ಕಬ್ಬು ಕಟಾವು ಸಾಗಣೆ ವೆಚ್ಚ ಬಿಟ್ಟು ಟನ್ ಗೆ 3,100 ಬೇಡಿಕೆ
Sugarcane harvest demand 3,100 per ton excluding transportation costs
ಕಬ್ಬು ಕಟಾವು ಸಾಗಣೆ ವೆಚ್ಚ ಬಿಟ್ಟು ಟನ್ ಗೆ 3,100 ಬೇಡಿಕೆ
ಹೂವಿನಹಡಗಲಿ 19 : ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಬಿಟ್ಟು ಪ್ರತಿ ಟನ್ ಕಬ್ಬಿಗೆ ?3100 ದರ ನಿಗದಿಯಾಗಬೇಕು. ಇಲ್ಲದಿದ್ದರೆ ಮೈಲಾರ ಮತ್ತು ವಿಜಯನಗರ ಸಕ್ಕರೆ ಕಾರ್ಖಾನೆ ಬಂದ್ ಮಾಡುತ್ತೇವೆಂದು ರೈತರು ನಿರ್ಧರಿಸಿದ್ದಾರೆ.ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ಜರುಗಿದ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಅಧಿಕಾರಿಗಳ ಸಭೆಯಲ್ಲಿ, ಕಬ್ಬು ಬೆಳೆಗಾರರ ಸಂಘ ಜಿಲ್ಲಾಧ್ಯಕ್ಷ ರವಿನಾಯ್ಕ ಮತ್ತು ತಾಲೂಕು ಅಧ್ಯಕ್ಷ ಹಾಲೇಶ ಬೆನ್ನೂರು ಮಾತನಾಡಿ, ಕಾರ್ಖಾನೆ ಮಾಲಿಕರು, ರೈತರು ಬೆಳೆದ ಕಬ್ಬಿಗೆ ಸರಿಯಾದ ದರ ನಿಗಧಿ ಮಾಡಿಕೊಂಡು ಸಭೆಗೆ ಬಂದಿಲ್ಲ.ಇತ್ತ ವಿಜಯನಗರ ಕಾರ್ಖಾನೆ ದರ ? 3329 ರೈತ ರಿಗೆ ಒಪ್ಪಿಗೆ ಇಲ್ಲ ಎಂದರು. ಬೀಜ,ರಸಗೊಬ್ಬರ. ಓಷಧಿ ಬೆಲೆ ಮತ್ತು ಕಾರ್ಮಿಕರ ಕೂಲಿ ಹೆಚ್ಚಾಳದಿಂದ ಖರ್ಚು ಹೆಚ್ಚಾಗಿ ಮಾಡಲಾಗಿದೆ. ಈ ಕೂಡಲೇ ಕಾರ್ಖಾನೆ ಯವರು ಮೇಲಾಧಿಕಾರಿಗಳ ಜತೆಗೆ ಚರ್ಚಿಸಿ, ಕಬ್ಬು ಕಟಾವು ಮತ್ತು ಸಾಗಾಣೆ ವೆಚ್ಚ ಬಿಟ್ಟು ?3100 ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಕಾರ್ಖಾನೆ ಗೆ ಬೀಗ ಹಾಕುತ್ತೇವೆಂದು ಎಚ್ಚರಿಸಿದರು. ರೈತ ರು ಮನವಿಯನ್ನು ತಹಶಿಲ್ದಾರರ ಸಂತೋಷ ಕುಮಾರ ಅವರಿಗೆ ಸಲ್ಲಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳವುದಾಗಿ ಹೇಳಿದರು. ಸಭೆಯಲ್ಲಿ ಕೃಷಿ ನಿರ್ದೇಶಕ ಮಹಮ್ಮದ್ ಆಶ್ರ್, ತಾ.ಪಂ.ಹೇಮಂದ್ರಿ ನಾಯ್ಕ, ಮೈಲಾರ ಕಾರ್ಖಾನೆ ರಾಜಕುಮಾರ ಪಾಟೀಲ, ವಿಜಯನಗರ ಕಾರ್ಖಾನೆ ದೇವೀರ್ಪ, ರೈತ ಸಂಘದ ಅದ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಶಿವರಾಜ್ ಹೊಳಗುಂದಿ, ಚಂದ್ರಶೇಖರ ಇದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 