ಶ್ರಮಪಟ್ಟು ಶ್ರದ್ಧೆ, ಏಕಾಗ್ರತೆಯಿಂದ ಓದಿದರೆ ಯಶಸ್ಸು ಸಾಧ್ಯ: ಮೆಣಸಿನಕಾಯಿ
ನೇಸರಗಿ 09: ವಿದ್ಯಾರ್ಥಿಗಳು ಶ್ರಮಪಟ್ಟು ಶ್ರದ್ಧೆ, ಏಕಾಗ್ರತೆಯಿಂದ ಓದಿದರೆ ಯಶಸ್ಸು ಸಾಧ್ಯ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕ ಅಧ್ಯಕ್ಷ ಸಿ.ವಾಯ್.ಮೆಣಸಿನಕಾಯಿ ಹೇಳಿದರು.
ನೇಸರಗಿ ಗ್ರಾಮದ ಕರ್ನಾಟಕ ಚೌಕದಲ್ಲಿ ನಡೆದ ಕ್ರಿಯೆಟಿವ್ ಕ್ಯಾಟರ್ ಪಿಲ್ಲರ್ ಎಜುಕೇಶನ್ ಸೊಸೈಟಿಯ ಜೊಲಿ ಕಿಡ್ಸ್ ಪ್ರಿ ಸ್ಕೂಲ್ ನ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,ವಿದ್ಯಾರ್ಥಿಗಳು ಬಾಲ್ಯದಲ್ಲಿ ಗುರುಹಿರಿಯರು, ಶಿಕ್ಷಕರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಕಷ್ಟ ಪಟ್ಟು ಕಲಿಕೆಯಲ್ಲಿ ತೊಡಗಿ ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು.
ಗ್ರಾ. ಪಂ ಸದಸ್ಯ ನಿಂಗಪ್ಪ ತಳವಾರ ಮಾತನಾಡಿ, ವಿದ್ಯಾರ್ಥಿಗಳು ಸಹನೆ,ಶಿಸ್ತು ಬದ್ದ ಜೀವನ ರೂಪಿಸಿಕೊಳ್ಳಬೇಕೆಂದರು. ಉತ್ತಮ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಗ್ರಾ.ಪಂ ಅಧ್ಯಕ್ಷ ವೀರಭದ್ರ ಚೋಬಾರಿ, ಉಪಾದ್ಯಕ್ಷೆ ಖಲಿದಾಬಾನು ಬಾಗವಾನ, ದೀಪಾ ಅಗಸಿಮನಿ, ಮಲ್ಲಿಕಾರ್ಜುನ ಸೋಮನ್ನವರ, ಸುಶೀಲಾ ತುಬಾಕಿ, ಸಿದ್ದವ್ವ ಚಿಗರಿ, ಮಾಜಿ ಸೈನಿಕರ ಸಂಘದ ಅದ್ಯಕ್ಷ ಈರ್ಪ ಸೋಮನ್ನವರ, ಉಪಾದ್ಯಕ್ಷ ಕಾಡಪ್ಪ ಗಡದವರ, ಮಹಾದೇವ ಹಂಚಿನಮನಿ, ದ್ಯಾಮಣ್ಣ ಗುಜನಟ್ಟಿ, ಲಗಮಪ್ಪ ರಾಮಣ್ಣವರ, ವೀರ್ಪ ಚಿಗರಿ, ಮುರಗೇಂದ್ರ ಮದನಬಾವಿ, ಬಸವರಾಜ ಹಂಚಿನಮನಿ, ಬಸನಾಯ್ಕ ನಾಯ್ಕ, ಮಲಗೌಡ ಪಾಟೀಲ, ಮಲ್ಲಿಕಾರ್ಜುನ ಕುರಗುಂದ, ಶಿಕ್ಷಕರು, ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶಿಕ್ಷಕಿ ಆಯೇಶಾ ನೇಸರಗಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.