ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ: ಎ.ಬಿ.ಸಾಲಕ್ಕಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ: ಎ.ಬಿ.ಸಾಲಕ್ಕಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ  State level cycling competition: Students of A.B. Salakki College selected

           ದೇವರಹಿಪ್ಪರಗಿ 18: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ, ಪದವಿ ಪೂರ್ವ ಇಲಾಖೆ ವಿಜಯಪುರ ಹಾಗೂ ಕೋನಿಕಾ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ 2025/26ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬಿ.ಎಲ್‌.ಡಿ.ಈ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯರರಾದ ವ್ಹಿ.ಜಿ. ಹೂನ್ನಳ್ಳಿ ತಿಳಿಸಿದ್ದಾರೆ.  

          ಪಟ್ಟಣದ ಎ.ಬಿ.ಸಾಲಕ್ಕಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹಣಮಂತ ಹುಲ್ಲಿಕೇರಿ 10ಕಿ.ಮೀ ಟಿಟಿ ಯಲ್ಲಿ ಪ್ರಥಮ ಹಾಗೂ 02ಕಿ.ಮೀ ಐಪಿ ನಲ್ಲಿ ತೃತೀಯ ಹಾಗೂ ಬಾಲಕಿಯರ ವಿಭಾಗದ 01ಕಿ.ಮೀ ಟಿಟಿಯಲ್ಲಿ  ಕುಮಾರಿ ಐಸು ಚವ್ಹಾಣ ದ್ವೀತಿಯ ಸ್ಥಾನ ಹಾಗೂ 10ಕಿ.ಮೀ ಟಿಟಿ ಯಲ್ಲಿ ತೃತೀಯ ಸ್ಥಾನಗಳಿಸಿ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಸಾಧನೆಗೆ ಬಿ. ಎಲ್‌.ಡಿ.ಈ ಸಂಸ್ಥೆಯ ಅದ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು ಹಾಗೂ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದಾರೆ ಎಂದು ದೈಹಿಕ ಉಪನ್ಯಾಸಕರಾದ ಕೆ.ವ್ಹಿ. ಒಡೆಯರ್ ತಿಳಿಸಿದ್ದಾರೆ.