ಶ್ರೀ ಸಿದ್ದೇಶ್ವರ ಜಾತ್ರೆಯು ಏಪ್ರಿಲ್ 11 ರಿಂದ ಏಪ್ರಿಲ್ 13 ರವರೆಗೆ
Sri Siddeshwara Fair is from April 11 to April 13
ಲೋಕದರ್ಶನ ವರದಿ
ಕಮತೇನಟ್ಟಿ 09: ಚಿಕ್ಕೋಡಿ ತಾಲೂಕಿನ ಕಮತೇನಟ್ಟಿ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರೆಯು ಏಪ್ರಿಲ್ 11 ರಿಂದ ಪ್ರಾರಂಭವಾಗಿ ಏಪ್ರಿಲ್ 13 ರವರೆಗೆ ಜರುಗಲಿದೆ. ಏಪ್ರಿಲ್ 11 ರಂದು ಹಂದರ ಹಾಗೂ ರಾತ್ರಿ 9.30 ಘಂಟೆಗೆ ವಾಲಗ ಕೂಡುವುದು. ಏ.12ರಂದು ಮುಂಜಾನೆ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ ಮಹಾಪ್ರಸಾದ ಮತ್ತು ರಾತ್ರಿ 09.00 ಗಂಟೆಗೆ ರಾಧಾಕೃಷ್ಣ ಬೈಲಾಟ ಮತ್ತು ರಾತ್ರಿ 10.00 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವುದು. ಏ.13ರಂದು ಸಾಯಂಕಾಲ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ ಹಾಗೂ ರಾತ್ರಿ 10ಗಂಟೆಗೆ ಶ್ರೀ ಸಿದ್ದೇಶ್ವರ ನವತರುಣ ನಾಟ್ಯ ಸಂಘ ಕಲಾವಿದರ ಬಳಗ ಕಮತೇನಟ್ಟಿ ಇವರಿಂದ ಭವ್ಯರಂಗ ಮಂಟಪದಲ್ಲಿ ಶ್ರೀಮಂತನ ದರ್ಪಕಕೆ ಸಿಡಿದೆದ್ದ ಶಿವಶಕ್ತಿ ಎಂಬ ಸಾಮಾಜಿಕ ನಾಟಕ ಜರುಗಲಿದೆ ಎಂದು ದೇವಸ್ಥಾನದ ಟ್ರಸ್ಟ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 