ಸಕರ್ಾರಕ್ಕೆ ತೆರಿಗೆ ವಂಚನೆ: ಅನಧಿಕೃತ ಶುಂಠಿ ತೊಳೆಯುವ ಯಂತ್ರಗಳ ನಿಮರ್ಾಣ


ಲೋಕದರ್ಶನ ವರದಿ

ಮುಂಡಗೋಡ 9; ತಾಲೂಕಿನಲ್ಲಿ ಶುಂಠಿ ತೊಳೆಯುವ ಯಂತ್ರಗಳನ್ನು ಕೆಲವಡೆ ಅಳವಡಿಸಲಾಗಿದ್ದು ಇವುಗಳಿಗೆ ಯಾವುದೇ ಅಧಿಕೃತ ಪರವಾನಿಗೆ ಪಡೆಯದಿರುವುದು ಬೆಳಕಿಗೆ ಬಂದಿದೆ. ಸಕರ್ಾರಕ್ಕೆ ತೆರಿಗೆ ವಂಚನೆ ಮಾಡಿ, ಗ್ರಾಮ ಪಂಚಾಯತಗಳಿಂದ ಅಧಿಕೃತವಾಗಿ ಅನುಮತಿ ಪಡೆಯದೇ ಕೃಷಿ ಜಮೀನಿನ ಶರತ್ತು ಉಲ್ಲಂಘನೆ ಮಾಡಿ ಸಣ್ಣ ಕೈಗಾರಿಕೆಗಳು ತಲೆ ಎತ್ತುದ್ದಿದ್ದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ. 

ತಾಲೂಕಿನ ಹಿರೇಹಳ್ಳಿ, ಕಾತೂರ ಹಾಗೂ ಮುಂಡಗೋಡ ಹೊರವಲಯದಲ್ಲಿ ಹುಬ್ಬಳ್ಳಿ ಶರಶಿ ರಸ್ತೆಯಲ್ಲಿ (ಬಾಚಣಕಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ) ಬೇರೆ ಜಿಲ್ಲೆಯವರು ಶುಂಠಿ ಕ್ಲೀನ್ ಮಾಡುವ ಯಂತ್ರಗಳನ್ನು ಅಳವಡಿಸಿದ್ದಾರೆ. ರೈತರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರನ್ನು ನಂಬಿಸಿ, ಸರ್ಕರಕ್ಕೆ ತೆರಿಗೆ ವಂಚಿಸಿ ಕೃಷಿ ಭೂಮಿಯಲ್ಲಿ ಶರತ್ತು ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಗ್ರಾಮ ಪಂಚಾಯತ ಪಿಡಿಒಗಳು ಇಂತಹ ಅನಧಿಕೃತ ಯಂತ್ರಗಳ ಬಗ್ಗೆ ಸಂಬಂಧಿಸಿದ ಮಾಲಿಕರಿಗೆ ನೋಟಿಸ್ ನೀಡದೇ ಸುಮ್ಮನೆ ಹೊಂದಾಣಿಕೆಯಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೆಳಿಬರುತ್ತಿದೆ.

ಕೆಲವಡೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಎಂದು ದಾಖಲಾಗಿದ್ದರೂ ಪಕ್ಕದ ಹೊಲದ ಉತಾರ ತೋರಿಸಿ ಪರವಾನಿಗೆ ಪಡೆಯಲು ಪ್ರಯತ್ನಿಸಿರುವುದು ಕಂಡುಬಂದಿದೆ. ಸರ್ಕರದ ನಿಯಮಗಳು ಇಲ್ಲಿ ಸಾರಾಸಗಟಾಗಿ ಗಾಳಿ ತೂರಲಾಗಿದೆ. ಹಿರಿಯ ಅಧಿಕಾರಿಗಳು ದಾಳಿ ಮಾಡಿದರೆ ನಿಜಾಂಶ ಎನೆಂದು ತಿಳಿಯಲಿದೆ.