ಜೀವನವೆಂಬ ಪರೀಕ್ಷೆಯಲ್ಲಿ ಪಾಸ್ ಆಗುವುದೇ ಮುಖ್ಯ ಎಂಬ ಮಾತನ್ನು ವಿದ್ಯಾರ್ಥಿಗಳು ಎಂದು ಮರೆಯಬಾರದು : ಸ್ವಾಮೀಜಿ

Students should not forget the saying that passing the exam of life is important: Swamiji

ಜೀವನವೆಂಬ ಪರೀಕ್ಷೆಯಲ್ಲಿ ಪಾಸ್ ಆಗುವುದೇ ಮುಖ್ಯ ಎಂಬ ಮಾತನ್ನು ವಿದ್ಯಾರ್ಥಿಗಳು ಎಂದು ಮರೆಯಬಾರದು : ಸ್ವಾಮೀಜಿ 

ಹಾವೇರಿ 01: ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ ಪಾಸ್ ಆಗುವುದು ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಅವಶ್ಯವೇನೋ ನಿಜ, ಆದರೆ ಪರೀಕ್ಷಾ ಪಲಿತಾಂಶಗಳೇ ಜೀವನದಲ್ಲಿ ಅಂತಿಮವಲ್ಲ. ಜೀವನವೆಂಬ ಪರೀಕ್ಷೆಯಲ್ಲಿ ಪಾಸ್ ಆಗುವುದೇ ಮುಖ್ಯ ಎಂಬ ಮಾತನ್ನು ವಿದ್ಯಾರ್ಥಿಗಳು ಎಂದು ಮರೆಯಬಾರದು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು. 

       ನಗರದ ಎಸ್‌.ಜೆ.ಎಂ ಕಲಾ,ವಣಿಜ್ಯ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಆಸೆ ಕಳೆದು ಕೊಂಡರೆ ಬದುಕಬಹುದು, ಆದರೆ ಆಸಕ್ತಿ ಕಳೆದುಕೊಂಡರೆ ಬದುಕಿನ ಮಾರ್ಗವೇ ಕಳೆದು ಹೋಗಬಹುದು, ಅವಕಾಶಗಳ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿ ಜೀವನ ಹಾರ್ದಿಕ ಪಡಿಸಿಕೊಳ್ಳಬೇಕು ಎಂದು ಸ್ವಾಮೀಜಿ0ುವರು ತಿಳಿಸಿ, ಕೆ-ಸಿ.ಇ. ಟಿ ಕಾಲೇಜಿನಲ್ಲಿ ಪ್ರಾರಂಭಿಸುವ ಪರಿಚ0ು ಪತ್ರವನ್ನು ಬಿಡುಗಡೆ ಮಾಡಿದರು. 

    ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಯಾವುದೇ ದೇಶದ ಶೈಕ್ಷಣಿಕ ಮೌಲ್ಯ ಕುಸಿದರೆ ಆ ದೇಶದ ವಿನಾಶ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಶೈಕ್ಷಣಿಕ ಸಮಾನತೆ ಅನುಷ್ಠಾನ ಸರಕಾರದ ಆದ್ಯತೆ0ಾಗಬೇಕು, ಒಂದು ಸಶಕ್ತ  ರಾಷ್ಟ್ರವನ್ನು ಸರ್ವನಾಶಗೊಳಿಸಲು ಅಣುಬಾಂಬ್ ಅಥವಾ ದೂರಗಾಮಿ ಕ್ಷಿಪಣಿಗಳು ಅಗತ್ಯವಿರುವುದಿಲ್ಲ, ಆ ರಾಷ್ಟ್ರದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಬಿಟ್ಟು ಶಿಕ್ಷಣದ ಗುಣಮಟ್ಟ ತಗ್ಗಿಸಿದರೆ ಸಾಕು ಎಂದು ಹೇಳಿದರು. 

 ಸೇವಾ ನಿವೃತ್ತಿಗೊಂಡ ರಾಜ್ಯಶಾಸ್ತ್ರ ಉಪನ್ಯಾಸಕಿ ಸುಚೇತಾ ಪವಾರ್ ಅವರನ್ನು ಕಾಲೇಜು, ಪದವಿ ಪೂರ್ವ ಕಾಲೇಜುಗಳ ಸಂಘ ಹಾಗೂ ರಾಣೆಬೆನ್ನೂರು ಎಸ್‌.ಜೆ.ಎಮ್ ಕಾಲೇಜಿನ ಸಿಬ್ಬಂದಿ ವರ್ಗ ಗೌರವಿಸಿ ಬಿಳ್ಕೊಟ್ಟರು.ಪ್ರಾಚಾರ್ಯ ವಿ.ಎನ್‌. ಆಲದ ಕಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ  ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಮಹತ್ವದ ಘಟ್ಟ, ಭವಿಷ್ಯದ ಅಡಿಪಾಯ ಪರಿಶ್ರಮದಿಂದ ಪ್ರತಿಭೆ ಪ್ರಾಪ್ತಿಯಾಗುತ್ತದೆ. ಪ್ರತಿಭೆಗೆ ಯಾವಾಗಲೂ ಮನ್ನಣೆ ಇದ್ದೇ ಇದೆ ಎಂದರು. ಎಂ.ಆರ್‌.ಎಂ ಪದವಿ ಪೂರ್ವ ಕಾಲೇಜಿನ ಪ್ರಾ. ಡಾ. ರಾಮ ಮೋಹನ್‌ರಾವ್ ಮಾತನಾಡಿದರು. 

            ನೇತ್ರಾವತಿ, ಪವಿತ್ರ ಹಾಗೂ ಭುವನೇಶ್ವರಿ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ಹಂಚಿಕೊಂಡರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು,ಪ್ರತಿಭಾ ಪುರಸ್ಕಾರವು ನಡೆಯಿತು. ಸವಿತಾ ಹೊಂಬರಡಿ ವಚನ ಪ್ರಾರ್ಥಿಸಿದರು. ಒಕ್ಕೂಟದ ಕಾರ್ಯದರ್ಶಿ ಭಾಗ್ಯಲಕ್ಷ್ಮೀ ಅರೇಪಲ್ಲಿ ಸ್ವಾಗತಿಸಿದರು. ವೀಣಾ ಸಂಪಗಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.