‘ಕನಕದಾಸ ಸಾಹಿತ್ಯದಲ್ಲಿ ಮಹಿಳಾ ನೋಟ’ ವಿಚಾರ ಸಂಕಿರಣ ಕಾರ್ಯಕ್ರಮ

Symposium Program on 'Women's View in Kanakadasa Literature'

‘ಕನಕದಾಸ ಸಾಹಿತ್ಯದಲ್ಲಿ ಮಹಿಳಾ ನೋಟ’ ವಿಚಾರ ಸಂಕಿರಣ ಕಾರ್ಯಕ್ರಮ 

ವಿಜಯಪುರ 19 : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕ ಅಧ್ಯಯನ ಪೀಠ ಹಾಗೂ ಬೆಂಗಳೂರಿನ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ ‘ಕನಕದಾಸ ಸಾಹಿತ್ಯದಲ್ಲಿ ಮಹಿಳಾ ನೋಟ’ ವಿಚಾರ ಸಂಕಿರಣ ಕಾರ್ಯಕ್ರಮ ಇದೇ ದಿ. 26 ರಂದು ಬೆಳಿಗ್ಗೆ 10:30 ಗಂಟೆಗೆ ವಿವಿಯ ಕನ್ನಡ ಭವನದಲ್ಲಿ ಜರುಗಲಿದೆ.  

ಕಾರ್ಯಕ್ರಮವನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ ಭಾಗವಹಿಸಲಿದ್ದಾರೆ.  

ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ‘ಕನಕದಾಸರ ಕೀರ್ತನೆಗಳಲ್ಲಿ ಸ್ತ್ರೀ ಜಗತ್ತು’ ಎಂಬ ವಿಷಯದ ಕುರಿತು ಕುಂದಾಪುರದ ಡಾ.ಜಯಪ್ರಕಾಶ ಶೆಟ್ಟಿ ವಿಚಾರವನ್ನು ಮಂಡಿಸಲಿದ್ದು, ಎರಡನೇಯ ಗೋಷ್ಠಿಯಲ್ಲಿ ಕಲಬುರಗಿಯ ಡಾ.ಶಿವಗಂಗಾ ರುಮ್ಮಾ ‘ಮೋಹನ ತರಂಗಿಣಿ ಕಾವ್ಯದಲ್ಲಿ ಮಹಿಳೆ’ ಎಂಬ ವಿಷಯದ ಕುರಿತು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ. ಮೂರನೇ ಗೋಷ್ಠಿಯಲ್ಲಿ ಬೆಂಗಳೂರಿನ ಡಾ.ಎಲ್‌.ಜಿ.ಮೀರಾ ‘ನಳಚರಿತ್ರೆಯಲ್ಲಿ ಕೌಟುಂಬಿಕ ಸ್ವರೂಪ’ ಎಂಬ ವಿಷಯದ ಕುರಿತು ವಿಚಾರವನ್ನು ಮಂಡಿಸಲಿದ್ದು, ನಾಲ್ಕನೇ ಗೋಷ್ಠಿಯಲ್ಲಿ ಗಂಗಾವತಿಯ ಡಾ.ಮುಮ್ತಾಜ್ ಬೇಗಂ ‘ಕನಕದಾಸರ ಕಾವ್ಯಗಳಲ್ಲಿ ವರ್ತಮಾನದ ಸ್ತ್ರೀ ಸಂವೇದನೆ’ ಎಂಬ ವಿಷಯದ ಕುರಿತು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ ಎಂದು ವಿವಿಯ ಕನಕ ಅಧ್ಯಯನ ಪೀಠದ ಸಂಯೋಜಕ ಡಾ.ಸುರೇಶ ಕೆ.ಪಿ ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಸದಸ್ಯ ಬನಶಂಕರಿ ವ್ಹಿ. ಅಂಗಡಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.