ಶಿರಹಟ್ಟಿ ತಾಲೂಕನಲ್ಲಿ ಗೋವುಗಳ ಮಾರಣಹೋಮ ಪೊಲೀಸ್ ಇಲಾಖೆ ಜಾಣಕುರುಡು ನೀತಿ :ಶ್ರೀರಾಮ ಸೇನೆ ಆರೋಪ
Sriram Sene alleges that the police department is acting in a blind and ignorant manner in the kill
ಗದಗ 03: ಜಿಲ್ಲೆಯ ಶಿರಹಟ್ಟಿ ತಾಲೂಕನಲ್ಲಿ ಪ್ರತಿನಿತ್ಯ ನೂರಾರು ಗೋವುಗಳು ಆಕ್ರಮವಾಗಿ ಕಗ್ಗೋಲೆಯಾಗಿ ಜೀವ ಕಳೆದುಕೊಳ್ಳುತ್ತಿದ್ದರೂ ಸಹ ತಾಲೂಕಾಡಳಿತ,ಪೊಲೀಸ್ ಇಲಾಖೆ ಜಾಣ ಕುರುಡು ನೀತಿ ಅನುಸರಿಸುತ್ತಿದೆಯೆಂದು ಶ್ರೀರಾಮ ಸೇನೆ ರಾಜ್ಯ ಶಾರೀರಿಕ ಪ್ರಮುಖ ಮಹೇಶ ರೋಖಡೆ ಆರೋಪಿಸಿದರು.
ಶಿರಹಟ್ಟಿ ತಹಸೀಲ್ದಾರ ಕಚೇರಿ ಮುಂದೆ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ದೌರ್ಜನ್ಯ ವಿರೋಧಿಸಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿರಹಟ್ಟಿಯಲ್ಲಿ ಯಾವದೇ ಕಸಾಯಿ ಖಾನೆಗಳಿಲ್ಲ. ಪ್ರತಿನಿತ್ಯ ವಿವಿಧ ಮಸೀದೆಗಳಲ್ಲಿ ಗೋವುಗಳನ್ನು ಆಕ್ರಮವಾಗಿ ಕಗ್ಗೋಲೆ ಮಾಡಿ ಸೇವಿಸಲಾಗುತ್ತಿದೆ.ಈ ಸಂಗತಿ ಶಿರಹಟ್ಟಿ ತಾಲೂಕಾಡಳಿತ,ಪೊಲೀಸ್ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಇದುವರೆಗೆ ಒಂದೇ ಒಂದು ಪ್ರಕರಣ ದಾಖಲಿಸಲಾಗಿಲ್ಲವೆಂದು ಆರೋಪಿಸಿದರು.
ಪ್ರತಿನಿತ್ಯ ಮಸೀದೆಗಳಲ್ಲಿ ಗೋವುಗಳನ್ನು ಆಕ್ರಮವಾಗಿ ವಧೆ ಮಾಡಿ ಸೇವನೆ ಮಾಡುತ್ತಿರುವ ಒಂದು ನಿರ್ದಿಷ್ಟ ವರ್ಗದ ಜನತೆಗೆ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಪರೋಕ್ಷವಾಗಿ,ಅಪರೋಕ್ಷವಾಗಿ ಸಹಾಯ,ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಮಸೀದೆಗಳಲ್ಲಿ ಗೋವುಗಳ ವಧೆ ಯಥಾವತ್ತಾಗಿ ನಡೆದಿದೆಯೆಂದು ಆರೋಪಿಸಿದರು.
ರಾಜಕೀಯ ಪಕ್ಷಗಳ ನಾಯಕರುಗಳು ಒಂದು ನಿರ್ದಿಷ್ಟ ವರ್ಗದ ಜನತೆಯನ್ನು ಓಲೈಸುವದನ್ನು ಕೇಳಿದ್ದೇವೆ. ಸರಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳಂತೆ ಒಂದು ನಿರ್ದಿಷ್ಟ ವರ್ಗವನ್ನು ಓಲೈಸುತ್ತಿರುವದು ವಿಚಿತ್ರವಾಗಿದೆ. ಯಾರ ಅಣತಿಯಂತೆ ಈ ಪಿಎಸ್‌ಐ ಈರಣ್ಣ ರಿತ್ತಿ ಗೋವುಗಳ ಹತ್ಯೆ ನಡೆಯುತ್ತಿದ್ದರೂ ಮೌನವಾಗಿ ಒಂದು ನಿರ್ದಿಷ್ಟ ವರ್ಗದ ಜನತೆಯನ್ನು ಓಲೈಸುತ್ತಿದ್ದಾರೆಂಬ ಸಂಗತಿಯ ಬಗ್ಗೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಕೇವಲ ಹಿಂದೂಗಳ ಆರಾಧ್ಯ ದೈವವಾಗಿರುವ ಗೋವುಗಳನ್ನು ಆಕ್ರಮವಾಗಿ ಮಸೀದೆಗಳಲ್ಲಿ ರಾಜಾರೋಷವಾಗಿ ಹತ್ಯೆ ಮಾಡಿದಾಗಲೂ ಸುಮ್ಮನಿರುವದೇ ಹಿಂದೂ ಮುಸ್ಲೀಂ ಭಾವೈಕ್ಯತೆಯೇ?. ಮುಸ್ಲೀಂರಿಗೂ ಹಿಂದುಗಳು ಆರಾಧಿಸುವ ಗೋವನ್ನು ಕಡಿಯದೇ ಗೌರವಿಸಬೇಕೆಂಬ ಕನಿಷ್ಠ ಸಾಮಾನ್ಯ ಜ್ಞಾನ ಹೊಂದುವದು ಇಂದಿನ ಅವಶ್ಯಕತೆಯಾಗಿದೆಯೆಂದು ಹೇಳಿದರು.
