ತರಬೇತಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
Take advantage of the training program - Additional District Collector Sidrameshwar
ತರಬೇತಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ 05 : ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ 42 ದಿನಗಳ ಕಾಲ ಹಮ್ಮಿಕೊಂಡಿರು ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಗ್ರುಫ್ ಸಿ ವೃಂದದ ಲಿಪಿಕ ಪ್ರಶಿಕ್ಷಾರ್ಥಿಗಳು ಪಡೆದುಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಮಂಗಳವಾರ ಕೊಪ್ಪಳ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇತ್ತಿಚೆಗೆ ಆಯ್ಕೆಯಾದ ಗ್ರೂಫ್ ಸಿ ಲಿಪಿಕ ವೃಂದದ ಪ್ರಶಿಕ್ಷಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಡಳಿತಾತ್ಮಕವಾಗಿ ಹೆಚ್ಚಿನ ಸುಧಾರಣೆಯಾಗಬೇಕಾದರೆ ತಮ್ಮ ತಮ್ಮ ಕಛೇರಿ ವಿಷಯಗಳ ಕುರಿತು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಯಾವುದೆ ಫೈಲಿಗೆ ಸಹಿ ಮಾಡಬೇಕಾದರೆ ಅದನ್ನು ಓದಿ ತಿಳಿದುಕೊಂಡೆ ಮಾಡಬೇಕು. ಗೊತ್ತಿಲ್ಲದ ವಿಷಯಗಳ ಕುರಿತು ಚರ್ಚೆಮಾಡಿ ತಿಳಿದುಕೊಳ್ಳಬೇಕು. 42 ದಿನಗಳ ತರಬೇತಿ ಅವಧಿಯಲ್ಲಿ ತಮ್ಮ ಇಲಾಖೆಗಳ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಹೋಗಬೇಕೆಂದು ಹೇಳಿದರು.ಈ ಹಿಂದೆ ಹಲವಾರು ಜನರು ತರಬೇತಿ ಪಡೆಯದೆ ಕೆಲಸ ಮಾಡಿದವರು ಇದ್ದಾರೆ ತಾವು ತರಬೇತಿ ಪಡೆಯುತ್ತಿರುವ ಸುದೈವಿಗಳು ಹಾಗಾಗಿ ಈ ತರಬೇತಿಯ ಲಾಭ ಪಡೆಯಬೇಕು. ಪ್ರತಿ ಸಲ ಜಿಲ್ಲಾ ತರಬೇತಿ ಸಂಸ್ಥೆಯಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಕೆಲವೊಂದು ಇಲಾಖೆಯವರು ತಮ್ಮ ಸಿಬ್ಬಂದಿಗಳನ್ನು ಕಳಿಸುತ್ತಿರಲಿಲ್ಲ ಹಾಗಾಗಿ ಅವರನ್ನು ಕಳಿಸಲು ಆಯಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ತರಬೇತಿ ವೃತ್ತಿ ಜೀವನದಲ್ಲಿ ಅತ್ಯವಶ್ಯಕ ಎಂದು ಹೇಳಿದರು.