ಸಚಿವರಿಗೆ, ಶಾಸಕರಿಗೆ ದಿನಭತ್ಯೆ ನಿಲ್ಲಿಸಿ ಅಥವಾ ಊಟೋಪಹಾರ ನಿಲ್ಲಿಸಿ : ಗಡಾದ
Stop daily allowance or stop meals for ministers and MLAs: Gadada
ಬೆಳಗಾವಿ 03: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಸಚಿವ, ಶಾಸಕರಿಗೆ ದಿನಭತ್ಯೆ ನೀಡಿದರೆ ಊಟೋಪಹಾರ ಕೊಡುವುದನ್ನು ನಿಲ್ಲಿಸಬೇಕು ಅಥವಾ ಊಟೋಪಹಾರ ನೀಡಿದರೆ ದಿನಭತ್ಯೆ ನಿಲ್ಲಿಸಬೇಕು ಎಂದು ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಇಂದಿಲ್ಲಿ ಸರಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿ ಬಾರಿ ದಿನ ಭತ್ಯೆಯನ್ನು ನೀಡಲಾಗುತ್ತಿದೆ. ಈ ಕಾರಣದಿಂದ ಈ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಸಚಿವರುಗಳಿಗೆ ಊಟೋಪಹಾರ, ಚಹಾ, ಕಾಫಿ ಸಲುವಾಗಿ ವೆಚ್ಚವಾಗುವ ಹಣವನ್ನು ಸಭಾಪತಿ ಹಾಗೂ ಅಧಿಕಾರಿಗಳಿಂದ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಿದರು. ಸರಿ ಸುಮಾರು ಹತ್ತು ದಿನಗಳ ಅಧಿವೇಶನದಲ್ಲಿ ಊಟೋಪಹಾರದ ಖರ್ಚು ವೆಚ್ಚ ಸುಮಾರು ಮೂರು ಕೋಟಿ ರೂ. ಖರ್ಚು ಆಗುತ್ತಿದೆ. ದಿನಕ್ಕೆ ಒಬ್ಬ ಶಾಸಕರಿಗೆ 2,500 ರೂ.ಗಳ ದಿನಭತ್ಯೆ ನೀಡಲಾಗುತ್ತಿದೆ. ಈ ಹಣದಲ್ಲಿಯೇ ಶಾಸಕ, ಸಚಿವರು ಊಟೋಪಹಾರ ಸೇವಿಸಲಿ ಎಂದರು.
ಯಾವ ಶಾಸಕರುಗಳು ಸದನದ ಕಾರ್ಯ ಕಲಾಪಗಳಲ್ಲಿ ಕಡ್ಡಾಯವಾಗಿ ದಿನಪೂರ್ತಿಯಾಗಿ ಭಾಗವಹಿಸುವದಿಲ್ಲವೋ ಅಂತಹ ಶಾಸಕರುಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ವೇತನ ಭತ್ಯೆಗಳನ್ನು ಇನ್ನಿತರ ಸೌಲಭ್ಯಗಳನ್ನು ನೀಡದೇ ಇರುವ ಕುರಿತಂತೆ ಹಾಗೂ ಇಂತಹ ಶಾಸಕರುಗಳು ದಂಡದ ರೂಪದಲ್ಲಿ ದಿನವೊಂದಕ್ಕೆ ಇಂತಿಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂಬ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು.
ಅಧಿವೇಶನದ ಸಮಯದಲ್ಲಿ ಶಾಸಕರುಗಳ ಹಾಜರಾತಿಯನ್ನು ಹೆಚ್ಚಿಸುವ ಸಲುವಾಗಿ ಶಾಸಕರುಗಳಿಗೆ ಸರ್ಕಾರದಿಂದಲೇ ಉಚಿತವಾಗಿ ಊಟ-ಉಪಹಾರಗಳನ್ನು ನೀಡುವುದನ್ನು ಮುಂದುವರೆಸಿದರೆ "ಸದನಗಳೆಂದರೆ ಮಧ್ಯಾಹ್ನದ ಬಿಸಿಯೂಟದ ಶಾಲೆಗಳಾಗಿ ಪರಿವರ್ತನೆಗೊಂಡು ಸದನದ ಘನತೆ ಗೌರವಗಳಿಗೆ ಚ್ಯುತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 