ಹಾವೇರಿ24: ಭಾರತವು ವಿವಿಧ ಜಾತಿ, ಧರ್ಮ, ಸಂಪ್ರದಾಯಗಳು, ಆಚಾರ-ವಿಚಾರಗಳನ್ನೊಳಗೊಂಡ ವಿಶಿಷ್ಟ ಸಂಸ್ಕೃತಿ ದೇಶವಾಗಿದೆ. ವಿದ್ಯಾಥರ್ಿಗಳು ಶಾಲಾ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ನಮ್ಮ ನೆಲದ ಕಾನೂನುಗಳ ಅರಿವನ್ನು ಹೊಂದಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಸ್.ರೇಣುಕಾದೇವಿ ಅವರು ಹೇಳಿದರು.
ಗುರುವಾರ ಹಾವೇರಿ ತಾಲೂಕಿನ ಗಳನಾಥ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ, ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಕರ್ಾರೇತರ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಮಕ್ಕಳ ಸಂರಕ್ಷಣೆ ಮತ್ತು ಮಕ್ಕಳಿಗೆ ಬಾಲ ಸ್ನೇಹಿ ಕಾನೂನು ಸೇವೆಗಳ ಯೋಜನೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಈ ಹಿಂದಿನ ಪರಿಕಲ್ಪನೆ ಬದಲಾಗಿದೆ. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಬೇಕು. ಮಹಿಳೆಯರ ಸಂರಕ್ಷಣೆಗಾಗಿ ಜಾರಿಯಲ್ಲಿರುವ ಕಾನೂನುಗಳ ಅರಿವು ಪಡೆದುಕೊಳ್ಳಬೇಕು. ಕಾನೂನುಗಳನ್ನು ಕತ್ತಿಯಂತೆ ಉಪಯೋಗಿಸಿಕೊಳ್ಳದೇ ಗುರಾಣಿಯಂತೆ ಬಳಸಿಕೊಳ್ಳಬೇಕು. ಸಂಸಾರದಲ್ಲಿ ಬರುವ ಸಣ್ಣ ಪುಟ್ಟ ಮನಸ್ತಾಪಗಳಿಗೆ ನ್ಯಾಯಾಲಯಗಳ ಮೆಟ್ಟಿಲು ಹತ್ತುವ ಬದಲಾಗಿ ತಮ್ಮ ತಮ್ಮಲ್ಲೇ ಸಹನೆ ಹಾಗೂ ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯದ ಕದ ತಟ್ಟಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ 18 ವರ್ಷದ ನಂತರವೇ ವಿವಾಹ ಮಾಡಬೇಕು, ಗಂಡು ಮಕ್ಕಳಂತೆ ಹೆಣ್ಣು ಮಗುವಿಗೂ ಶಿಕ್ಷಣ ಕೊಡಿಸಬೇಕು. ಕುಟುಂಬದಲ್ಲಿ ಒಂದೇ ಮಗುವಿದ್ದರೆ ಆ ಮಗುವಿನ ಪಾಲನೆ-ಪೋಷಣೆ, ಶಿಕ್ಷಣ ಮತ್ತು ತರೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ನಾವು ಪ್ರತಿಯೊಂದಕ್ಕೂ ಸಕರ್ಾರದ ನೆರವಿಗಾಗಿ ಕಾಯದೇ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ವೈ.ಎಲ್.ಲಾಡಖಾನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ಯಾಯವಾದವರಿಗೆ ನ್ಯಾಯ ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ.
ಎಸ್.ಸಿ., ಎಸ್.ಟಿ. ವರ್ಗಕ್ಕೆ, ವಾಷರ್ಿಕ ಆದಾಯ ರೂ. ಒಂದು ಲಕ್ಷ ಮಿತಿಯೊಳಗಿರುವ ಎಲ್ಲ ವರ್ಗದವರು, ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳಿಗೆ ತುತ್ತಾದ ನಿರಾಶ್ರಿತರು, ದೌರ್ಜನ್ಯಕ್ಕೊಳಗಾದ ಸಂತ್ರಸ್ಥರು ತಮ್ಮ ವ್ಯಾಪ್ತಿಯ ತಾಲೂಕು, ಜಿಲ್ಲಾ, ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಗೆ ನಿಗದಿತ ಅಜರ್ಿ ನಮೂನೆಯಲ್ಲಿ ತಮಗಾದ ಅನ್ಯಾಯವನ್ನು ಸಂಕ್ಷಿಪ್ತವಾಗಿ ನಮೂದಿಸಿ ಸಲ್ಲಿಸಬೇಕು. ಅಜರ್ಿದಾರರಿಗೆ ನುರಿತ ಪೆನಲ್ ವಕೀಲರನ್ನು ನೇಮಕಮಾಡಿ ನ್ಯಾಯ ಒದಗಿಸಿಕೊಡಲಾಗುವುದು. ಒಂದು ವೇಳೆ ಅಜರ್ಿದಾರ ಸುಳ್ಳು ಮಾಹಿತಿ ನೀಡಿದಲ್ಲಿ ಆತನಿಗೆ ಶಿಕ್ಷೆ ಸಹ ನೀಡಲಾಗುವುದು. ಪ್ರತಿಯೊಬ್ಬರೂ ಕಾನೂನಿನ ಸಾಮಾನ್ಯಜ್ಞಾನ ಹೊಂದಬೇಕು ಹಾಗೂ ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು.
ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿದರ್ೆಶಕ ಬಸವರಾಜ ಅರಬಗೊಂಡ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಪಿ.ಎಸ್.ಯಲಿಗಾರ, ಕಾರ್ಯದಶರ್ಿ ಪಿ.ಎಂ.ಬೆನ್ನೂರ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಉಪ ವ್ಯವಸ್ಥಾಪಕ ಡಾ.ಆರ್.ಎಸ್.ಹೆಗಡೆ, ಗಳಗನಾಥ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಹಾಲಮ್ಮ ಹಿರೇಮಠ, ಕನರ್ಾಟಕ ಹಾಲು ಮಹಾ ಮಂಡಳಿಒಯ ಜಂಟಿ ನಿದರ್ೆಶಕ ತಿಪ್ಪೇಸ್ವಾಮಿ ಮತ್ತು ಶ್ರೀನಿವಾಸ ಅವರು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕುಮಾರಿ ರಾಜೇಶ್ವರಿ ಚಕ್ಕಲೇರ ಅವರು ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು, ಜಿಲ್ಲಾ ಪೊಲೀಸ್ ಇಲಾಖೆ ಎಂ.ಆರ್. ಜಾಲಗಾರ ಅವರು ಬಾಲ ಕಾಮರ್ಿಕ ನಿಮರ್ೂಲನಾ ಕಾಯ್ದೆ, ಜೀತ ಕಾಮರ್ಿಕ ಪದ್ಧತಿ ನಿಮರ್ೂಲನಾ ಕಾಯ್ದೆ, ಪೋಕ್ಸೋ ಕಾಯ್ದೆ2012 ಹಾಗೂ ವೇಶ್ಯಾವಾಟಿಕೆ ನಿಮರ್ೂಲನಾ ಕಾಯ್ದೆ ಕುರಿತು ಗುತ್ತಲ ಪೊಲೀಸ್ ಠಾಣೆಯ ಪಿ.ಎಸ್.ಆಯ್. ಆರ್.ಆರ್.ಚಾಲಕಬ್ಬಿ ಅವರು ಪೊಲೀಸ್ ದೂರು ಪ್ರಾಧಿಕಾರದ ಕುರಿತು ಉಪನ್ಯಾಸ ನೀಡಿದರು.