ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಜರುಗಿದ ರಾಜ್ಯಮಟ್ಟದ ನೃತ್ಯಕಲಾ ಸ್ಪರ್ಧೆ
State level dance competition organized by Karnataka State Writers Association
ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಜರುಗಿದ ರಾಜ್ಯಮಟ್ಟದ ನೃತ್ಯಕಲಾ ಸ್ಪರ್ಧೆ
ಗದಗ 14 :- ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪ್ರತಿಷ್ಠಿತ ಸಾಂಸೃತಿಕ ಸೈಕ್ಷಣಿಕ, ಮತ್ತು ಸಾಮಾಜಿಕಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಇದೇ ದಿನಾಂಕ 14/09/2025 ರಂದು ರಾಜ್ಯ ಮಟ್ಟದ ನೃತ್ಯಕಲಾ ಸ್ಪರ್ಧೆ ಮಾಲಿಕೆ -10 ಶೀರ್ಷಿಕೆ ಅಡಿಯಲ್ಲಿ ನಾಡಿನ ಸಂಪ್ರದಾಯಬದ್ದ ಜನಪದ ನೃತ್ಯ ವಿಷಯದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು. ಈ ಒಂದು ಅವಿಸ್ಮರಣೀಯ ವಿಶಿಷ್ಟ ನೈಪುಣ್ಯತೆಯನ್ನು ಹೊಂದಿರುವ ಕಲಾವಿದರನ್ನು ಗುರುತಿಸುವ ನೃತ್ಯ ಕಲಾ ಸ್ಪರ್ಧೆಯಲ್ಲಿ ಸಮಸ್ತ ರಾಜ್ಯಾದ್ಯೇಂತ ಅಷ್ಟೇ ಅಲ್ಲದೇ ಅಂತರಾಜ್ಯ ಕಲಾವಿದರು ಭಾಗವಹಿಸಿದ್ದರು.
ಇಂದು ಜರುಗಿದ ನೃತ್ಯ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಬೆಂಗಳೂರಿನ ತಲಘಟ್ಟಪುರದ ನರ್ತನ ಶಾಲೆ ಅಕ್ಯಾಡಮಿ ಟ್ರಸ್ಟ್ ನ ದೃತನ್ಯಾ ದ್ವಿತೀಯ ಸ್ಥಾನದಲ್ಲಿ ಬೆಂಗಳೂರಿನ ತಲಘಟ್ಟಪುರದ ನರ್ತನ ಶಾಲೆ ಅಕ್ಯಾಡಮಿ ಟ್ರಸ್ಟ್ ನ ನೈನಿತಾ ತೃತೀಯ ಸ್ಥಾನದಲ್ಲಿ ದಾವಣಗೆರೆಯ ನಮನ ಅಕ್ಯಾಡಮಿಯ ಲಕ್ಷಯ ಕೆ ವ್ಹಿ, ಹಾಗೂ ಕುಂದಾಪುರದ ರಕ್ಷತ ಆಚಾರ್ ಕ್ರಮವಾಗಿ ವಿಜೇತರಾಗಿರುವರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ. ಇದರ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಯವರು ಪ್ರತಿವಾರವು ಗಾಯನ ಸ್ಪರ್ಧೆ, ಕಾವ್ಯ ಸ್ಪರ್ದೆ ನೃತ್ಯ ಸ್ಪರ್ಧೆ ನಮ್ಮ ಸಂಘದ ವತಿಯಿಂದ ನಡೆಯುತ್ತದೆ. ಎಂದು ತಿಳಿಸುತ್ತಾ ವಿಶಿಷ್ಟ ನೃತ್ಯ ಕಲೆಯನ್ನು ಪ್ರದರ್ಶಿಸುವ ಮೂಲಕ ವಿಜೇತರಾಗಿ ಪ್ರಶಸ್ತಿ ಪ್ರಧಾನ ಪ್ರಮಾಣ ಪತ್ರ ಪಡೆದ ಸಮಸ್ತ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು. ಶ್ರೀಮತಿ ವಿದ್ಯಾ ಕೆ ಮೂಡಿಗೇರಿ ಯವರು ಇಂದಿನ ನೃತ್ಯ ಕಲಾ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 