ಸೂಳೆ ಮುರ್ಕಿ ಕ್ರಾಸ್ ನಲ್ಲಿ ಕಾರ್ ಬೆಂಕಿಗೆ ಆಹುತಿ ಪ್ರಕರಣ: ಕೊಲೆ ಆರೋಪಿ ಪ್ರಮೋದ್ ನಾಯ್ಕ ಪತ್ತೆ ಹಚ್ಚಿದ ಪೊಲೀಸರು
Sule Murki Cross car fire case: Police have found the murder accused Pramod Naik
ಕಾರವಾರ 24 : ಹೊನ್ನಾವರದ ಸೂಳೆ ಮುರ್ಕಿ ಕ್ರಾಸ್ ಬಳಿ ಜ. 7 ರಂದು ನಡೆದಿದ್ದ ಕಾರ್ ಅಪಘಾತ ದಲ್ಲಿ ಸಿದ್ದಾಪುರ ಮೂಲದ ಮಂಜುನಾಥ ಹಸ್ಲರ್ ಮತ್ತು ಚಂದ್ರಶೇಖರ್ ಹಸ್ಲರ್ ಸಹೋದರರ ಸಜೀವ ದಹನ ಘಟನೆ , ಅಪಘಾತವಲ್ಲ, ಕೊಲೆ ಎಂದು ಹೊನ್ನಾವರ ಪೊಲೀಸರು ಪತ್ತೆ ಹಚ್ಚಿದ್ದಾರೆ.ಹಣದ ವ್ಯವಹಾರ, ಸಾಲ ಮರಳಿ ಕೊಡಲಾಗದೆ , ಸಹೋದರರನ್ನು ಕೊಲೆ ಮಾಡಿದವ ಸಿದ್ದಾಪುರದ ಚಂದ್ರ ಘಟಕಿ ಗ್ರಾಮದ ಪ್ರಮೋದ್ ನಾಯ್ಕ ಎಂಬಾತನನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಜನವರಿ 7 ರಂದು ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಬೆಂಕಿ ಗಾಹುತಿಯಾದ ಕಾರಿನಲ್ಲಿ ಎರಡು ಮೃತ ದೇಹಗಳು ಕಾರಿನೊಂದಿಗೆ ಸುಟ್ಟ ಕರಕಲಾದ ಸ್ವರೂಪದಲ್ಲಿ ಪತ್ತೆಯಾಗಿದ್ದವು. ಹೊನ್ನಾವರ ಪೊಲೀಸರು ಆಕಸ್ಮಿಕ ಅಪಘಾತ ಎಂದು ಮೊದಲು ದೂರು ತೆಗೆದುಕೊಂಡಿದ್ದರು.
ನಂತರ ಮೃತರ ಸಹೋದರ ಉಮೇಶ್ ನೀಡಿದ ದೂರಿನ ಮೇಲೆ ತನಿಖೆ ಪ್ರಾರಂಭಿಸಿದ್ದರು. ಪ್ರಮೋದ್ ನಾಯ್ಕ ಘಟನೆ ನಂತರ ಊರಿಗೆ ಬಾರದೆ ತಲೆ ಮರೆಸಿಕೊಂಡಿದ್ದ. ಉಮೇಶ್ ಹಸ್ಲರ್ ಸಹಚರ , ಕಾರ್ ಅಪಘಾತ ಸ್ಥಳಕ್ಕೆ ಹೋದಾಗ , ಪ್ರಮೋದ್ ನಾಯ್ಕ ಕಾಲು ಹಾಗೂ ಕೈ ಭಾಗದಲ್ಲಿ ಸುಟ್ಟ ಗಾಯಗಳನ್ನು ಗುರುತಿಸಿದ್ದಲ್ಲದೇ,ಪೊಲೀಸರಿಗೆ ಸುಳಿವು ನೀಡಿದ್ದ ಎನ್ನಲಾಗಿದೆ. ಸುಳೆಮೂರ್ಕಿ ಕಾರ್ ಸುಟ್ಟ ದುರಂತದಲ್ಲಿ , ಕಾರ್ ನೊಳಗೆ ಇದ್ದವರು, ಸಿದ್ದಾಪುರ ತಾಲೂಕಿನ ಕುಡಗುಂದ ಸನಿಹದ ಅಳವಳ್ಳಿ ಮೂಲದ ಮಂಜುನಾಥ ಹಸ್ಲರ್ (35) ಮತ್ತು ಚಂದ್ರಶೇಖರ್ ಹಸ್ಲರ್ (30) ಎಂಬುದು ದೃಢಪಟ್ಟಿತ್ತು. ಇನ್ನು ಕುಟುಂಬದವರು ಇದು ಆಕಸ್ಮಿಕ ಅಪಘಾತವಲ್ಲ ಕೊಲೆ ಎಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಹೊನ್ನಾವರ ಪೊಲೀಸರು, ಪ್ರಮೋದ್ ನಾಯ್ಕ ಮೇಲೆ ಅನುಮಾನಗೊಂಡು ಆತನನ್ನು ತನಿಖೆ ನಡೆಸಲು ಮುಂದಾಗ , 14 ದಿನದ ಬಳಿಕ ಆತನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದವು ಎಂದು ಎಸ್ಪಿ ದೀಪನ್ ತಿಳಿಸಿದ್ದಾರೆ .
