ವಿದ್ಯಾರ್ಥಿಗಳೇ ನಮ್ಮ ದೇಶದ ಆಸ್ತಿ ಅವರಿಗೆ ದೇಶದ ಹಣೆಬರಹ ಬದಲಾಯಿಸುವ ಜ್ಞಾನ ನೀಡಬೇಕು : ಸಂತೋಷ್ ಇಂಡಿ
ಮಾಂಜರಿ 26: ವಿದ್ಯಾರ್ಥಿಗಳೇ ನಮ್ಮ ದೇಶದ ಆಸ್ತಿ. ಅವರಿಗೆ ದೇಶದ ಹಣೆಬರಹ ಬದಲಾಯಿಸುವ ಜ್ಞಾನ ನೀಡಬೇಕು. ಅಲ್ಲದೆ, ದೇಶಭಕ್ತಿ, ಮಾನವೀಯ ಮೌಲ್ಯ ಹಾಗೂ ನೈತಿಕ ಮೌಲ್ಯ ಕಾಪಾಡುವ ಶಿಕ್ಷಣ ನೀಡಬೇಕು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಸಿಂರ್ಗ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇದ್ದು ಜಗತ್ತಿನಲ್ಲಿ ಎಲ್ಲಿ ಹೋದರೆ ಉದ್ಯೋಗ ಅವಕಾಶ ಸಿಗುವ ಸಾಧ್ಯನೇತೆ ಸಿಗುತ್ತದೆ ಎಂದು ಎಂದು ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಿನೆಂಟ್ ಸದಸ್ಯರಾದ ಸಂತೋಷ್ ಇಂಡಿ ಇವರು ಹೇಳಿದರು ಸಮೀಪದ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಡಾ ಎನ್ ಎ ಮಗದುಮ್ ನಸಿಂರ್ಗ್ ಮಹಾವಿದ್ಯಾಲಯದಲ್ಲಿ ರವಿವಾರದಂದು ಸಾಯಂಕಾಲ ಆಯೋಜಿಸಲಾದ ವಿದ್ಯಾರ್ಥಿಗಳ ದೀಪ ದಾನ ಹಾಗೂ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್‌ಎ ಮಗದುಮ್ ವಹಿಸಿದ್ದರು ಅತಿಥಿಯಾಗಿ ಗಜೇಂದ್ರ ಸಿಂಗ್ ಚಿಕ್ಕೋಡಿ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಮಹೇಶ್ ನಾಗರ ಭೇಟಿ ಶ್ರೀಮತಿ ಲಲಿತಾ ಮುಗುದುಮ್ ಸುರೇಶ್ ಚೌಗುಲೆ ಹಜರತ್ ಅಲಿ ಪಾನರಿ ಹಾಜರಿದ್ದರು ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣ ನೀಡಿ ಅವರ ಸವಾಂರ್ಗೀಣ ಅಭಿವೃದ್ಧಿಗೆ ಕಾರಣಕರ್ತರಾಗಿರುವ ಡಾಕ್ಟರ್ ಏನ್ ಎ ಮಗುದುಮ್ ಇವರ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. ಈ ವೇಳೆ ಡಾ. ಗಜೇಂದ್ರ ಸಿಂಗ್ ಮಾತನಾಡಿ ಶಿಕ್ಷಣ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಲ್ಲಿ ಸಾಮಾಜಿಕ ಪರಿಜ್ಞಾನ ಮೂಡಿಸುವ ಈ ಸಂಸ್ಥೆಯ ಕಾರ್ಯ ಅಮೋಘ. ವಿದ್ಯೆಯೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಉತ್ತಮ ಕಾರ್ಯ ಎಂದರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಅನುಕರಣೀಯ. ಒಳ್ಳೆಯ ಶಾಲೆಗೆ ಮಕ್ಕಳನ್ನು ಸೇರಿಸಿದ ಕೂಡಲೇ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಡಾ ಏನ್ ಎ ಮಗದೂಮ್ , ಲಲಿತಾ ಮಗದುಮ್ ಸುರೇಶ್ ಚೌಗುಲಾ ಹಾಗೂ ಇನ್ನಿತರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ವಿದ್ಯಾರ್ಥಿಗಳಿಗೆ ದೀಪುದಾನ ಮತ್ತು ಪ್ರಮಾಣವಚನ ಪ್ರಾಚಾರ್ಯರಾದ ಬಸವರಾಜ್ ಸಂಗಾಪಗೊಳ್ ಬೋಧಿಸಿದರು
ಈ ಕಾರ್ಯಕ್ರಮಕ್ಕೆ ನಸಿಂರ್ಗ್ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿ ಪಾಲಕರು ಮತ್ತು ಇನ್ನಿತರ ಸಂಘ ಸಂಸ್ಥೆಗಳ ವಿದ್ಯಾರ್ಥಿ ಶಿಕ್ಷಕ ವರ್ಗ ಹಾಜರಿದ್ದರು ಪ್ರಾಚಾರ್ಯರಾದ ಬಸವರಾಜ್ ಸಂಗಪ್ಪಗೋಳ ಸ್ವಾಗತಿಸಿ ವಂದಿಸಿದರು.