ಯಶಸ್ವಿಯಾದ ಬಸವ ಸಂಸ್ಕೃತಿ ಅಭಿಯಾನ ಪೂರ್ವಭಾವಿ ಸಭೆ
ಯಶಸ್ವಿಯಾದ ಬಸವ ಸಂಸ್ಕೃತಿ ಅಭಿಯಾನ ಪೂರ್ವಭಾವಿ ಸಭೆ
ಕೊಪ್ಪಳ 11: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಮತ್ತು ಕೊಪ್ಪಳದ ಸರ್ವ ಬಸವ ಪರ ಸಂಘಟನೆಗಳ ಸಹಯೋಗದೊಂದಿಗೆ ಮುಂದಿನ ತಿಂಗಳು ಸೆಪ್ಟಂಬರ್ 8 ರಂದು ಕೊಪ್ಪಳದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಯಶಸ್ವಿ ಆಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲು ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು.
ಸರಕಾರಿ ವಕೀಲರಾದ ಬಿ.ಎಸ್. ಪಾಟೀಲರು ಮಾತನಾಡಿ ತಮ್ಮಿಂದಲೇ ಹಣಕಾಸಿನ ಸಂಗ್ರಹ ಆರಂಭವಾಗಲಿ ಎಂದು ಹದಿನೈದು ಸಾವಿರ ರೂಪಾಯಿ ದೇಣಿಗೆ ನೀಡಿ, ಕೊಪ್ಪಳದಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಬೇಕಾದ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದರು.
ಗಂಗಾವತಿಯ ಶ್ರೀಶೈಲ ಪಟ್ಟಣಶೆಟ್ಟರು, ಎ.ಕೆ. ಮಹೇಶ ಕುಮಾರ, ಸಿದ್ದಣ್ಣ ಜತ್ಲಿ, ವೀರಣ್ಣ ಅರಹುಣಸಿ, ಚನ್ನಬಸವಣ್ಣ ಕೊಟಗಿ, ಕುಷ್ಟಗಿಯ ಮಾಜಿ ಶಾಸಕರಾದ ಶರಣಪ್ಪ, ಟಿ ಬಸವರಾಜ, ಕೊಪ್ಪಳದ ಮಲ್ಲಿಕಾರ್ಜುನ ಬಳ್ಳೊಳ್ಳಿ ಗುರುರಾಜ ಹಲಗೇರಿ, ಸತೀಶ ಕೊತಬಾಳ, ಗಾಳೆಪ್ಪ ಕಡೆಮನಿ, ಆನಂದ ಅಳವಂಡಿ, ಗುಡದಪ್ಪ ಹಡಪದ, ವೀರಣ್ಣ ಚಾಕಲಬ್ಬಿ, ಶರಣ ಬಸನಗೌಡ ಪಾಟೀಲ, ಶಿವಬಸಯ್ಯ ವೀರಾಪುರ ಹಿರೇಮಠ, ಎಂ. ಬಸವರಾಜಪ್ಪ ಇಂಜಿನಿಯರ್, ಶಿವಕುಮಾರ ಕುಕನೂರ, ದಾನಪ್ಪ ಶೆಟ್ಟರ, ವೀರಣ್ಣ ಸಂಕ್ಲಾಪುರ, ಮಹೇಶ ಬಳ್ಳಾರಿ, ವೀರೇಶ ಕೊಪ್ಪಳ, ರಮೇಶ ಕವಲೂರ, ಗವಿಸಿದ್ದಪ್ಪ ಹಂಡಿ, ರಾಮು ಪೂಜಾರ, ಆನಂದ ಹಳ್ಳಿಗುಡಿ, ಕದಳಿ ವೇದಿಕೆಯ ನಿರ್ಮಲ ಬಳ್ಳೊಳ್ಳಿ, ಅಪರ್ಣ ಬಳ್ಳೊಳ್ಳಿ, ಅನ್ನಪೂರ್ಣ ಮನ್ನಾಪುರ, ಸೌಮ್ಯ ನಾಲವಾಡ, ಅರ್ಚನಾ ಸಸಿಮಠ, ಅರುಣ ನರೇಂದ್ರ, ಮಂಜುಳಾ ಹುರಕಡ್ಲಿ, ಬಸವಶ್ರೀ ಸೋಮನಾಳ ಸೇರಿದಂತೆ ಗಂಗಾವತಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾ ತಾಲೂಕುಗಳ ವಿವಿಧ ಬಸವಪರ ಸಂಘಟನೆಗಳ ನಾಲ್ಕುನೂರಕ್ಕೂ ಹೆಚ್ಚಿನ ಜನ ಪಾಲ್ಗೊಂಡು ಕೊಪ್ಪಳ ಬಸವ ಸಂಸ್ಕೃತಿ ಅಭಿಯಾನದ ಸರ್ವಸಿದ್ಧತೆಯ ಕುರಿತು ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ವರ್ತಕ ಸಿದ್ದಣ್ಣ ನಾಲವಾಡ ಮತ್ತು ಅಶೋಕ ಕುಂಬಾರ ತಲಾ 5,000 ರೂ.ಗಳನ್ನು, ಗಂಗಾವತಿಯ ಚನ್ನಬಸವೇಶ್ವರ ಚಾರಿಟೇಬಲ್ ಟ್ರಸ್ಟ್‌ನವರು 5 ಕ್ವಿಂಟಲ್ ಅಕ್ಕಿಯ ವಾಗ್ದಾನ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಕಾರ್ಯದರ್ಶಿ ರಾಜೇಶ ಸಸಿಮಠ ಮತ್ತು ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ ಸಭೆಯ ನಿರ್ವಹಣೆ ಮಾಡಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 