ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಅಧಿಕಾರಿಗಳ ಮೇಲೆ ಆರೋಪ
Standing Committee Chairman Honnappa Shirahatti alleges against officials
ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಅಧಿಕಾರಿಗಳ ಮೇಲೆ ಆರೋಪ
ಶಿರಹಟ್ಟಿ 06: ಇಲ್ಲಿಯ ಪಟ್ಟಣ ಪಂಚಾಯತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತುಕೊಡುತ್ತಿಲ್ಲ. ಅವರುಆಡಿದ್ದೇ ಆಟ, ನಡೆದಿದ್ದೇದಾರಿಆಗಿದೆಎಂದು ಸ್ಥಾಯಿ ಸಮಿತಿಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಅವರು ಆರೋಪಿಸಿದರು. ಅವರು ಮಂಗಳವಾರ ಹಳೇಯ ಪಟ್ಟಣ ಪಂಚಾಯತಿಕಾರ್ಯಾಲಯದಲ್ಲಿ ಪಟ್ಟಣ ಪಂಚಾಯತ್‌ಅಧ್ಯಕ್ಷೆ ದೇವಕ್ಕಗುಡಿಮನಿ ಇವರಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ, ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿಅನುಮೋದನೆ ನಿಡದೇ ಹಾಗೂ ಠರಾವು ಮಾಡದೇಇದ್ದರೂಈಗಿರುವ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಸವಿತಾತಾಮ್ರೆಅವರು 12 ಉತಾರಗಳನ್ನು ನೀಡಿದ್ದು, ನಮ್ಮ ಗಮನಕ್ಕೆ ತಡವಾಗಿ ಬೆಳಿಕಿಗೆ ಬಂದಿದೆ. ಈ ಉತಾರಗಳನ್ನು ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆಎಂದು ಹೇಳಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿಅಧ್ಯಕ್ಷ ಹಾಗೂ ಸದಸ್ಯರ ಗಮನಕ್ಕೆ ಬಾರದೇ ಪಂಚಾಯತಿಕಾರ್ಯಾಲಯದಲ್ಲಿ ನಮ್ಮಅನುತಿಯಿಲ್ಲದೆ ಕಡತಗಳ ವಿಲೇವಾರಿ ಹಾಗೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನೂತನ ಬಡಾವಣೆಗಳ ನಿವೇಶನಗಳ ಉತಾರವನ್ನು ನೀಡುವ ಪ್ರಕ್ರಿಯೆಎಗ್ಗಿಲ್ಲದೇ ಸಾಗಿದೆ.ಎಲ್ಲಚುನಾಯಿತ ಸದಸ್ಯರುಗಳು ನೆಪ ಮಾತ್ರಕ್ಕೆಇದ್ದು, ಕೆಲ ಅಧಿಕಾರಿಗಳ ಕಪಿಮುಷ್ಟಿಯಲ್ಲಿ ಪಂಚಾಯ್ತಿ ಕಾರ್ಯನಿರ್ವಹಿಸುತ್ತಿದೆ.ಎಂದುಆಕ್ರೋಶ ವ್ಯಕ್ತಪಡಿಸಿದರು. ವಾಡ್ ಸಂಖ್ಯೆ 11 ಹಾಗೂ 18 ರಲ್ಲಿ ಮೊಹರಮ್ ಮಣ್ಣನ್ನುರಸ್ತೆಗೆ ಹಾಕಲಾಗಿದೆಎಂದುಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬೋಗಸ್ ಬಿಲ್ ತಗೆಯಲಾಗಿದೆ.