ಶ್ರೀಮಂತ ಪಾಟೀಲ ಅವರ 70 ನೇ ಹುಟ್ಟುಹಬ್ಬ ಉಚಿತ ಆರೋಗ್ಯ, ನೇತ್ರಚಿಕಿತ್ಸಾ ಮತ್ತು ರಕ್ತದಾನ ಶಿಬಿರ
ಕಾಗವಾಡ 31 : ನಾನು ಗುಡಿ ಗುಂಡಾರಗಳಲ್ಲಿ ದೇವರನ್ನು ಹುಡುಕುವದಿಲ್ಲ. ಬದಲಾಗಿ ಬಡವರ, ದೀನ-ದಲಿತರ ಹಾಗೂ ರೈತರ ಸೇವೆಯಲ್ಲಿ ದೇವರನ್ನು ಕಾಣುತ್ತೇನೆ. ನನಗೆ ಅಧಿಕಾರವಿರಲಿ, ಇಲ್ಲದಿರಲಿ ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧನಾಗಿರುತ್ತೇನೆಂದು ಮಾಜಿ ಸಚಿವ ಹಾಗೂ ಕೆಂಪವಾಡ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ (ತಾತ್ಯಾ) ಪಾಟೀಲ ಹೇಳಿದ್ದಾರೆ. ಶುಕ್ರವಾರ ದಿ. 31 ರಂದು ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಕಾರ್ಖಾನೆಯ ಆವರಣದಲ್ಲಿ ತಮ್ಮ 70 ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಮತ್ತು ಸಾಂಗಲಿಯ ಉಷಃಕಾಲ ಅಭಿನವ ಆಸ್ಪತ್ರೆ, ನಂದಾದೀಪ ನೇತ್ರಾಲಯ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಮಹಾಆರೋಗ್ಯ ತಪಾಸನೆ, ರಕ್ತದಾನ ಮತ್ತು ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ, ನಂತರ ಅಭಿಮಾನಿಗಳು, ಹಿತೈಷಿಗಳು, ಕಾರ್ಖಾನೆಯ ಸಿಬ್ಬಂದಿ ವರ್ಗದವರಿಂದ ಸನ್ಮಾನ ಸ್ವೀಕರಿಸಿ, ಮಾತನಾಡುತ್ತಿದ್ದರು. ಕ್ಷೇತ್ರದ ಜನರ ಹಾಗೂ ಕಾರ್ಖಾನೆಯ ಸಿಬ್ಬಂದಿಯವರ ಆಗ್ರಹದ ಮೇರೆಗೆ ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು, ಸಂತೋಶವೇ ನನ್ನ ಸಂತೋಶವಾಗಿದೆ. ಹುಟ್ಟು ಹಬ್ಬದದಂದು ಕ್ಷೇತ್ರದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಕಳೆದ ಮೂರಾ್ನಲ್ಕು ವರ್ಷಗಳಿಂದ ಇದನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ. ಇದರಿಂದ ಕ್ಷೇತ್ರದ ಜನರಿಗೆ ಸಾಕಷ್ಟು ಅನಕೂಲವಾಗಲಿದೆ ಎಂದರು. ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭಗೊಂಡ ಉಚಿತ ಮಹಾ ಆರೋಗ್ಯ ತಪಾಸನೆ ಶಿಬಿರದಲ್ಲಿ ಸಾವಿರಾರು ಜನರು ತಮ್ಮ ಆರೋಗ್ಯದ ತಪಾಸನೆ ಮಾಡಿಸಿಕೊಂಡರು. ಸುಮಾರು 500 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ನಾಳೆ ದಿ. 01 ರಂದು ಸಹ ಈ ಆರೋಗ್ಯ ಶಿಬಿರವು ಮುಂದುವರೆಯಲಿದೆ. ಈ ಸಮಯದಲ್ಲಿ ಅಥಣಿ ಶುಗರ್ಸ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ, ಸುಶಾಂತ ಪಾಟೀಲ, ಮುಖಂಡರಾದ ಅಪ್ಪಾಸಾಬ ಅವತಾಡೆ, ನಾನಾಸಾಬ ಅವತಾಡೆ, ತಮ್ಮಣ್ಣಾ ಪಾರಶೆಟ್ಟಿ, ಅರುಣ ಗಣೇಶವಾಡಿ, ಶಿವಾನಂದ ಪಾಟೀಲ, ಆರ್.ಎಂ. ಪಾಟೀಲ, ನಿಖಿಲ ಪಾಟೀಲ, ಈಶ್ವರ ಕುಂಭಾರೆ, ಮುರಗೆಪ್ಪಾ ಮಗದುಮ್ಮ, ರಾಮ ಮಗದುಮ್ಮ, ದಾದಾ ಅವಳೆ, ಬಾಹುಸಾಬ ಜಾಧವ, ಸಂಜಯ ಜಾಧವ, ಬಾಳಕೃಷ್ಣ ಚವ್ಹಾನ, ರಾಜೇಂದ್ರ ಪೋತದಾರ, ದಾದಾ ಪಾಟೀಲ ಸೇರಿದಂತೆ ಶ್ರೀಮಂತ ಪಾಟೀಲ ಅಭಿಮಾನಿಗಳು ಉಪಸ್ಥಿತರಿದ್ದರು.