ಸೌಲಭ್ಯಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಕುಗ್ಗುತ್ತಿದೆ: ಡಾ. ಬಸವರಾಜ

ಲೋಕದರ್ಶನ ವರದಿ

ಬೆಳಗಾವಿ 04:  ಹಿಂದಿನ ವಿದ್ಯಾಥರ್ಿಗಳು ಸೌಲಭ್ಯವಿಲ್ಲದೆ ಜೀವನದಲ್ಲಿ ಸಾಧನೆ ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಿಗಿದ್ದಾರೆ. ಆದರೆ ತಂತ್ರಜ್ಞಾನ ಯುಗದಲ್ಲಿ ಸಕಲ ಸೌಲಭ್ಯಗಳಿದ್ದರೂ ಸಹ ನಿರೀಕ್ಷಿಸಿಸಿದಷ್ಟು ವಿದ್ಯಾಥರ್ಿಗಳು ಪ್ರಗತಿ ಸಾಧಿಸುತ್ತಿಲ್ಲವೆಂದು ನಿವೃತ್ತ ಪ್ರಾಚಾರ್ಯ  ಡಾ. ಬಸವರಾಜ ಜಗಜಂಪಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿಯ ರೈಲ್ವೆ ಸಮುದಾಯ ಭವನದಲ್ಲಿ ಸೋಮವಾರ 03 ರಂದು  ಅಂಕಲಗಿಯ ಅಡವಿ ಸಿದ್ಧೇಶ್ವರ ಪ್ರೌಢ ಶಾಲೆಯ 1981 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಳೆಯ ವಿದ್ಯಾಥರ್ಿಗಳ ಸ್ನೇಹ ಬಳಗದಿಂದ ಆಯೋಜಿಸಿದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಂಚಾರ, ಸಂಪರ್ಕ ವ್ಯವಸ್ಥೆ ಇಲ್ಲದಿದ್ದರೂ ಬರಿಗಾಲಿನಲ್ಲಿ ಶಾಲೆಗೆ ತೆರಳಿ ಸರಕಾರದ, ಸಮಾಜದ ಉನ್ನತ ಹುದ್ದೆಗಳಿದ್ದಾರೆ. ಇಂದಿನ ಶಿಕ್ಷಣ, ಸಂಸ್ಕಾರವೇ ಶೈಲಿ ಬದಲಾವಣೆಯಾಗಿ ವಿದ್ಯಾಥರ್ಿಗಳಲ್ಲಿನ ಪ್ರತಿಭೆ ಕುಗ್ಗುತ್ತಿದೆ ಎಂದರು.

ಶಾಲೆಯ ನಿವೃತ್ತ ಶಿಕ್ಷಕರಾದ ಎಸ್.ವಾಯ್.ಪಾಟೀಲ, ಎಮ್.ಎಮ್.ಕುಂಬಾರ, ಎಸ್.ಎ.ಭಾವಿಕಟ್ಟಿ, ಸಿ.ಬಿ.ಮೇದಾರ, ಎನ್.ಬಿ.ಶಟ್ಯೆನ್ನವರ, ಬಿ.ವಾಯ್.ಬರಗಾಲಿ, ಆರ್.ವಾಯ್.ಸನದಿ, ಬಿ.ವ್ಹಿ.ಗುಂಜಿಕರ, ಆರ್.ಬಿ.ಪಾಟೀಲ, ಎ.ಬಿ.ದೇಗಾನಟ್ಟಿ  ಇವರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು.  

ಎಸ್.ವಾಯ್.ಪಾಟೀಲ ಗುರುಗಳು ನಮ್ಮನ್ನೆಲ್ಲ ಕರೆದು ತುಂಬ ಪ್ರೀತಿ ವಿಶ್ವಾಸಗಳಿಂದ ಸನ್ಮಾನಿಸಿ ಗೌರವಿಸಿದ್ದಕ್ಕೆ ಎಲ್ಲರಿಗೂ  ಶೂಭಾಶಯ ಕೋರುತ್ತಾ ಈಗಿನ ಆದುನೀಕರಣದ ದಿನಮಾನಗಳಲ್ಲಿ ಮಕ್ಕಳ ನೈತಿಕ ಬಲವರ್ಧನೆಗೆ ಯೋಗ, ಆಧ್ಯಾತ್ಮಿಕ ತುಂಬ ಸಹಾಯಕಾರಿಯಾಗಿದ್ದು ತಮ್ಮ ಮಕ್ಕಳಿಗೆ ಇವುಗಳ ಬಗ್ಗೆ ಆಸಕ್ತಿ ಬೆಳೆಸಲು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಪ್ರೋತ್ಸಾಹಿಸುವದು ಅವಶ್ಯವಾಗಿದೆಯೆಂದರು.

1981ನೇ ಎಸ್.ಎಸ್.ಎಲ್.ಸಿ. ಬ್ಯಾಚಿನ ಸುಮಾರು 65 ವಿದ್ಯಾಥರ್ಿಗಳು ಭಾಗವಹಿಸಿದ್ದರು. ಅರ್.ಎಮ್.ತೇಲಿ ಮತ್ತು ಮೋಹನ ಮಾವಿನಕಟ್ಟಿ ಹಳೆಯ ವಿದ್ಯಾಥರ್ಿಗಳ ಪರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬಿ.ಎಲ್.ಗೊಡಲಕುಂದರಗಿ ಸ್ವಾಗತಿಸಿದರು. ಮಂಗಲ ಮಠದ ಪ್ರಾರ್ಥನಾ ಗೀತೆ ಹಾಡಿದರು.

ಮಲಗೌಡಾ ಪಾಟೀಲ, ಶಂಕರ ಮರಾಠೆ, ರಾಮೋಶಿ ನಾಯಕ, ಅಶೋಕ ಸನದಿ, ಶಶಿ ಪಾಶ್ಚಾಪುರೆ, ಡಿ.ಎಮ್ ನದಾಫ್, ಬಿ.ಕೆ. ಶಿವಾಪುರೆ, ಪಿ.ವಾಯ್ ಪಾಟೀಲ ಹಾಗೂ ಇತರರು ಇದ್ದರು. ಬಸನಗೌಡಾ ಪಾಟೀಲ ನಿರೂಪಿಸಿದರು. ಎಚ್.ಬಿ.ಕಡೆಪ್ಪಗೊಳ ವಂದಿಸಿದರು.