ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳಿಗೆ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳು ಆಯ್ಕೆ

ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳಿಗೆ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳು ಆಯ್ಕೆ Students from Dharwad district selected for state-level oriental consciousness competitions

                   ಧಾರವಾಡ 21: ಕರ್ನಾಟಕ ರಾಜ್ಯದ ಸಮೃದ್ಧ ಪ್ರಾಚೀನ ಸ್ಮಾರಕಗಳ ಮೂರ್ತ ಮತ್ತು ಅಮೂರ್ತ ಪರಂಪರೆಯ ಬಗ್ಗೆ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲಾಮಟ್ಟದಲ್ಲಿ ಆಯೋಜಿಸಿದ್ದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದು, ರಾಜ್ಯ ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.  

        ರಾಜ್ಯ ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳು ನವೆಂಬರ್ 25, 2025 ರಂದು ಗದಗ ಜಿಲ್ಲೆಯ  ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯ ಗ್ರಾಮ ಗಂಗೋತ್ರಿ ಆವರಣದಲ್ಲಿ ಜರುಗಲಿವೆ. ಧಾರವಾಡ ಜಿಲ್ಲೆಯ 13 ವಿದ್ಯಾರ್ಥಿಗಳು ಈ ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.    

             ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಎಸ್‌.ಎಸ್‌.ಕೆಳದಿಮಠ ಹಾಗೂ ಜಿಲ್ಲಾ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳ ನೋಡಲ್‌ರವರಾದ ಡಾ.ರೇಣುಕಾ ಅಮಲಝರಿ ಅವರು ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.  

                 ಪ್ರಬಂಧ ಸ್ಪರ್ಧೆ ವಿಜೇತರು: ಏಕತಾ ದೊಡಮನಿ (ಪ್ರಥಮ), ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆ ಅಂಚಟಗೇರಿ. ಸುವರ್ಣಾ ಗಾಯಕವಾಡ (ದ್ವಿತೀಯ), ಸರ್ಕಾರಿ ಪ್ರೌಢಶಾಲೆ ಇಟ್ಟಿಗಟ್ಟಿ. ವಿನೂತಾ ತಳವಾರ (ತೃತೀಯ), ಎನ್‌.ಇ.ಬಿ ಬಾಲಕೀಯರ ಪ್ರೌಢಶಾಲೆ ನವಲಗುಂದ.  

                ಭಾಷಣ ಸ್ಪರ್ಧೆ ವಿಜೇತರು: ಸಹನಾ ಮುನವಳ್ಳಿ (ಪ್ರಥಮ), ಪ್ರಜೆಂಟೇಷನ್ ಬಾಲಕಿಯರ ಪ್ರೌಡ ಶಾಲೆ ಧಾರವಾಡ. ಅರ​‍್ಿತಾ ನಾಯ್ಕರ (ದ್ವಿತೀಯ), ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆ ಅಂಚಟಗೇರಿ. ಸೃಷ್ಟಿ ಹೊನ್ನಿಕೇರಿ(ತೃತೀಯ), ಕೆ.ಎನ್‌.ಕೆ ಬಾಲಕಿಯರ ವಸತಿ ಶಾಲೆ ಧಾರವಾಡ.  

             ಚಿತ್ರ ಕಲಾ ಸ್ಪರ್ಧೆ ವಿಜೇತರು: ಸುಖದಾ ಮುರಗೋಡ (ಪ್ರಥಮ), ಕಾನ್ವೇಂಟ್ ಹೈಸ್ಕೂಲ್ ಕೇಶ್ವಾಪೂರ ಹುಬ್ಬಳ್ಳಿ. ಚಂದನಾ ಅಕ್ಕಿ (ದ್ವಿತೀಯ), ಸರ್ಕಾರಿ ಪ್ರೌಢ ಶಾಲೆ ನರೇಂದ್ರ. ಮಹಮ್ಮದ್ ಫರಹಾನ (ತೃತೀಯ), ಗೋಕಾಕ ಆರ್‌ಎಲ್‌ಎಸ್ ಪ್ರೌಢಶಾಲೆ ಧಾರವಾಡ. ರಸ ಪ್ರಶ್ನೆ ವಿಜೇತರು: ರೇಣುಕಾ ಗುದಗಿ ಹಾಗೂ ಪವಿತ್ರಾ ಜೋಗಿ (ಪ್ರಥಮ), ಸರ್ಕಾರಿ ಪ್ರೌಡ ಶಾಲೆ ಗುಡಿಸಾಗರ ಪ್ರಿಯಾ ಬೆಳಗಲಿ ಹಾಗೂ ಸುಸ್ಮಿತಾ ಹೆಬ್ಬಾಳಕರ (ದ್ವಿತೀಯ).