ಕಡಿಮೆಟ್ರಿಪ್ ಮಣ್ಣನ್ನು ಹಾಕಿ ನಿಗದಿತಕ್ಕಿಂತ ಹೆಚ್ಚು ಹಣವನ್ನುತೆಗೆದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ.ಈ ಕುರಿತುತನಿಖೆಯಾಗಬೇಕುಎಂದುನಾಮನಿರ್ದೇಶಿತ ಸದಸ್ಯ ಸೋಮನಗೌಡ ಮರಿಗೌಡ ಹೇಳಿದರು. ಪಟ್ಟಣ ಅಭಿವೃದ್ದಿಗೆ ಪೂರಕವಾಗುವ ಪಂಚಾಯ್ತಿ ಸಾಮಾನ್ಯ ಸಭೆಗೆ ಪಂಚಾಯ್ತಿ ಪ್ರಮುಖ ಸಿಬ್ಬಂದಿಗಳು ಗೈರು ಹಾಜರಾಗುತ್ತಾರೆ.ಇದು ಹಲವಾರು ವರ್ಷಗಳಿಂದ ನಡೆಯುತ್ತಲೆ ಬಂದಿದೆ. ಪಟ್ಟಣ ಪಂಚಾಯ್ತಿಲ್ಲಿಕಾರ್ಯನಿರ್ವಹಿಸುವ ಮಂಜುನಾಥ ಮುಳಗುಂದ ಯಾವದೇ ಸಭೆಗೆ ಬರುವದಿಲ್ಲ. ಬಂದರೆಅವರ ಬಂಡವಾಳ ಬಯಲಿಗೆ ಬೀಳುತ್ತದೆ ಎನ್ನುವ ಭಯಇದೆಅವರಿಗಿದೆಎಂದು ಸದಸ್ಯರುಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಮಧ್ಯಪ್ರವೇಶಿದ ಮುಖ್ಯಾಧಿಕಾರಿಸವಿತಾ ಕಳೆದ 20 ದಿಗಳಿಂದ ಮಂಜುನಾತ ಮುಳಗುಂದ ಇವರುಯಾವುದೇಅನುಮತಿ ಪಡೆಯದೇಕಚೇರಿಗೆ ಬಂದಿಲ್ಲ ಅವರಿಗೆಅವರಿಗೆ ನೋಟಿಸ್ ನೀಡಲಾಗಿದೆಎಂದರು. ಮಂಜುನಾಥ ಮುಳಗುಂದ ಇವರು ಸಾಮಾನ್ಯಸಭೆಗೆ ಬಂದಿಲ್ಲ. ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಮತ್ತೊಮ್ಮೆಕರೆಯಬೇಕು.ಅಂದಿನ ಸಭೆಯಲ್ಲಿ ಪಂಚಾಯ್ತಿ ಕಾರ್ಯಾಲಯದಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು.ಸಿಬ್ಬಂದಿ ಇಲ್ಲದೇಇದ್ದರೆ ನಮಗೆ ಮಾಹಿತಿ ನೀಡುವವರುಯಾರು.ಆದ್ದರಿಂದ ನಿಗಧಿತ ಸಮಯದಲ್ಲಿ ಸಾಮಾನ್ಯ ಸಭೆಕರೆಯಬೇಕು. ಸಿಬ್ಬಂದಿಗಳ ಗೈರಿಹಾಜರಿಕಾರಣಕ್ಕಾಗಿ ಇಂದಿನ ಸಭೆಯನ್ನು ಇಷ್ಟಕ್ಕೆ ಮೊಟಕುಗೊಳಸಲಾಗುವದು ಎಂದುಎಲ್ಲ ಸದಸ್ಯರುಒಕ್ಕೊರಲಿನಿಂದ ಒತ್ತಾಯಿಸಿ ಹೊರನಡೆದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆದೇವಕ್ಕಗುಡಿಮನಿ, ಉಪಾಧ್ಯಕ್ಷೆ ನೀಲಮ್ಮ ಹುಬ್ಬಳ್ಳಿ, ಸದಸ್ಯರುಗಳಾದ ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಅಶ್ರತ್‌ಡಾಲಾಯತ, ಪರಮೇಶ ಪರಬ, ಅನಿತಾ ಬಾರ್ಬರ, ಆದರಳ್ಳಿ, ಮಂಜುನಾಥಗಂಟಿ, ರಾಜುಕಪ್ಪತ್ತನವರ, ಅಲ್ಲಾಭಕ್ಷಿ ನಗಾರಿ ಹಾಗೂಇನ್ನಿತರರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 