ಕಬ್ಬು ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ

ಲೋಕದರ್ಶನ ವರದಿ

ಬೆಳಗಾವಿ 31:  ಕಬ್ಬು ಬೆಳೆಯು ದೇಶದ ಒಂದು ಪ್ರಮುಖ ಬೆಳೆಯಾಗಿರುತ್ತದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಕನರ್ಾಟಕ, ತೆಲಂಗಣಾ, ತಮಿಳುನಾಡು ರಾಜ್ಯಗಳಲ್ಲಿ ಮುಖ್ಯವಾಗಿ ಕಬ್ಬನ್ನು ಬೆಳೆಯಲಾಗುತ್ತದೆ. ಕಬ್ಬು ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುತ್ತದೆ. ಆದರೆ ಕಡಿಮೆ ಮಳೆ ಬರುವ ಪ್ರದೇಶಗಳಲ್ಲಿ ಕಬ್ಬು ಬೆಳೆಯಲಾಗುತ್ತಿದೆ. 

ಹವಾಮಾನ ಬದಲಾವನೆಗೆ ಸಂಬಂಧಿಸಿದಂತೆ ಹೆಚ್ಚಿನ ಹವಾಮಾನ ವೈಪರಿತ್ಯಗಳು, ಮಳೆಯ ವಿನ್ಯಾಸದ ಪ್ರತಿಕೂಲತೆಯಿಂದಾಗಿ ಕಬ್ಬು ಬೆಳೆಗೆ ತೊಂದರೆಯಾಗುತ್ತದೆ. ಬಹಳಷ್ಟು ಸಕ್ಕರೆ ಕಾಖರ್ಾನೆಗಳಿಗೆ ಕಬ್ಬಿನ ಅಭಾವ ಇದ್ದು ಕಬ್ಬು ನುರಿಸುವ ಹಂಗಾಮು 4-6 ತಿಂಗಳಿಗೆ ಸೀಮಿತವಾಗಿರುತ್ತದೆ. ಸಕ್ಕರೆ ಉದ್ದಿಮೆಯು ಒಂದು ಪ್ರಮುಖ ಕೃಷಿ ಆಧಾರಿತ ಉದ್ದಿಮೆಯಾಗಿದ್ದು ಗ್ರಾಮೀಣ ಪ್ರದೇಶದ ಆಥರ್ಿಕತೆ ಹಾಗೂ ಉದ್ಯೋಗಕ್ಕೆ ಸಹಕಾರಿಯಾಗಿದೆ. 

ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಅಶೋಕ ದಳವಾಯಿ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರ, ನವದೆಹಲಿ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ ಭಾರತದಲ್ಲಿ ಸಕ್ಕರೆ ಗಡ್ಡೆಯ ಪ್ರಾಮುಖ್ಯತೆಯ ಕುರಿತು ತಿಳಿಸಿದರು. ಸಭೆಯಲ್ಲಿ ಮಾತನಾಡುತ್ತಾ ಸಕ್ಕರೆ ಉದ್ದಿಮೆಯ ಬೆಳವಣಿಗೆಗೆ ಸಕ್ಕರೆ ಗಡ್ಡೆಯ ಬೇಸಾಯದ ಅವಶ್ಯಕತೆಯ ಕುರಿತು ವಿವರಿಸಿದರು. ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರ, ನವದೆಹಲಿ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಯು ಜಂಟಿಯಾಗಿ ಸಕ್ಕರೆ ಗಡ್ಡೆಯ ಅಭಿವೃದ್ಧಿಗೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಪ್ರಯೋಗಗಳನ್ನು  ನಡೆಸಲು ಗುರುತಿಸಲಾಗಿದೆ ಎಂದು ತಿಳಿಸಿದರು. 

