ವಿದ್ಯಾರ್ಥಿಗಳು ಕಾನೂನು ಜ್ಞಾನ ಬೆಳೆಸಿಕೊಳ್ಳಿ: ಶಾಂತವೀರ ಈ.
Students should develop legal knowledge: Shantaveera E.
ವಿದ್ಯಾರ್ಥಿಗಳು ಕಾನೂನು ಜ್ಞಾನ ಬೆಳೆಸಿಕೊಳ್ಳಿ: ಶಾಂತವೀರ ಈ.
ಜಮಖಂಡಿ 06: ವಿದ್ಯಾರ್ಥಿಗಳು ಕಾನೂನು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ರಾಯಚೂರ ಡಿವೈಎಸ್‌ಪಿ ಶಾಂತವೀರ ಈ. ಹೇಳಿದರು. ತಾಲೂಕಿನ ಶೂರಪಾಲಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕಾನೂನು ಅರಿವು, ನಿವೃತ್ ಶಿಕ್ಷಕರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ನಿತ್ಯ ಜ್ಞಾನಾರ್ಜನೆಯಲ್ಲಿ ತೊಡಗಬೇಕು, ಆಟ ಪಾಠಗಳ ಜೊತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು. ಶೂರಪಾಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದರೆ 25 ಸಾವಿರ ರೂ, ಬಹುಮಾನ ನೀಡುವದಾಗಿ ಪ್ರೋತ್ಸಾಹಧನ ನೀಡಲಾಗುವುದು. ಶಾಲಾ ಚಟುವಟಿಕೆಗಳಿಗೆ ಅಗತ್ಯ ಬಿದ್ದರೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದರು. ಸಾವಳಗಿ ಪೊಲೀಸ್ ಠಾಣೆಯ ಪಿಎಸ್‌ಐ ಅಪ್ಪಣ್ಣ ಐಗಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಬೇಕು, ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸಬೇಕು, ಸೈಬರ್ ಕ್ರೈಂ ಹೆಚ್ಚಳವಾಗುತ್ತಿವೆ. ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡಬಾರದು, ಬಾಲ್ಯವಿವಾಹಗಳಾಗುತ್ತಿದ್ದರೆ ಅವುಗಳ ಬಗ್ಗೆ ಗ್ರಾಮಸ್ಥರು ಮಕ್ಕಳು ಮಾಹಿತಿ ನೀಡಬೇಕು ಎಂದರು. ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳಿ, ಮುಖ್ಯಶಿಕ್ಷಕ ಎನ್.ಎಸ್.ಶೇಡಶ್ಯಾಳ, ಡಾ.ಈಶ್ವರ ಕಣಬೂರ, ಕಾನಿಪ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ ಮಾತನಾಡಿದರು. ಕಾನಿಪ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ, ನಿವೃತ್ ಶಿಕ್ಷಕ ಎಚ್.ಎಂ.ಉಸ್ತಾದ, ಪಿಕೆಪಿಎಸ್ ಕಾರ್ಯದರ್ಶಿ ದುಂಡಪ್ಪ ಕುಂಚನೂರ, ಬಸವರಾಜ ತಿಪ್ಪನ್ನವರ, ಆದಿ ಬಳಗಾನೂರ, ಕಾರ್ತಿಕ ಧನ್ಯಾಳ, ದ್ವಿತೀಯ ಪರೀಕ್ಷೆಯಲ್ಲಿ ಶೇ.92ಕ್ಕೂ ಅಧಿಕ ಅಂಕಪಡೆದ ನಂದಿನಿ ಜಮಖಂಡಿ ಅವರನ್ನು ಸನ್ಮಾನಿಸಿದರು. ವೆದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ರಾಜು ಕುಂಚನೂರ, ಪಿಕೆಪಿಎಸ್ ಅಧ್ಯಕ್ಷ ರಮೇಶ ಕಣಬೂರ, ಗಿರಿಮಲ್ಲಪ್ಪ ಅರಕೇರಿ, ಈಶ್ವರ ಕಂಕಣವಾಡಿ, ಎಸ್.ಐ.ಲೋಣಿ, ಶೇಖರ ಪಾಟೀಲ, ನರಸಿಂಹ ಪಾಟೀಲ, ಸಿದ್ದು ಕುಂಚನೂರ, ಮಹಾದೇವ ಇಂಗಳಗಿ, ವರದಿಗಾರ ಎಂ.ಎನ್.ನದಾಫ್ ಇತರರು ಇದ್ದರು. ಬಸವರಾಜ ತಿಪ್ಪನ್ನವರ ಸ್ವಾಗತಿಸಿದರು. ಸಿ.ಕೆ. ಹೊಸೂರ ನಿರೂಪಿಸಿದರು. ಗುರಲಿಂಗ ಕೊಕ್ಕನವರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 