ಓದು ಕಲಿಯುವ ವಿದ್ಯಾರ್ಥಿಗಳು ಕೆಟ್ಟ ವಿಚಾರ ಬಿಟ್ಟು ಗುರಿಯ ಕಡೆ ಗಮನ ವಹಿಸಬೇಕು
ಕೊಪ್ಪಳ 23: ನಗರದ ಶ್ರೀಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಮತ್ತು ಗ್ರಾಮೀಣ ವಿಕಾಸ ಸಂಸ್ಥೆಯಿಂದ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಮನೋಭಾವನೆಯಿಂದ ಸುಲಭ ಕಲಿಕೆ ಕಾರ್ಯಗಾರವನ್ನು ಗುರುವಾರದಂದು ಬೆಳಗ್ಗೆ 10-30 ಗಂಟೆಗೆ ಜರುಗಿತು.
ಕಾರ್ಯಗಾರದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಅಂಬರೀಶ್ ಕರಡಿ ವಹಿಸಿದ್ದರು. ಕಾರ್ಯಗಾರದಲ್ಲಿ ರೋಹನ್ ಶಿರಿ ಮತ್ತು ಶಾಮಿಶಿರಿ ಇವರು ಮಾತನಾಡಿ ವಿದ್ಯಾರ್ಥಿಗಳು ಓದಲು ಕುಳಿತುಕೊಳ್ಳುವ ಮೊದಲು ಹಲವಾರು ಕೆಟ್ಟ ವಿಚಾರಗಳು ಬರುವುದು ಸಹಜ ಅವುಗಳನ್ನು ಮನಸ್ಸಿನಿಂದ ದೂರ ಮಾಡಬೇಕು. ದೇವರು ನಮಗೆ ಕೊಟ್ಟ ವರವಾದ ಮೆದುಳನ್ನು ಸಮತೋಲವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು ಅಂದಾಗ ಮಾತ್ರ ಓದಿದ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಮೊದಲು ಮನಸ್ಸನ್ನು ನಮ್ಮ ಅಧೀನದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದ ಅವರು ಅದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳನ್ನು ಮಾಡಿ ತೋರಿಸಿದರು ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಅತ್ಯಂತ ಖುಷಿಯಿಂದ ಭಾಗವಹಿಸಿದರು.
ಈ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿಯರಾದ ಸಾವಿತ್ರಿ ರೆಡ್ಡೀರ್ ನಿರೂಪಿಸಿದರು ರೇಣುಕಾ ಚಲವಾದಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಥಮಿಕ ಶಾಲೆಯ ಮುಖ್ಯಸ್ಥರಾದ ಎಂ. ಎನ್ ಕಮ್ಮಾರ್ ಹಾಗೂ ಶಿಕ್ಷಕರುಗಳಾದ ಎಸ್ ಗುಂಡನಗೌಡ್ರು ಎಂ.ಎಸ್ ಶೆಟ್ಟರ್ ನಾಗರಾಜ್ ಬಹದ್ದೂರ್ ಬಂಡಿ, ಯಲ್ಲಪ್ಪ ಡೈರಿಮನಿ, ಜೆ ಕರಿಬಸಪ್ಪ ಹೆಚ್ ಎಂ ವಂದಾಲಿ ಎಚ್‌ಎಮ್ ಗಾಳಿ, ಕವಿತಾ ಮನು, ಪ್ರೇಮಾ ದಸ್ತೇನವರ್, ಪವಿತ್ರ ಗೊಲ್ಲರ್ , ನೇತ್ರಾವತಿ.ಎನ್ ಎಂ, ಶ್ರೀನಿಧಿ ಕು: ಸಿಂಧು ಪಾಟೀಲ್, ಕುಮಾರಿ ಗೀತಾಂಜಲಿ, ರತ್ನ ಕೋಗಳೇ, ವೈಷ್ಣವಿ ಕಟ್ಟಿ, ಮರಿಯಮ್ಮ ಮತ್ತಿತರರು ಭಾಗವಹಿಸಿದ್ದರು.