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ್ ಮಾತನಾಡಿ ತರಬೇತಿ ನಮ್ಮ ವೃತ್ತಿ ಜೀವನದ ಕೊನೆ ಕ್ಷಣದವರೆಗೆ ಬೇಕು. ವೃತ್ತಿ ಜೀವನದಲ್ಲಿ ನಾವು ಮೇಲೆ ಬರಬೇಕಾದರೆ ಕೌಶಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಬೇಸಿಕ್ ಗೊತ್ತಿಲ್ಲದಿದ್ದರೆ ನಾವು ಯಾವ ತಂತ್ರಾಂಶ ಕಲಿತರು ಅದು ತಲೆಯಲ್ಲಿ ಹೋಗುವುದಿಲ್ಲ ಹಾಗಾಗಿ ಪ್ರಶಿಕ್ಷಾರ್ಥಿಗಳಿಗೆ ಬುನಾದಿ ತರಬೇತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ವತಿಯಿಂದ ಇತ್ತಿಚೆಗೆ ನೇಮಕಗೊಂಡಿರುವ ಗ್ರುಫ್ ಸಿ ಲಿಪಿಕ ವೃಂದದ ಪ್ರಶಿಕ್ಷಾರ್ಥಿಗಳಿಗೆ ಆಗಸ್ಟ್. 5 ರಿಂದ ಸೆಪ್ಟೆಂಬರ್ 30 ರವರೆಗೆ 42 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸರಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಹೇಗೆ ಮಾಡಬೇಕು. ಅಧಿಕಾರಿಗಳೊಂದಿಗೆ ಹೇಗೆ ಕೆಲಸ ಮಾಡಬೇಕು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವ ಹಲವಾರು ವಿಷಯಗಳ ಕುರಿತು ಸಂಪನ್ಮೂಲ ವ್ಯಕಿಗಳನ್ನು ಕರೆದು ಪ್ರಶಿಕ್ಷಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ ಇದು ನಾನು ಬಂದಾಗಿನಿಂದ ನಾಲ್ಕನೇ ತರಬೇತಿ ಮಾಡುತ್ತಿದ್ದೆವೆ. ಕಲಿಕೆ ಹುಟ್ಟಿನಿಂದ ಸಾಯುವವರೆಗೆ ನಿರಂತರವಾಗಿ ಎಂದು ಹೇಳಿದರು.ಕೃಷ್ಣಮೂರ್ತಿ ದೇಸಾಯಿ, ಮೈಲಾರ್ ರಾವ್ ಕುಲಕರ್ಣಿ, ಲಾಯಕ್ ಅಲಿ, ಎಂ.ಗುರುರಾಜ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೊಪ್ಪಳ ಗ್ರೇಡ್-2 ತಹಶಿಲ್ದಾರ ಗವಿಸಿದ್ದಪ್ಪ ಮಣ್ಣೂರ. ವಾರ್ತಾ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ. ಸುರೇಶ ಜಿ. ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕರಾದ ಶ್ರೀ ಧರ್ ಮತ್ತು ನರ್ಮದಾ ಸೇರಿದಂತೆ ಗ್ರುಪ್ ಸಿ ಲಿಪಿಕ ವೃಂದದ ಪ್ರಶಿಕ್ಷಾರ್ಥಿಗಳು ಭಾಗವಹಿಸಿದ್ದರು.ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗೆ ಆಹ್ವಾನಕೊಪ್ಪಳ 05 : ಕೊಪ್ಪಳ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯದಿಂದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಚಿಡಿಟಿಚಿಣಚಿಞ ಃಡಿಚಿಟಿ ಊಜಚಿಟಣ ಋಣಚಿಣತಜ (ಏಚಿಃಊಋ) ಕಾರ್ಯಕ್ರಮದಡಿಯಲ್ಲಿ ಓಜಣಡಿಠಠಣ ಠ ಕಥಿಛಿಚಿಟಿ ಠ ಒಜಜಛಿಚಿಟ ಓಜಿಜಿಛಿಜಡಿ, ಓಣಢಿಜ, ಕಥಿಠಜಡಿಠಿಣ, ಖಠಿಜಜಛಿ ಖಿಜಡಿಚಿಠಿಣ, ಅಟಟಿಛಿಚಿಟ ಥಿಛಿಠಠಣ, ಆಣಡಿಛಿಣ ಅಠಓಡಿಜಟಿಚಿಣಠ, ಈ ಹುದ್ದೆಗಳ ಅರ್ಹತಾ ಪಟ್ಟಿ, ತಿರಸ್ಕೃತ ಪಟ್ಟಿ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳ ಕಛೇರಿಯ ಸೂಚನಾ ಫಲಕಕ್ಕೆ ಹಾಗೂ ಕೊಪ್ಪಳ ಜಿಲ್ಲಾ ವೆಬ್ ತಾಣದಲ್ಲಿ ಪ್ರಚುರಪಡಿಸಿದ್ದು, ಆಗಸ್ಟ್ 14ರವರೆಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಟಗಿ ಆದರ್ಶ ವಿದ್ಯಾಲಯ: 6ನೇ ತರಗತಿಯ ಖಾಲಿ ಸೀಟುಗಳ ಭರ್ತಿಗೆ ಕೌನ್ಸಲಿಂಗ್‌ಕೊಪ್ಪಳ 05: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿಯ ಖಾಲಿ ಸೀಟುಗಳ ಭರ್ತಿಗೆ ಕೌನ್ಸಲಿಂಗ್ ಮೂಲಕ ದಾಖಲಾತಿ ಮಾಡಲಾಗುತ್ತಿದೆ ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇಟಗಿ ಆದರ್ಶ ವಿದ್ಯಾಲಯದ 2025-26ನೇ ಸಾಲಿಗೆ ಈಗಾಗಲೇ ಮೂರು ಹಂತದಲ್ಲಿ 6ನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳಲಾಗಿದ್ದು, ಇನ್ನು 42 ಸೀಟುಗಳು ಖಾಲಿ ಉಳಿದಿರುತ್ತವೆ. ಈ ಖಾಲಿ ಸೀಟುಗಳ ಭರ್ತಿಗೆ 1:30 ಅನುಪಾತದಂತೆ ಮೀಸಲಾತಿವಾರು ಅರ್ಹ ವಿದ್ಯಾರ್ಥಿಗಳ ಪಟ್ಟಿಯ ಪ್ರಕಾರ (ಒಂದು ಸೀಟಿಗೆ 30 ವಿದ್ಯಾರ್ಥಿಗಳಂತೆ) ಕೌನ್ಸಲಿಂಗ್ ಮೂಲಕ ದಾಖಲಾತಿ ಮಾಡಿಕೊಳ್ಳಲು ಆಗಸ್ಟ್ 11 ಮತ್ತು ಆ. 12 ರಂದು ಸಾಮಾನ್ಯ, ಪ್ರವರ್ಗ-1 ಹಾಗೂ ಪ್ರವರ್ಗ-3ಬಿ ಅಭ್ಯರ್ಥಿಗಳಿಗೆ ಮತ್ತು ಆ. 13 ಮತ್ತು ಆ. 14 ರಂದು ಎಸ್.ಸಿ, ಎಸ್.ಟಿ, ಪ್ರವರ್ಗ-2ಎ ಹಾಗೂ ಪ್ರವರ್ಗ-2ಬಿ ಅಭ್ಯರ್ಥಿಗಳಿಗೆ ಇಟಗಿ ಆದರ್ಶ ವಿದ್ಯಾಲಯದಲ್ಲಿ ಕೌನ್ಸಲಿಂಗ್ ನಡೆಸಲಾಗುವುದು. 1:30 ಪಟ್ಟಿಯಲ್ಲಿರುವ ಅರ್ಹ ವಿದ್ಯಾರ್ಥಿಗಳು ಕೌನ್ಸಲಿಂಗ್ ದಿನದಂದು ಬೆಳಿಗ್ಗೆ 10 ಗಂಟೆಗೆ ಸಂಬಂಧಿಸಿದ ದಾಖಲಾತಿಗಳಾದ ಆಯ್ಕೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ ಪ್ರತಿ, ಬೇರೆ ತಾಲೂಕು ಅಥವಾ ಜಿಲ್ಲೆಯ ವಿದ್ಯಾರ್ಥಿಯಾಗಿದ್ದಲ್ಲಿ ಯಲಬುರ್ಗಾ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಮುಂತಾದ ದಾಖಲಾತಿಗಳೊಂದಿಗೆ ಕೌನ್ಸಲಿಂಗ್‌ಗೆ ಹಾಜರಾಗಬೇಕು. 1:30 ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಆದರ್ಶ ವಿದ್ಯಾಲಯ ಇಟಗಿ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಯಲಬುರ್ಗಾ ಇಲ್ಲಿ ಪಾಲಕರ-ವಿದ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 