ಬೆಳಗಾವಿ 28: ಭವಿಷ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶವನ್ನು ಹೊಂದಲು ಆಧುನಿಕ ತಂತ್ರಜ್ಞಾನಗಳಾದ ಆಟರ್ಿಫಿಶಿಯಲ್ ಇಂಟಲಿಜೆನ್ಸ, ಮಶಿನ ಲನರ್ಿಂಗ್, ಐ.ಒ.ಟಿ, ಕ್ಲೌಡ್ ಕಂಪ್ಯೂಟಿಂಗ್, ರೋಬೋಟಿಕ್ ಅಟೋಮೇಶನ್, ತ್ರಿ ಡಿ ಪ್ರಿಂಟಿಂಗ್ಗಳ ಕುರಿತು ಜ್ಞಾನ ಹೊಂದುವುದು ಅತ್ಯವಶ್ಯವಾಗಿದೆ. ಈ ದಿಶೆಯಲ್ಲಿ ವಿದ್ಯಾಥರ್ಿಗಳು ತಾಂತ್ರಿಕ ಜ್ಞಾನದೊಂದಿಗೆ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಡಸಲ್ಟ ಸಿಸ್ಟಮ್ ಇಂಡಿಯಾ ಸಂಸ್ಥೆಯ ಕಾರ್ಯನಿವರ್ಾಹಕ ನಿದರ್ೇಶಕ ಹೇಮಂತ ಗಾಡಗೀಳ್ ಕರೆ ನೀಡಿದರು.
ಕನರ್ಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಆಶ್ರಯದಲ್ಲಿ ದಿ.28ರಂದು ಬೆಳಿಗ್ಗೆ 10ಗಂಟೆಗೆ ವಿದ್ಯುಕ್ತವಾಗಿ ಚಾಲನೆಗೊಂಡ ರಾಜ್ಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಆವಿಷ್ಕಾರ್-19. ಸಮಾರಂಭಕಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಅವರು ಕೈಗಾರಿಕಾ ಕ್ಷೇತ್ರ ವಿಕಸನದ ಸ್ಥೂಲ ಚಿತ್ರಣವನ್ನು ನೀಡಿದರು. ನೂತನ ತಂತ್ರಜ್ಞಾನವು ಕೈಗಾರಿಕಾ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ತರಬಹುದಾದ ಬದಲಾವಣೆಗಳನ್ನು ವಿವರಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಪುಣೆಯ 5 ಎ.ಎಮ್ ವೆಂಚಸರ್್ ಸಂಸ್ಥೆಯ ಸಿ ಐ ಒ ಪಂಕಜ ಮಿತ್ತಲ್ ಅವರು ಕಾರ್ಯಕ್ರಮದ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಎಸ್ ಸಂಸ್ಥೆಯ ಮತ್ತು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಆರ್ ಕೆ ಬೆಳಗಾಂಕರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಆವಿಷ್ಕಾರದಂಥ ಸೃಜನಾತ್ಮಕ ಚಟುವಟಿಕೆಗಳಲ್ಲಿ ವಿದ್ಯಾಥರ್ಿಗಳು ತಮ್ಮನ್ನು ತೊಡಗಿಸಿಕೊಂಡು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ನುಡಿದರು.
ಸ್ವಾಗತ ಭಾಷಣ ಮಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ ವಿ ಕಟ್ಟಿಯವರು 12 ವರ್ಷಗಳಿಂದ ಆವಿಷ್ಕಾರ ಉತ್ಸವ ಸಾಗಿ ಬಂದ ಪರಿಯನ್ನು ವಿವರಿಸಿದರು. ವಿದ್ಯಾಥರ್ಿಗಳ ಕೌಶಲ್ಯಾಭಿವೃದ್ಧಿಗೆ ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳಾದ ಇ-ಯಂತ್ರ ಪ್ರಯೋಗಾಲಯ, ವೆಲ್ಡಿಂಗ್ ರಿಸರ್ಚ ಸೆಂಟರ್, ನೈನ್ ಸೆಂಟರ್, ಸ್ಪೋಕನ್ ಟ್ಯುಟೋರಿಯಲ್ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಆವಿಷ್ಕಾರ ಸಂಚಾಲಕ ಪ್ರೊ. ಆರ್ ಎನ್ ಪಾಟೀಲರವರು ಆವಿಷ್ಕಾರ-19ರ ಕಿರು ಚಿತ್ರಣವನ್ನು ನೀಡಿದರು. ಪ್ರೊ.ಮಂಜುನಾಥ ಡಿ ವಂದಿಸಿದರು. ವಿದ್ಯಾಥರ್ಿಗಳಾದ ಸುಷ್ಮಾ ಕೆ ಮತ್ತು ಮನನ್ ಡಿ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ತಾಂತ್ರಿಕ ಉತ್ಸವದಲ್ಲಿ ತಾಂತ್ರಿಕ ಪ್ರಬಂಧ ಮಂಡನೆ, ರೋಬೋಟ್ ರೇಸ್, ಕಟ್ಟಡ ಮಾದರಿ ನಿಮರ್ಾಣ ಮುಂತಾದ ಸ್ಪಧರ್ೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಇಂಜನಿಯರಿಂಗ್ ಕಾಲೇಜುಗಳ 250ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದಾರೆ.