ಲೋಕದರ್ಶನ ವರದಿ
ಶಿರಹಟ್ಟಿ 24: ಮೊನ್ನೆ ಸುರಿದ ಭಾರಿ ಮಳೆಯಿಂದ ಜಲಾವೃತಗೊಂಡ ತಾಲೂಕಿನ ಜಲ್ಲಿಗೇರಿ ತಾಂಡಾಕ್ಕೆ ತಾಲೂಕಾ ದಂಡಾಧಿಕಾರಿ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ನೀರು ಮನೆಗಳಿಗೆ ಹಾಗೂ ಊರಿನಲ್ಲಿ ಜಲಾವೃತಗೊಳ್ಳಲಿಕ್ಕೆ ಕಾರಣವಾದ ಒಳ ಹರಿವು ಎಲ್ಲಿಂದ ಬರುತ್ತದೆ ಎಂದು ಕಂಡು ಹಿಡಿಯಲಿಕ್ಕೆ ಸವರ್ೇ ಇಲಾಖೆಗೆ ತಿಳಿಸಲಾಗಿದ್ದು, ಈ ಇಲಾಖೆಯ ವರದಿ ಬಂದ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಈ ತುತರ್ಾಗಿ ಇಲ್ಲಿ ನೆರೆದ ನೀರನ್ನು ತೆರವುಗೊಳಿಸಲು ಜೆಸಿಬಿಗಳಿಂದ ಗಟಾರ ನಿಮರ್ಿಸಿ ಹೊರಹಾಕಲು ವ್ಯವಸ್ಥೆ ಲೋಕೋಪಯೋಗಿ ಇಲಾಖೆಗೆ ತಿಳಿಸಿ ವ್ಯವಸ್ಥೆ ಮಾಡಿಸುತ್ತೇನೆ ಎಂದು ತಿಳಿಸಿದರು