ಅಕ್ಟೋಬರ್ 25, 26ರಂದು ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ

ಅಕ್ಟೋಬರ್ 25, 26ರಂದು ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ State level table tennis tournament on 25th and 26th October

ಅಕ್ಟೋಬರ್ 25, 26ರಂದು ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ  

ಬಳ್ಳಾರಿ  17: ಸುವರ್ಣ ಬಳ್ಳಾರಿ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್  ತಿಂಗಳು 25 ಮತ್ತು 26ರಂದು ಬಳ್ಳಾರಿಯ ಎಸ್‌ಪಿ ಸರ್ಕಲ್ ಹತ್ತಿರ ಇರುವ ಜಿಮ್ಕಾನದಲ್ಲಿ  ರಾಜ್ಯಮಟ್ಟದ  ವೆಟರ್ನಸ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟೆನ್ನಿಸ್ ತರಬೇತುದಾರ ಶಿವಾನಂದ ತಿಳಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು,  

ಈ ಪಂದ್ಯಾವಳಿಯಲ್ಲಿ 40 ರಿಂದ 88 ವರ್ಷದ ಪುರುಷ ಮತ್ತು ಮಹಿಳೆಯರು ಪ್ರತ್ಯೇಕವಾಗಿ ಪಂದ್ಯಗಳನ್ನು ನಡೆಸಲಾಗುತ್ತದೆ, ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಅಕ್ಟೋಬರ್ 21ರ ಸಂಜೆ 5:00 ಒಳಗೆ ಸುವರ್ಣ ಬಳ್ಳಾರಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ತರಬೇತುದಾರ ಶಿವನಂದ ಅವರ ಮೊಬೈಲ್ ಸಂಖ್ಯೆ 810530 4949 ಸಂಪರ್ಕಿಸಬಹುದು.  

ಈ ಪಂದ್ಯಾವಳಿಯು ಅಕ್ಟೋಬರ್ 25 ರಂದು ಮುಂಜಾನೆ 9:00 ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳುವುದು. ಈ  ಪಂದ್ಯಾವಳಿಯನ್ನು  ಕೋಆರ್ಡಿನೇಟರ್ಸ್‌ ಗಳಾದ ಜಗದೀಶ್ ಬಿದರ ಕೋಟಿ ಶಿವಕುಮಾರ್ ಎಂ ಸಂದೀಪ್ ಕೆಎನ್ ಉದಯಶಂಕರ್ ರಾವ್ ಗೋಪಿನಾಥ್ ಡಿಪಿ ನಡೆಸಿಕೊಡುವರು. 25ರಂದು ಶನಿವಾರ60 ವರ್ಷದ ಮೇಲ್ಪಟ್ಟ ಮಹಿಳೆ ಮತ್ತು ಪುರುಷರು ಸಿಂಗಲ್ ಮತ್ತು ಡಬಲ್ಸ್‌  ಪಂದ್ಯಗಳು ನಡೆಯುವವು.  

6ರಂದು ಭಾನುವಾರ 40 ವರ್ಷ ಮೇಲ್ಪಟ್ಟ ಪುರುಷರ ಓಪನ್ ಡಬಲ್ಸ್‌ ಪಂದ್ಯಾವಳಿ ನಡೆಯುವುದು. ಓಪನ್ ಡಬಲ್ಸ್‌ ಪಂದ್ಯಾವಳಿಯಲ್ಲಿ ಭಾಗವಹಿಸುವರು , ತಮ್ಮ ಸಹಪಾಠಿ ಹೆಸರನ್ನು ಉದಯಶಂಕರ್ ರಾವ್ 94802 35091 ಇವರಿಗೆ ತಿಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪಂದ್ಯದ ಆಯೋಜಕರನ್ನು (810530 4949) ಸಂಪರ್ಕಿಸಬಹುದು.