ಪ್ರಸ್ತುತ ಶಿರಹಟ್ಟಿ ಪಿಎಸ್‌ಐ ಆಗಿರುವ ಈರಣ್ಣ ರಿತ್ತಿ ಈ ಹಿಂದೆ ಲಕ್ಷ್ಮೇಶ್ವರದಲ್ಲಿ ಪಿಎಸ್‌ಐ ಆಗಿದ್ದ ಸಂದರ್ಭದಲ್ಲಿಯೂ ಮುಸ್ಲೀಂರನ್ನು ಓಲೈಸಲು ಮುಗ್ಧ ಹಿಂದೂ ಗೋಸಾವಿ ಜನಾಂಗದ ಮಹಿಳೆಯರು,ಯುವಕರ ಮೇಲೆ ಹಲ್ಲೆ ನಡೆಸಿದ್ದರು.ವಿವಿಧ ಹಿಂದು ಸಂಘಟನೆಗಳು ಪಿಎಸ್‌ಐ ಈರಣ್ಣ ರಿತ್ತಿ ನಡೆಯನ್ನು ಖಂಡಿಸಿ ಧರಣಿ ಸತ್ಯಾಗ್ರಹ,ಉಪವಾಸ ಸತ್ಯಾಗ್ರಹ,ಲಕ್ಷ್ಮೇಶ್ವರ ಬಂದ್ ನಡೆಸಿದಾಗ ಎಚ್ಚೆತ್ತ ಪೊಲೀಸ್ ಇಲಾಖೆ ಈರಣ್ಣ ರಿತ್ತಿಯನ್ನು ಬೆಳಗಾಂವಿಗೆ ವರ್ಗಾಯಿಸಿತ್ತು.ಪ್ರಸ್ತುತ ಈರಣ್ಣ ರಿತ್ತಿ ಈ ಹಿಂದೆ ತಮ್ಮ ವಿರುದ್ಧ ಧರಣಿ,ಉಪವಾಸ ಸತ್ಯಾಗ್ರಹ,ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದ ಹಿಂದುಗಳು,ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಸೇಡು ತೀರಿಸಿಕೊಳ್ಳಲು ಪುನ: ಶಿರಹಟ್ಟಿಗೆ ಆಗಮಿಸಿ ಅಧಿಕಾರವಹಿಸಿಕೊಂಡು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿದರು.
ಹಿಂದೂ ಸಂಘಟನೆಗಳ ಮೇಲೆ ಸೇಡು ತೀರಿಸಿಕೊಳ್ಳಲು ಪಿಎಸ್‌ಐ ಈರಣ್ಣ ರಿತ್ತಿ ಮೊದಲ ಹಂತದಲ್ಲಿ ಜಮೀನಿನ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸೋಮಪ್ಪ ಲಮಾಣಿಯನ್ನು ಹಿಡಿದು ಪೊಲೀಸ್ ಠಾಣೆಗೆ ಕರೆ ತಂದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.ಪೊಲೀಸರು ನಡೆಸಿದ ಹಲ್ಲೆಯಿಂದಾಗಿ ಸೋಮಪ್ಪ ಲಮಾಣಿಯ ಮೂತ್ರಕೋಶಕ್ಕೆ ಬಾವು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಕೂಡಲೇ ಸೇವೆಯಿಂದ ಅಮಾನತ್‌ಗೋಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ, ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ,ಮಹೇಶ ಹೆಬಸೂರ, ಶಿವಯೋಗಿ ಹಿರೇಮಠ, ಕಿರಣ ಹಿರೇಮಠ, ವೆಂಕಟೇಶ ದೊಡ್ಡಮನಿ, ಅಭಿಲಾಷ ಗುಜಮಾಗಡಿ, ಲಕ್ಷ್ಮಣ ಗೌಡ, ರಮೇಶ ವಾಲ್ಮೀಕಿ, ಈರ್ಪ ವಾಲ್ಮೀಕಿ, ಪ್ರಮೋದ ರಜಪೂತ, ಕುಮಾರ ಮಿಟ್ಟಿಮಠ,ಹುಲಿಗೆಪ್ಪ ವಾಲ್ಮೀಕಿ, ಈರಣ್ಣ ಗಾಣಿಗೇರ, ಪರಶುರಾಮ ಆಡೀನ, ಮಂಜುನಾಥ ಸಜ್ಜನ, ಆನಂದ ಅರಿಕೇರಿ, ಬಸವರಾಜ ವೆಂಕಟಾಪೂರ,ಮೈಲಾರಿ ದಂಡಿನ,ಪರಶುರಾಮ ಡೊಂಕನಹಳ್ಳಿ, ರಮೇಶ ಲಮಾಣಿ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 