ತಾಂಬಾ: ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ

ಲೋಕದರ್ಶನ ವರದಿ

ತಾಂಬಾ 12: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರು ಇಂಡಿ ತಶಿಲ್ದಾರ ಕಾರ್ಯಯಲಕ್ಕೆ ಮುತ್ತಿಗೆ ಹಾಕಿ ಪ್ರತ್ತಿಭಟಣೆ ನಡೆಸಿ ತಶಿಲ್ದಾರರಾದ ಚಿದಾನಂದ ಗುರುಸ್ವಾಮಿ ಅವರಿಗೆ  ಮನವಿ ಸಲ್ಲಿಸಿದರು.

ಪ್ರತಿಭಟನೆ ನೆತೃತ್ವ ವಹಿಸಿದ್ದ ತಾಪಂ ಸದಸ್ಯ ಪ್ರಕಾಶ ಮುಂಜಿ ಹಾಗೂ ರೈತ ಮುಖಂಡರಾದ ಭೀರಪ್ಪಾ ಮ್ಯಾಗೇರಿ ಮಾತನಾಡಿ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂದು ಕೆಬಿಜೆಎನ್ನೆಲ್ ಮುಖ್ಯ ಎಂಜನಿಯರ ಹಾಗೂ ಜಿಲ್ಲಾ ಅಧಿಕಾರಿಗಳು ಸಿಂದಗಿ ಮತಕ್ಷೇತ್ರದ ಶಾಸಕರಿಗೆ, ಇಂಡಿ ಮತಕ್ಷೇತ್ರದ ಶಾಸಕರಿಗೆ ಮನವಿಸಲ್ಲಿಸಲಾಗಿದೆ ಆದರು ಏನುಪ್ರಯೊಜನ ವಾಗಿಲ್ಲ, ಎಂದು ಆಕ್ರೋಶ ವ್ಯೇಕ್ತ ಪಡಿಸಿದರು.

ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಬೀಡುತ್ತಿಲ್ಲ. ಸಿಂದಗಿ ತಾಲೂಕಿನ ಹಾಗೂ ಇಂಡಿ ತಾಲೂಕಿನ ಬಹು ಬಾಗಗಳಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಅವಲಂಬಿತ ರೈತರಿದ್ದಾರೆ. ಈ ಭಾಗದಲ್ಲಿ ಸಕಾಲದಲ್ಲಿ ಮಳೆ ಭಾರದಿರುವುದರಿಂದ ಬರಗಾಲ ಛಾಯೆ ಮೂಡಿದೆ. ರೈತರು ಬಿತ್ತನೆ ಮಾಡಿ ಬೆಳೆದ ಬೆಳೆ ಒಣಗುತ್ತಿವೆ. ಕಾಲುವೆಗೆ ಅಗಸ್ಟ್ ಕೊನೆ ವಾರದವರೆಗೂ ನೀರು ಬೀಡುತ್ತಾರೆ ಎಂದು ಅಧಿಕಾರಿಗಳ ಭರವಸೆಯನ್ನು ರೈತರು ನಂಬಿದ್ದರು. ಆದರೆ ಕಾಲುವೆಗೆ ನೀರು ಬಿಟ್ಟು ಮತ್ತೆ ಬಂದ್ ಮಾಡಿದ್ದರಿಂದ ರೈತರ ಜಮೀನುಗಳಿಗೆ ನೀರು ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಕಾಲೂವೆಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.

ರೈತರಾದ ರಾಯಗೊಂಡ ಪೂಜಾರಿ ಹೊನ್ನಪ್ಪಾ ಮ್ಯಾಗೇರಿ ಗುರುಸಂಗಪ್ಪಾ ಬಾಗಲಕೊಟ ನಿಂಗಪ್ಪಾ ಕಂಬಾರ ಶಂಖರ ಪ್ಯಾಟಿ, ಸಿದ್ದಣ ಕಿಣಗಿ, ಸುಭಾಷ ಅಳಗೊಂಡಗಿ,ಮಲಕಪ್ಪ ಕನ್ನೂರ,ಸಿದ್ದು ಬೂದಿಹಾಳ, ಮಾಹಾದೇವ ಮೂಲಿಮನಿ, ಸಂಜೀವ ಗೋರನಾಳ, ಬಸವರಾಜ ಉಪ್ಪಿನ, ಗುರಪ್ಪಾ ಜಂಬಗಿ, ಸಿದ್ದಗೊಂಡ ಹಿರೇಕುರಬರ, ಮಾಂತೇಶ ಬಡದಾಳ, ಮಹಮ್ಮದ ವಾಲಿಕಾರ, ಪೂಜಪ್ಪಾ ಸಿಂದಗಿ, ಪರಸಪ್ಪಾ ಕನಾಳ, ಮಾಹಾದೇವ ಪಾಟೀಲ, ಅಡವೆಪ್ಪಾ ರೋಟ್ಟಿ, ಜಮಾಲ ಉಜನಿ, ಶರಣಪ್ಪಾ ಗಬಸಾವಳಗಿ, ಕೃಷ್ಣಪ್ಪಾ ಪಾಟಿಲ, ಪೈಗಂಬರ ಹಚ್ಚಾಳ, ರಾಕೇಶ ಕಿಣಗಿ ಸೇರಿದಂತೆ ನೋರಾರು ರೈತರು ಭಾಗವಹಿಸಿದ್ದರು.