ವಿದ್ಯಾರ್ಥಿಗಳು ಜ್ಞಾನಶಕ್ತಿಯಿಂದ ಜೀವನವನ್ನು ನಿರ್ಮಿಸಿಕೊಳ್ಳಿ: ಪ್ರೊ. ತ್ಯಾಗರಾಜ
Students should build their lives with the power of knowledge: Prof. Thyagaraja
ವಿದ್ಯಾರ್ಥಿಗಳು ಜ್ಞಾನಶಕ್ತಿಯಿಂದ ಜೀವನವನ್ನು ನಿರ್ಮಿಸಿಕೊಳ್ಳಿ: ಪ್ರೊ. ತ್ಯಾಗರಾಜ
ಬೆಳಗಾವಿ 24: ವಿದ್ಯಾರ್ಥಿಗಳು ತಮ್ಮ ಜೀವನವನ್ನು ಜ್ಞಾನಶಕ್ತಿಯಿಂದ ಕಟ್ಟಿಕೊಳ್ಳಬೇಕು. ತರಗತಿಯಲ್ಲಿ ಕಲಿಯುವ ಪಾಠಗಳು ಜ್ಞಾನದ ಅಡಿಪಾಯವಾಗಿವೆ. ಅದು ನಮ್ಮೊಳಗೆ ಸದಾ ಜೀವಂತವಾಗಿರಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಹೇಳಿದರು.
ಅವರು ವಿಶ್ವವಿದ್ಯಾಲಯದ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ನೇಮಕಾತಿ ಘಟಕದ ವತಿಯಿಂದ ಆಯೋಜಿಸಲಾದ ಇಂಡಸ್ಟ್ರಿ ರೆಡಿ ಕರಿಯರ್ ಟ್ರೈನಿಂಗ್ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಪಿ.ಎಮ್-ಉಷಾ (ಮೇರು) ಸಾಪ್ಟ್ ಕಂಪೋನೆಂಟ್ ಸಂಖ್ಯೆ 29ರ ಯೋಜನೆಯಡಿ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈಗಿನ ವೇಗದ ಯುಗದಲ್ಲಿ ಕೇವಲ ಪದವಿ ಪ್ರಮಾಣಪತ್ರಕ್ಕಿಂತ ಕೌಶಲ್ಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಪ್ರಸ್ತುತ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ತಮ್ಮನ್ನು ತಯಾರಿಸಿಕೊಳ್ಳಬೇಕು, ದೃಢ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಹಾಗೂ ವಿವಿಧ ದೃಷ್ಟಿಕೋನಗಳನ್ನು ಸ್ವೀಕರಿಸುವ ಮನೋಭಾವ ಇರಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದ್ಯೋಗ ಅಧಿಕಾರಿ (ಕಟಚಿಛಿಜಟಜಟಿಣ ಓಜಿಜಿಛಿಜಡಿ) ಪ್ರೊ. ಆರ್.ಎನ್. ಮನಗುಳಿ ಅವರು ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ಅವರನ್ನು ಮಾರ್ಾಡು ತರಬೇತಿಗೆ ಒಳಪಡಿಸಲು ಉದ್ದೇಶಿಸಿದೆ ಎಂದು ಹೇಳಿದರು. ಅವರು ಉದ್ಯಮ ಸಿದ್ಧತೆ ಎಂದರೆ ಕೇವಲ ಕೌಶಲ್ಯವಲ್ಲ, ಅದು ಮನೋಭಾವ, ಹೊಂದಾಣಿಕೆ ಹಾಗೂ ನಿರಂತರವಾಗಿ ಕಲಿಯುವ ಧೈರ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಪ್ರವೀಣ ಗುಡಿ, ಮೈ ಲೈಫ್ ಇನ್ಸ್ಟಿಟ್ಯೂಟ್ನ ನಿರ್ದೇಶಕರು ಶಿಕ್ಷಣ ಪ್ರಕ್ರಿಯೆಯಲ್ಲಿ ಕೇವಲ ಪಾಠ ಕಲಿತಕ್ಕಿಂತ ಅರ್ಥಮಾಡಿಕೊಳ್ಳುವುದು ಹೆಚ್ಚು ಮುಖ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕಾಗಿ ದೃಢ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ಸಂದರ್ಶನ ಎದುರಿಸುವ ಕೌಶಲ್ಯ, ಗುಂಪು ಚರ್ಚೆ ಮತ್ತು ಸಂವಹನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೇಮಕಾತಿ ಮತ್ತು ಹಳೆವಿದ್ಯಾರ್ಥಿ ಸಂಯೋಜಕರು ಡಾ. ಮಹಾಂತೇಶ್ ಎಂ. ಕುರಿ, ಡಾ. ಗುರುಬಸವರಾಜ ಪಿ. ಎಂ., ಡಾ. ರಮೇಶ್ ಕಂಬಳೆ ಸೇರಿದಂತೆ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿ ಅಮೃತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 