ಡಾ.ಆರ್. ಬಿ. ಖಾಂಡಗಾವೆ, ನಿದರ್ೇಶಕರು, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಇವರು ಸ್ವಾಗತ ಭಾಷಣದಲ್ಲಿ ಮಾತನಾಡಿ ಸಕ್ಕರೆ ಗಡ್ಡೆಯ ಯೋಜನೆಯನ್ನು ಸಕ್ಕರೆ ಕಾಖರ್ಾನೆಗಳನ್ನು ಒಳಗೊಂಡಂತೆ ಮಾಡುವುದು ಮತ್ತು ಇದು ಎಥನಾಲ್ ಉತ್ಪಾಧನಾ ಘಟಕಕ್ಕೆ ಉತ್ತಮ ಫೀಡ ಸ್ಟಾಕ ಆಗುವುದು ಮತ್ತು ಸಕ್ಕರೆ ಕಾಖರ್ಾನೆಗಳ ಆಥರ್ಿಕ ಕ್ಷಮತೆಗೆ ಸಹಕಾರಿಯಾಗುವುದು ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಸಕ್ಕರೆ ಗಡ್ಡೆಯ ಬೆಳೆಯನ್ನು ಕಬ್ಬಿಗೆ ಪಯರ್ಾಯವಾಗಿ ಬೆಳೆಯುವ ಕಾರ್ಯಸಾಧ್ಯತೆಗಳನ್ನು ಪರೀಕ್ಷಿಸುವ ಅವಶ್ಯಕತೆ ಇರುತ್ತದೆ. ಉಷ್ಣವಲಯದ ಸಕ್ಕರೆ ಗಡ್ಡೆಗೆ ಮೂರು ಪ್ರಯೋಜನಗಳು ಇರುತ್ತದೆ. ಅವುಗಳು ಕಡಿಮೆ ಅವಧಿಯಲ್ಲಿ ಬೆಳೆಯುವುದು (4-5 ತಿಂಗಳು), ಕಡಿಮೆ ನೀರಿನ ಅವಶ್ಯಕತೆ (ಕಬ್ಬು ಬೆಳೆಗೆ ಅವಶ್ಯವಿರುವ ಒಂದನೇ ಮೂರು ಭಾಗ) ಹಾಗೂ ಅಧಿಕ ಏಥನಾಲ್ ಇಳುವರಿ (2500-3000 ಲೀಟರ್ ಪ್ರತಿ ಎಕರೆಗೆ). ಕಡಿಮೆ ಅವಧಿಯ ಬೆಳೆಯಾಗಿದ್ದು ವರ್ಷಕ್ಕೆ ಎರಡು ಬೆಳೆಯನ್ನು ಬೆಳೆಯಬಹುದಾಗಿದೆ. ಲವಣಯುಕ್ತ ಮಣ್ಣಿನಲ್ಲಿ ಕೂಡ ಬೆಳೆಯಬಹುದಾಗಿದೆ ಹಾಗೂ ಇದು ಉತ್ತಮ ಮೇವು ಬೆಳೆಯು ಕೂಡ ಆಗಿರುತ್ತದೆ. 

ಸಕ್ಕರೆ ಗಡ್ಡೆಯ ಪ್ರಾಯೋಗಿಕ ಬೆಳೆಯು ಪಂಜಾಬ್ ಮತ್ತು ಹರಿಯಾಣಾ ರಾಜ್ಯಗಳಲ್ಲಿ ಯಶಸ್ವಿಯಾಗಿರುತ್ತದೆ. ಸದರಿ ಬೆಳೆಯ ಪ್ರಯೋಗಗಳಗನ್ನು ವಿವಿಧ ಕೃಷಿ ಹವಾಮಾನ ವಲಯಗಳಲ್ಲಿ ಬೆಳೆಯುವುದು ಉಪಯುಕ್ತವಾಗಿದೆ ಹಾಗೂ ಇದು ಸಕ್ಕರೆ ಹಾಗೂ ಕೃಷಿ ಆಧಾರಿತ ಉದ್ಯಮದ ಬಲವರ್ಧನೆಗೆ ಸಹಕಾರಿಯಾಗಿದೆ. ಸದರಿ ವಿಷಯದ ಕುರಿತು ಚಚರ್ಿಸುವ ಅವಶ್ಯಕತೆ ಇರುತ್ತದೆ. 

ಆದ್ದರಿಂದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಇವರು ದಿ.31ರಂದು ಬೆಳಗ್ಗೆ 09.00 ರಿಂದ ಮಧ್ಯಾಹ್ನ 03.00 ರವರೆಗೆ "ಹವಾಮಾನ ಬದಲಾವಣೆ, ಕಬ್ಬು ಮತ್ತು ಪಯರ್ಾಯಗಳ ಮೇಲೆ ಅದರ ಪರಿಣಾಮ" ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಮಳೆಗಾಲ ಪ್ರದೇಶ ಪ್ರಾಧಿಕಾರ, ಭಾರತ, ಸೆಸ್ವೆಂಡರಹ್ಯಾವ್, ಬೆಲ್ಜಿಯಂ, ಆಗ್ರೊಹೌಸ್ ಅಂತರಾಷ್ಟ್ರೀಯ ಪ್ರೈ. ಲಿ., ಬಾರಾಮತಿ ಶುಗರ್ಸ್ ಲಿ., ಬಾರಾಮತಿ ಮಹಾರಾಷ್ಟ್ರ ಇವರ ಸಹಯೋಗದೊಂದಿಗೆ ಬೆಳೆಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.

ಸಮ್ಮೇಳನದಲ್ಲಿ ಭಾರತ ಮತ್ತು ಯೂರೋಪದಿಂದ ಸಕ್ಕರೆ-ಬಿಟ್ ತಜ್ಞರು ಸಕ್ಕರೆ ಬಿಟ್ ಮೌಲ್ಯ ಸರಪಳಿಯನ್ನು ಉದ್ದೇಶಪೂರ್ವಕವಾಗಿ ಭಾಗವಹಿಸಿದರು ಹಾಗೂ ರಾಜ್ಯದ ವಿವಿಧ ಸಕ್ಕರೆ ಕಾಖರ್ಾನೆಗಳಿಂದ ಸುಮಾರು 100 ಗನ ಸಿಬ್ಬಂದಿಗಳು ಭಾಗವಹಿಸಿದರು