ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂತರರಾಜ್ಯ ಪ್ರವಾಸ ಭಾಗ್ಯ :ಡಾ. ಗೌಡಪ್ಪ ಬಲಕುಂದಿ
Talented students will be lucky to travel interstate: Dr. Gowdappa Balakundi
ಯಲಬುರ್ಗಾ 01 : ತಾಲೂಕಿನ ಕರಮುಡಿ ಗ್ರಾಮದ ಶಾಂತಮ್ಮ ಶರಣಪ್ಪ ಕಂಪಗೌಡ್ರ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಸಕ್ತ ವರುಷ 2025-26ರ ಎಸ್. ಎಸ್.ಎಲ್.ಸಿ. ಯಲ್ಲಿ ಪ್ರಥಮ ದ್ವಿತಿಯ ಹಾಗೂ ತೃತೀಯ ಸ್ಥಾನವನ್ನು ಪಡೆಯಲಿರುವ ವಿದ್ಯಾರ್ಥಿಗಳಿಗೆ ಹೊರರಾಜ್ಯ ಪ್ರವಾಸವನ್ನು ವಿಮಾನಯಾನದ ಮೂಲಕ ಉಚಿತವಾಗಿ ಕರೆದೊಯ್ದು ಆ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಥಳವನ್ನು ವೀಕ್ಷಿಸಲು ಅವಕಾಶವನ್ನು ಸ್ಥಳೀಯ ಮಾಜಿ ಸೈನಿಕರು ಹಾಗೂ ಬೆಂಗಳೂರಿನ ಇ.ಎಸ್.ಐ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರಣ್ಣ ವೀರಬಸಪ್ಪ ಅರಳಿ ರವರು ಕಲ್ಪಿಸಿ ಕೊಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ.ರಾಜ್ಯ ಸಮನ್ವಯ ಸಮಿತಿ ತಾಲೂಕ ಅಧ್ಯಕ್ಷರಾದ ಡಾ.ಗೌವಡಪ್ಪ ಬಲಕುಂದಿ ಅವರು ಹೇಳಿದರು. ಕರಮುಡಿ ಪ್ರೌಢ ಶಾಲೆಯ ಮಕ್ಕಳು ಚೆನ್ನಾಗಿ ಓದಿ ಇದೇ ಮಾರ್ಚ 18 ರಂದು ನಡೆಯುವ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶ ವಿಮಾನಯಾನ ಪ್ರಯಾಣವು ಪ್ರೇರಿಪಿಸುತ್ತದೆ ಹಾಗೂ ಅನ್ಯ ರಾಜ್ಯಗಳ ಸಂಸ್ಕೃತಿ ಅಲ್ಲಿನ ವಿದ್ಯಾರ್ಥಿಗಳು ಯಾವ ರೀತಿ ಸಾಧನೆ ಮಾಡುತ್ತಾರೆ
ಎನ್ನುವದನ್ನು ತಿಳಿದು ಕೊಳ್ಳಲು ಸಹಕಾರಿ ಆಗುವುದು ಮತ್ತು ಹೊರ ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಸದಾವಕಾಶವನ್ನು ಕಲ್ಪಿಸಿ ಕೊಡುವ ವೀರಣ್ಣ ಅರಳಿರವರನ್ನು ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಅಧ್ಯಕ್ಷರಾದ ಗೌಡಪ್ಪ ಬಲಕುಂದಿ ಹಾಗೂ ರಾಜ್ಯ ಸಮನ್ವಯ ಸಮಿತಿ ದೇವರಾಜ್ ಕಿನ್ನಾಳ.ಕವಿತಾ ಕಾಸಲ್. ಭೀಮಣ್ಣ ಕೊಳಜಿ. ದೊಡ್ಡಬಸಪ್ಪ ಹೂಗಾರ ಇನ್ನಿತರರು ವಿರಣ್ಣ ಅರಳಿಯವರಿಗೆ ಅನಬಿನಂದನೆಗಳನ್ನು ಸಲ್ಲಿಸಿದರು. ಕರಮುಡಿ ಶಾಲೆಯ ಮುಖ್ಯೋಪಾದ್ಯಾಯರಾದ ಬಸವರಾಜ ಕರಾಟೆ ಹಾಗೂ ಯಮನೂರ್ಪ ಹಾದಿಮನಿರವರು ಗ್ರಾಮದ ಸಂಘ ಸಂಸ್ಥೆಯ ಪ್ರತಿನಿಧಿಗಳು, ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಹಿರಿಯರು. ಶಿಕ್ಷಣ ಪ್ರೇಮಿಗಳು. ಮಕ್ಕಳಿಗೆ ಉಚಿತವಾಗಿ ವಿಮಾನಯಾನ ಪ್ರಯಾಣ ಮಾಡಿಸುವ ವೀರಣ್ಣ ಅರಳಿರವರನ್ನು ಅಭಿನಂಬಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 