ಹೆತ್ತವರನ್ನು ಕಾಳಜಿಯಿಂದ ನೋಡಿಕೊಂಡು ಒಳ್ಳೆಯ ಸುಸಂಸ್ಕೃತ ವ್ಯಕ್ತಿಗಳಾಗಿ: ಶಾಸಕ ಆಸೀಫ್ (ರಾಜು) ಸೇಠ್‌

ಹೆತ್ತವರನ್ನು ಕಾಳಜಿಯಿಂದ ನೋಡಿಕೊಂಡು ಒಳ್ಳೆಯ ಸುಸಂಸ್ಕೃತ ವ್ಯಕ್ತಿಗಳಾಗಿ: ಶಾಸಕ ಆಸೀಫ್ (ರಾಜು) ಸೇಠ್‌ Take care of your parents and become good, cultured individuals: MLA Asif (Raju) Seth

ಹೆತ್ತವರನ್ನು ಕಾಳಜಿಯಿಂದ ನೋಡಿಕೊಂಡು ಒಳ್ಳೆಯ ಸುಸಂಸ್ಕೃತ ವ್ಯಕ್ತಿಗಳಾಗಿ: ಶಾಸಕ ಆಸೀಫ್ (ರಾಜು) ಸೇಠ್‌

ಬೆಳಗಾವಿ, 04: ಟಾಟಾ ಕಂಪನಿಯು ದೇಶದ ಅತಿ ಹಳೆಯ ಮತ್ತು ದೊಡ್ಡ ಕಂಪನಿಯಾಗಿದ್ದು ಈ ಕಂಪನಿಗೆ ನೇಮಕಗೊಂಡಿರುವ ವಿದ್ಯಾರ್ಥಿಗಳು ಕಾರ್ಯ ಚಾತುರ್ಯದಿಂದ ಹೆಸರು ಗಳಿಸಬೇಕು. ವಿದ್ಯಾರ್ಥಿಗಳು ಉದ್ಯೋಗಸ್ಥರಾದ ಮೇಲೆ ಹೆತ್ತವರನ್ನು ಕಾಳಜಿಯಿಂದ ನೋಡಿಕೊಂಡು ಸುಸಂಕ್ಕೃತ ವ್ಯಕ್ತಿಗಳಾಗಬೇಕು ಎಂದು ಶಾಸಕರಾದ ಆಸೀಫ್ (ರಾಜು) ಸೇಠ್ ಅವರು ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಕ್ಯಾಂಪಸ್ ಟು ಕಾರ​‍್ೋರೇಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಶಿಕ್ಷರನ್ನು ಸದಾ ಗೌರವಿಸಬೇಕು ಮತ್ತು ಶಿಕ್ಷಕರ, ಪಾಲಕರ ಮತ್ತು ತಾವು ಕಲಿತಂತ ಸಂಸ್ಥೆಯ ಹೆಸರನ್ನು ಬೆಳೆಸಬೇಕು. ಈ ಪ್ರಗತಿಯನ್ನು ಮಹಿಳಾ ಸಬಲೀಕರಣದ ಐತಿಹಾಸಿಕ ಘಟ್ಟವಾಗಿದ್ದು, ಗ್ರಾಮೀಣ ಭಾಗದ ವಿಧ್ಯಾರ್ಥಿನಿಯರನ್ನು ಉದ್ಯೋಗಪರ ಕೌಶಲ್ಯದೊಂದಿಗೆ ಸಜ್ಜುಗೊಳಿಸಿದ ಕಾರ್ಯಕ್ಕೆ ಶಾಸಕರಾದ ಆಸೀಫ್ (ರಾಜು) ಸೇಠ್ ಅವರು ಶ್ಲಾಘಿಸಿದರು 

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್‌.ಆರ್‌. ಪಾಟೀಲ ಅವರು ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯವು ಇಂದು ಮಹತ್ವದ ಮೈಲಿಗಲ್ಲು ತಲುಪಿದೆ. ಟಾಟಾ ಎಲೆಕ್ಟ್ರಾನಿಕ್ಸ್‌, ಫಾಕ್ಸ್ಕಾನ್, ಟಾಟಾ ಮೋಟಾರ್ಸ್‌ ಮತ್ತು ಹೊಂಡಾ ಮುಂತಾದ ಖ್ಯಾತ ಕಂಪನಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಾರ​‍್ೊರೇಟ್ ಬದುಕಿನ್ನು ಮಾಡುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು. 

ಹಿಂದಿನ ಮೂರೂ ವರ್ಷಗಳಲ್ಲಿ ಸುಮಾರು 730 ವಿದ್ಯಾರ್ಥಿನಿಯರು ನಮ್ಮ ಮಹಾವಿದ್ಯಾಲಯದಿಂದ ಆಯ್ಕೆ ಹೊಂದಿ ಬೇರೆ ಬೇರೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ. ಜುಲೈನಲ್ಲಿ ನಡೆದ ಉದ್ಯೋಗ ಮೇಳದಲ್ಲಿ 680 ವಿದ್ಯಾರ್ಥಿನಿಯರ ಪೈಕಿ 311 ವಿದ್ಯಾರ್ಥಿನಿಯರು ನೇರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ. ಉದ್ಯೋಗ ಮೇಳ ಆಯ್ಕೆಯಾದ 60 ವಿದ್ಯಾರ್ಥಿನಿಯರು ಖಿಂಖಿಂ ಇಟಜಛಿಣಡಿಠಜಿ ಕಂಪನಿಗೆ ಸೇವೆಗೆ ಸಲ್ಲಿಸಲು ಹೊರಟಿರುವು ನಮ್ಮ ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ಮಾತನಾಡಿದರು.  

ಸದರಿ ಸಂದರ್ಭದಲ್ಲಿ ಪ್ಲೇಸ್‌ಮೆಂಟ್ ಸೆಲ್ ಸಂಯೋಜಕರಾದ ಡಾ. ಶಂಶುದ್ದೀನ್ ಎಂ. ನದಾಫ್, ಡಾ. ರಮೇಶ ಎಸ್‌. ಮಾಂಗಳೇಕರ, ಡಾ. ಜ್ಯೋತಿ ಯಮಕನಮರ್ಡಿ, ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.