಭದಲ್ಲಿ ಸತ್ಕರಿಸಿದ್ದು ವಿಶೇಷವಾಗಿತ್ತು. ರೈತ ದಂಪತಿಗಳನ್ನು ಸಮಾರಂಭದಲ್ಲಿ ಸತ್ಕರಿಸಿದ್ದು ವಿಶೇಷವಾಗಿತ್ತು. ಜನರಲ್ ಚಾಂಪಿಯನ್ ಆಗಿ ಆಯ್ಕೆಯಾದ ಲಕ್ಷ್ಮೀ ಹಳ್ಳೂರ ಕುಮಾರ ಆಶಿಫ್ ಪೆಂಡಾರಗೆ ಶೀಲ್ಡ್ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಲ್ಲೋಳ್ಳಿಯ ಡಾ.ಎಂ.ಬಿ.ಹೆಬ್ಬಾಳ ದಂಪತಿಗಳು, ಪಿ.ಕೆ.ಪಿ.ಎಸ್. ಪದಾಧಿಕಾರಿಗಳು ಸೇರಿದಂತೆ 50 ಗಣ್ಯರನ್ನು ಸಂಸ್ಥೆಯ ಅಧ್ಯಕ್ಷರು ಸನ್ಮಾನಿಸಿದರು.

ಸಮಾರಂಭದಲ್ಲಿ ಡಾ.ಎಂ.ಬಿ.ಹೆಬ್ಬಾಳ, ಗಂಗಾಧರ ಲೋಕನ್ನವರ, ಫಕೀರಪ್ಪ ಪೂಜನ್ನವರ, ತಾ.ಪಂ.ಸದಸ್ಯ ಶಾಂತಪ್ಪ ಹಿರೇಮೇತ್ರಿ, ಶ್ರೀಶೈಲ ಗಾಣಿಗೇರ, ಜಕೀರಸಾಬ ಜಮಾದಾರ, ಗ್ರಾ.ಪಂ. ಅಧ್ಯಕ್ಷ ರಮಜಾನ ಪೋದಿ (ಮುಲ್ತಾನಿ) ಬಸವರಾಜ ಜೋಗಿ, ಅಶೋಕ ಶೀವಾಪೂರ, ವೆಂಕಟೇಶ ದಳವಾಯಿ, ಶಂಕರ ಜೋತೆನ್ನವರ, ಕೃಷ್ಣಮೂತರ್ಿ ಹವಾಲ್ದಾರ, ಶಂಕರ ಚಚಡಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕಿಯರು ಸಿಬ್ಬಂದಿ ವರ್ಗ ಇದ್ದರು. ಎಂ.ಬಿ.ಕುದರಿ ಸ್ವಾಗತಿಸಿದರು. ಶ್ರೀಶೈಲ ನಾಂವಿ ನಿರೂಪಿಸಿದರು, ಸಿದ್ರಾಮ ಲೋಕನ್ನವರ ವಂದಿಸಿದರು.