ತಾಂಬಾ; ಕೃಷಿ ಉತ್ಪನ್ನ ಮಾರುಕಟ್ಟೆಯ ದುಸ್ಥಿತಿ

ಲೋಕದರ್ಶನ ವರದಿ

ತಾಂಬಾ 04: ಕಿತ್ತು ಹೋದ ಬಾಗಿಲು, ಬಿರುಕು ಬಿಟ್ಟ ಗೋಡೆಗಳು, ಹಾಳೂರು ಹಂಪೆಯಂತಾಗಿರುವ ಕೋಣೆಗಳು, ದಿನಕ್ಕೊಂದಿಷ್ಟು ಕಳಚಿ ಬೀಳುತ್ತಿರುವ ಸಿಮೆಂಟ್, ಇದು ರೈತರಿಗಾಗಿ ಸರಕಾರ ನಿಮರ್ಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ದಾಸ್ತಾನು ಮಳಿಗೆ (ಗೋಡಾವನ್) ದುಸ್ಥಿತಿ. ಬರದ ನಾಡಿನ ರೈತರಿಗೆ ನೆರವಾಗಲು ಸರಕಾರ ಸುಮಾರು 4-5 ಲಕ್ಷ ವೆಚ್ಚ ಮಾಡಿ ಗೋಡಾವನ ಕಟ್ಟಿಸಿದೆ. ಆದರೆ ಸರಿಯಾದ ಉಪಯೋಗವಿಲ್ಲದೇ ಅದು ಇಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕಾಳು ಕಡಿ ದಾಸ್ತಾನು ಮಾಡಬೇಕೆಂದರೆ ಅದಕ್ಕೆ ಬಾಗಿಲುಗಳೇ ಇಲ್ಲ, ಇದ್ದ ಎರಡು ಕೋಣೆಗಳು ಉಪಯೋಗಕ್ಕೆ ಬಾರದೆ ಅನ್ಯ ಕಾರ್ಯಕ್ಕೆ ಬಳಕೆಯಾಗುತ್ತಿವೆ. 

ವ್ಯಾಪಾರಸ್ಥರಿಗೆ ಕೊಡಲು ಸರಿಯಾದ ಸ್ಥಳಾವಕಾಶ ಇಲ್ಲ. ಕೊಳಾಯಿ ನೀರು ಎಲ್ಲೆಂದರಲ್ಲಿ ಹರಿದು ಆವರಣ ಕೊಳಚೆಯಂತಾಗಿದೆ.

ಸುತ್ತಲಿನ ಹತ್ತು ಗ್ರಾಮಗಳಿಗೆ ಇದು ಪ್ರಮುಖ ಮಾರುಕಟ್ಟೆ ಆದರೆ ವ್ಯಾಪಾರಸ್ಥರಿಗೆ ಕುಳಿತುಕೊಳ್ಳಲು ಸೂಕ್ತ ಸ್ಥಳವಿಲ್ಲ. ಆವರಣದಲ್ಲಿ ಕಟ್ಟೆ ನಿಮರ್ಿಸಲಾಗಿದೆ. ಮಾರುಕಟ್ಟೆ ವಿಸ್ತೀರ್ಣಕ್ಕೆ ತಕ್ಕಂತೆ ಇನ್ನೂ ಎರಡು ಮೂರು ಕಟ್ಟೆಗಳು ಬೇಕಾಗುತ್ತದೆ. ಇಲ್ಲಿ ನಿರ್ಮಾನಿಸುವ  ಸಂತೆ ಕಟ್ಟೆ ಯಾತಕ್ಕು ಬಾರದಾಗಿದೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಸಂತೆಗೆ ಬಂದ ವ್ಯಾಪಾರಸ್ಥರಿಗೆ ಶುದ್ಧ ಕುಡಿಯುವ ನೀರಿಗೂ ಇಲ್ಲಿ ಬರ. ಹೀಗಾಗಿ ಅತೀ ದೊಡ್ಡದಾದ ಈ ಮಾರುಕಟ್ಟೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. 

ಸರಕಾರ ಮಾರುಕಟ್ಟೆಗೆ ಕಾಯಕಲ್ಪ ನೀಡಿ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.