ಸಹಾಯಧನ ವಿತರಣಾ ಕಾರ್ಯಕ್ರಮ
ಲೋಕದರ್ಶನ ವರದಿ
ಹಾವೇರಿ01 : ಮಕ್ಕಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಅರಸೋಜಿರಾವ್ ಧರ್ಮಸಂಸ್ಥೆಯವರು ರಾಜ್ಯದ ಎಲ್ಲ ಜಿಲ್ಲೆಯ ಮರಾಠ ಸಮಾಜದ ವಿದ್ಯಾಥರ್ಿಗಳಿಗೆ ಸಹಾಯಧನ ನೀಡುತ್ತಿರುವ ಕೆಲಸ ಶ್ಲಾಘನೀಯ ಎಂದು ಮರಾಠ ಸಮಾಜದ ಮುಖಂಡರು, ವಕೀಲರಾದ ಪ್ರಕಾಶ ಮುಂಜೋಜಿ ಹೇಳಿದರು. ಇಲ್ಲಿನ ಶಿವಾಜಿ ನಗರದ 1 ನೇ ಕ್ರಾಸಿನ ಮರಾಠ ಭವನದಲ್ಲಿ ಆಯೋಜಿಸಿದ ಅರಸೋಜಿರಾವ್ ಧರ್ಮಸಂಸ್ಥೆಯ ವತಿಯಿಂದ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು.
ರಾಜ್ಯದಲ್ಲಿನ ವಿದ್ಯಾಥರ್ಿಗಳಿಗೆ 23 ಲಕ್ಷ ರೂಗಳನ್ನು ನೀಡಲಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ 3-4 ಲಕ್ಷ ರೂಗಳನ್ನು ಮರಾಠ ಸಮಾಜದ ವಿದ್ಯಾಥರ್ಿಗಳಿಗೆ ಇಂದು ವಿತರಿಸಲಾಗುತ್ತಿದೆ. ಅರಸೋಜಿರಾವ್ ತಮ್ಮ ನೆನಪಿನಾರ್ಥ ಇಂತಹ ಕಾರ್ಯ ಮಾಡುವಂತೆ ತಮ್ಮ ಆಸ್ತಿಯ ಬಗ್ಗೆ ಬರೆದು ಇಡಲಾಗಿದ್ದು, ಅವರ ಶೈಕ್ಷಣಿಕ ಕ್ಷೇತ್ರದ ಅಭಿಮಾನವನ್ನು ತೊರಿಸುತ್ತದೆ. ಈ ಕೆಲಸ ಮುಂದುವರಿಸುತ್ತಿರುವ ಧರ್ಮಸಂಸ್ಥೆಯವರಿಗೆ ಅಭಿನಂದನೆ. ವಿದ್ಯಾಥರ್ಿಗಳು ಇದರ ಸದುಪಯೋಗ ಪಡಿಸಿಕೊಂಡು ಮಹಾನ್ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು. ಟ್ರಸ್ಟಿಯ ಪದಾಧಿಕಾರಿಗಳಾದ ಡಾ|| ಕೆ ಜಿಯೋಜಿರಾವ್ ಹಾಗೂ ಕೃಷ್ಣಮೂತರ್ಿ ಮಾತನಾಡಿ ಅರಸೋಜಿರಾವ್ ಅವರ ಆಶಯದಂತೆ ನೆನಪಿನಾರ್ಥ ವಿದ್ಯಾಥರ್ಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾಡಲಾಗುತ್ತಿದ್ದು, ಸಮಾಜದ ವಿದ್ಯಾಥರ್ಿಗಳು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೆ ಸಾರ್ಥಕವಾಗುತ್ತದೆ. ಶ್ರಮವಹಿಸಿ ಅಧ್ಯಯನ ಮಾಡುವ ಮೂಲಕ ತಮ್ಮ ಜೀವನದಲ್ಲಿ ವಿದ್ಯಾಥರ್ಿಗಳು ಸಾಧನೆ ಮಾಡಿದರೆ ಇಂತಹ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು. ಮರಾಠ ಸಮಾಜದ ಮುಖಂಡರಾದ ಉಮೇಶ ವಾಘ.ಜಗತಾಫ್.ಸಿಕೆ ಜಾಧವ್.ಧರ್ಮಸಂಸ್ಥೆಯ ಮಾನೇಜರ ರಾಮರಾವ್.ನಗರಸಭೆ ಸದಸ್ಯರಾದ ಚನ್ನಮ್ಮ ಬ್ಯಾಡಗಿ.ಕೆಕೆ ಜಾಧವ್.ದತ್ತಾತ್ರೇಯ ಘಾಟಗೆ.ಮಾಲತೇಶ ಕದಂ.ಶ್ರೀಮತಿ ಲಕ್ಷ್ಮೀಬಾಯಿ ಕಲಾಟೆ. ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 