ವಿದ್ಯಾರ್ಥಿಗಳು ವೇದಿಕೆಯ ಸ್ಥೈರ್ಯ ಬೆಳೆಸಿಕೊಳ್ಳಿ: ಖೊದ್ನಾಪೂರ

ವಿದ್ಯಾರ್ಥಿಗಳು ವೇದಿಕೆಯ ಸ್ಥೈರ್ಯ ಬೆಳೆಸಿಕೊಳ್ಳಿ: ಖೊದ್ನಾಪೂರ Students should develop stage courage: Khodnapur

                     ವಿಜಯಪುರ 21: ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ತಮ್ಮಲ್ಲಿರುವ ವಿಷಯ ಜ್ಞಾನ, ಪ್ರಾಯೋಗಿಕತೆ, ಸಮಸ್ಯೆ ಬಿಡಿಸುವ ಕಲೆ, ಸಂಪರ್ಕ-ಸಂವಹನ ಕೌಶಲ್ಯ, ವಿಷಯ ಮಂಡನೆ ಮತ್ತು ಬೋಧನಾ ಕೌಶಲ್ಯದಂತಹ ಗುಣಗಳನ್ನು ಒಡಮೂಡಿಸುವುದು ಇಂದಿನ ಅಗತ್ಯತೆಯಾಗಿದೆ. ಉನ್ನತ ಶಿಕ್ಷಣವು ಕೇವಲ ಶಿಕ್ಷಕರಿಂದ ಮಾತ್ರ ಬೋಧನೆ ಎನ್ನುವಂತಾಗಬಾರದು ಮತ್ತು ಏಕಮುಖವಾಗಬಾರದು. ವಿದ್ಯಾರ್ಥಿಗಳ ಕಲಿಕೆಯು ಪಠ್ಯಕ್ರಮಕ್ಕೆ ಸಂಬಂಧಿಸಿದ ಜ್ಞಾನವನ್ನು ಪಡೆಯಲಷ್ಟೇ ಸಿಮೀತವಾಗಬಾರದು. ಶಿಕ್ಷಕರು ಬೋಧನೆ-ಕಲಿಕೆಯಲ್ಲಿ ಸಾಮರಸ್ಯತೆಯನ್ನು ಸಾಧಿಸಲು ತಮ್ಮ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮನೋಭಾವ, ಆತ್ಮವಿಶ್ವಾಸ, ವೇದಿಕೆಯ ಸ್ಥೈರ್ಯ, ವಾಕ್ಚಾತುರ್ಯದಂತಹ ಮೌಲ್ಯಗಳನ್ನು ಬೆಳೆಸುತ್ತಾ, ಅವರು ಉತ್ತಮ ಭಾವಿ ಶಿಕ್ಷಕರನ್ನಾಗಿ ರೂಪಿಸುವಂತಿರಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.  

               ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.21ರಂದು ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಏರಿ​‍್ಡಸಿದ ಸೆಮಿನಾರ್ ಪ್ರಸೆಂಟೇಷನ್ (ವಿಷಯ ಮಂಡನೆ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮೈಕ್ರೋ ಟಿಚಿಂಗ್ ಮೌಲ್ಯಮಾಪನ ಮಾಡಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಾವು ಆಯ್ದುಕೊಂಡ ವಿಷಯದ ಮೇಲೆ ವಿದ್ಯಾರ್ಥಿಗಳು ಕನಿಷ್ಟ 10 ನಿಮಿಷಗಳ ಅವಧಿಗೆ ಸೆಮಿನಾರ್ (ವಿಷಯ ಮಂಡನೆ) ನೀಡುವುದರ ಮೂಲಕ ಕಲಿಕೆಯ ಜತೆಗೆ ವಿಷಯದಲ್ಲಿ ಆಳ ಜ್ಞಾನ, ಭಾಷೆಯ ಮೇಲೆ ಹಿಡಿತ, ಸಂವಹನ ಕಲೆ, ವಿಷಯ ಪ್ರಸ್ತುತಿ ಕೌಶಲ್ಯಗಳನ್ನು ಒಡಮೂಡಿಸುವುದು ಈ ಸೆಮಿನಾರ್ ಆಯೋಜನೆಯ ಮುಖ್ಯ ಉದ್ಧೇಶವಾಗಿದೆ.

           ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗವು ವಿದ್ಯಾರ್ಥಿಗಳು ಪಠ್ಯಕ್ರಮದ ಜತೆಗೆ ಪ್ರಸ್ತುತ ಕೈಗಾರಿಕೆ, ಹಣಕಾಸು, ಬ್ಯಾಂಕಿಂಗ್, ವಿಮೆ ಮತ್ತು ಶಿಕ್ಷಣದ ವಿವಿಧ ಮಜಲುಗಳಲ್ಲಾಗುತ್ತಿರುವ ಹೊಸ ವಿಷಯಗಳ ಬಗ್ಗೆ ಅರಿತುಕೊಂಡು ಪ್ರಚಲಿತವಾದ ಸನ್ನಿವೇಶ-ಸಂದರ್ಭ, ಅಗತ್ಯತೆಗನುಗುಣವಾಗಿ ಉದ್ದಿಮೆ, ಕೈಗಾರಿಕೆ ಮತ್ತು ಕಾರ​‍್ೋರೇಟ್ ಜಗತ್ತು ಅಪೇಕ್ಷಿತವಾದ ಪ್ರಾಯೋಗಿಕ ಜ್ಞಾನ, ಪ್ರಾಜೆಕ್ಟ್‌ ತಯಾರಿಕೆ, ಯೋಜನೆ ರೂಪಿಸುವುದು ಮುಂತಾದ ವಿಶ್ಲೇಷಣಾ ಕೌಶಲ್ಯವನ್ನು ಹೊಂದಬೇಕು ಎಂದು ಸಲಹೆ ನೀಡಿದರು. ಈ ಸೆಮಿನಾರ್ ಪ್ರಸೆಂಟೇಷನ್ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ದೀಪ್ತಿ ವಿಶ್ವಕರ್ಮ, ಸುಶ್ಮೀತಾ ಶಿರಹಟ್ಟಿ, ಶಂಕ್ರಮ್ಮ ನಾಗಠಾಣ, ಐಶ್ವರ್ಯ ಕುಂಬಾರ, ಗೀತಾ ಮಿಸ್ಕಿನ್, ಅಶ್ವೀನಿ ಕುಂಬಾರ ಇನ್ನಿತತರು ವಿಷಯ ಪ್ರಸ್ತುತಿಪಡಿಸಿದರು. ನಂತರ ವಿದ್ಯಾರ್ಥಿಗಳ ವಿಷಯ ಮಂಡನೆಯಲ್ಲಿರುವ ನ್ಯೂನ್ಯತೆ, ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳು, ವಿದ್ಯಾರ್ಥಿ ಕೇಂದ್ರಿತವಾದ ಪಾಠ-ಬೋಧನೆಯ ಬಗ್ಗೆ ಬೋಧನಾ ಕೌಶಲ್ಯಗಳನ್ನು ತಿಳಿಸಿಕೊಡಲಾಯಿತು.