ಸಕ್ರೆ ಪ್ರಮಾಣ ಕಡ್ಡಾಯತೆಗೆದುಹಾಕಿ ಪ್ರತಿ ಟನ್ನಿಗೆ ಒಂದೆ ಬಿಲ್ ನೀಡಬೇಕು

ಸಕ್ರೆ ಪ್ರಮಾಣ ಕಡ್ಡಾಯತೆಗೆದುಹಾಕಿ ಪ್ರತಿ ಟನ್ನಿಗೆ ಒಂದೆ ಬಿಲ್ ನೀಡಬೇಕು Sugar quantity should be removed and a single bill should be issued for each ton

ಸಂಬರಗಿ, 13 : ಸರ್ಕಾರವು ಕಬ್ಬಿನ ರಿಕವರಿ ಸಕ್ರೆ ಪ್ರಮಾಣ ಕಡ್ಡಾಯ ತೆಗೆದುಹಾಕಿ 3,300 ರೂ. ಗಳ ಒಂದೇ ಬಿಲ್ ಪ್ರತಿಫಟನ್ನಿಗೆನೀಡಬೇಕು ಮತ್ತು ಮಹಾರಾಷ್ಟ್ರದಿಂದ ಕಬ್ಬನ್ನು ಸಾಗಿಸುವ ಕಾರ್ಖಾನೆಯು ಅಲ್ಲಿಗೆ ಕಬ್ಬಿಗೆ 3,500 ರೂ. ಗಳ ದರವನ್ನು ಪಾವತಿಸುತ್ತಿದ್ದರೆ, ಅಲ್ಲಿಯೂ ಸಹ ಅದೇ ಮೊತ್ತವನ್ನು ಪಾವತಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಮಹಾದೇವ್ ಮಡಿವಾಳ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಸಿದ್ಧರಾಯ್ ಭೋಸಗೆ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರ 10.25 ಸಕ್ಕರೆ ಪ್ರಮಾಣ ರಿಕವರಿ ಇದೆ ಈ 10.25 ಕ್ಕಿಂತ ಹೆಚ್ಚನ ಸರ್ಕಾರ ಅದನ್ನು 11.25 ಎಂದು ಮಾಡಿದೆ, ಅದನ್ನು ರದ್ದುಗೊಳಿಸಬೇಕು. ಅದೇ ಸಮಯದಲ್ಲಿ, ಕಾರ್ಖಾನೆಯು 3,300 ರೂ.ಗಳ ಒಂದೇ ಬಿಲ್ ನೀಡಬೇಕಾದರೂ, ತಾಲೂಕಿನ ರೈತರು ಮುಧೋಳದಲ್ಲಿ  ರೈತರ ಆಂದೋಲನವನ್ನು ಬೆಂಬಲಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾರ್ಖಾನೆಗಳು ಮಹಾರಾಷ್ಟ್ರದಲ್ಲಿ ವಿಭಿನ್ನ ದರಗಳನ್ನು ಹೊಂದಿ ಕೊಬ್ಬು ಸಾಗಾಣಿಕೆ ಮಾಡುತ್ತಿದ್ದಾರೆ ಕರ್ನಾಟಕದ ಗಡಿಯಲ್ಲಿರುವ ಕಾರ್ಖಾನೆಗಳು ವಿಭಿನ್ನ ದರಗಳನ್ನು ಮಾಡುತ್ತಿದ್ದರೆ, ರಸ್ತೆಯಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿ ಕಾರ್ಖಾನೆಯನ್ನು ಮುಚ್ಚುತ್ತಾರೆ. ಸಕ್ಕರೆ ಕಾರ್ಖಾನೆಗಳು ತಮ್ಮ ದರಗಳನ್ನು ಕಾರ್ಖಾನೆ ತಮ್ಮ ದರವನ್ನು ಬೋರ್ಡ್ದಲ್ಲಿ ಅಳವಡಿಸಬೇಕು ಇಡಬೇಕು ಎಂದು ಅವರು ಎಚ್ಚರಿಸಿದರು. 

 ಕಾರ್ಖಾನೆಯು ಅವುಗಳನ್ನು ಹಾಕದಿದ್ದರೆ, ಅದರ ಎದುರಿಗೆ ಹೋರಾಟ ಮಾಡಿ ಕಾರ್ಖಾನೆಗಳು ಮುಚ್ಚಲ್ಪಡುತ್ತವೆ. ಕಾರ್ಖಾನೆಗಳ ನಿರ್ವಹಣೆಗೆ ತಹಸೀಲ್ದಾರ್ ಗಮನಹರಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ರೈತ ಸಂಘದ ತಾಲೂಕಾ ಅಧ್ಯಕ್ಷ ಮಹದೇವ್ ಮಡಿವಾಳ ಉತ್ತರ ಕರ್ನಾಟಕ ಅಧ್ಯಕ್ಷ ರಮೇಶ ಮಡಿವಾಳ್ ಕಿರಣ್ ಮಿಸಾಳ, ಮನೋಹರ ಮಿಸಾಳ,ನಿಗನಗೌಡ ಪಾಟೀಲ್ ರಮೇಶ್ ಕುಂಬಾರ ಪಿಂಟು ಕಬಡ್ಡಿ ಜಗದೀಶ್ ಮುರಗುಡಿ ಹನುಮಂತ ಮಹೇಶ ವಡ್ಗೆ ಹಿರ​‍್ಪ ಖೋತ್ ರುದ್ರ​‍್ಪ ಕುಂಬಾರ ಮಂಜುಳಾ ಹದ್ಮಾಪುರೆ ಶಾಂತಾ ಕೋಳಿ ಅಪಾರ ಸಂಖ್ಯೆಯ ರೈತ ಬಾಂಧವರು ಉಪಸ್ಥಿತರಿದ್ದರು.