ಕೊಲೆಯಾದ ಚಂದ್ರಶೇಖರ ಮತ್ತು ಮಂಜುನಾಥ್ ಇಬ್ಬರು ಪ್ರಮೋದ ಜೊತೆಗೆ , ವ್ಯವಹಾರಕ್ಕಾಗಿ ಐದು ಲಕ್ಷ ಹಣದ ವಹಿವಾಟು ನಡೆದಿತ್ತು. ಹಾಗೂ ಇನ್ಶುರೆನ್ಸ್ ಹಣದ ಮೇಲೆ ಕಣ್ಣಿತ್ತು. ಪ್ರಮೋದ್ ನಾಯ್ಕ ತಂದ ಸಾರಾಯಿಯಲ್ಲಿ ಕೀಟನಾಶಕ ಸೇರಿಸಿ ,ಕುಡಿಯಲು ಸಹೋದರರಿಗೆ ಕೊಟ್ಟಿದ್ದ . ಕೀಟನಾಶಕ ಮಿಶ್ರಿತ ಮದ್ಯ ಕುಡಿದು ಸಾವನ್ನಪ್ಪಿದ ನಂತರ, ಮೃತದೇಹಗಳನ್ನು ಕಾರ್ ನಲ್ಲಿ ಸಾಗಿಸಿ, ಸೂಳೆ ಮುರ್ಕಿ ಕ್ರಾಸ್ ನಲ್ಲಿ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನ್ನು ತನಿಖೆಯ ವೇಳೆ ಪ್ರಮೋದ್ ನಾಯ್ಕ ಬಾಯ್ಬಿಟ್ಟಿದ್ದಾನೆ. ಈ ಕೃತ್ಯಕ್ಕೆ ತನ್ನ ಸ್ನೇಹಿತರ ಸಹಾಯ ಪಡೆದಿದ್ದ ಎಂದು ಎಸ್ಪಿ ಮಾದ್ಯಮಗಳಿಗೆ ವಿವರಿಸಿದ್ದಾರೆ. ಕಾರನ್ನ ಸೂಳೆ ಮುರ್ಕಿ ಕ್ರಾಸ್ ನಲ್ಲಿ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಪ್ರಮೋದ್ ನಾಯ್ಕ ತಪ್ಪೊಪ್ಪಿಕೊಂಡಿದ್ದಾನೆ. ಸಿದ್ದಾಪುರ ಚಂದ್ರಘಟಕಿ ಪ್ರಮೋದ್ , ಪೊಲೀಸರ ವಶದಲ್ಲಿದ್ದು ತನಿಖೆ ಮುಂದುವರೆದಿದೆ. ಉಳಿದ ಆರೋಪಿಗಳಾದ ಸನ್ಯ ಅಲಿಯಾಸ್ ರತ್ನಾಕರ ನಾಯ್ಕ ಮತ್ತು ಹೇಮಂತ್ ನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 